Published
6 months agoon
By
UNI Kannadaಬೆಂಗಳೂರು: ಜನವರಿ 11(ಯು.ಎನ್.ಐ) ಸರಕಾರದ ಕೋವಿಡ್ ನಿಯಮವನ್ನೂ ಮೀರಿ ಪಾದಯಾತ್ರೆ ನಡೆಸಿರುವ ಕಾಂಗ್ರೆಸ್ ನಾಯಕರು ಮಾಡಿದ ತಪ್ಪಿಗಾಗಿ ನೀರಿನಲ್ಲಿ ಕಿವಿ ಹಿಡಿದು ಕುಳಿತು ದಮ್ಮಯ್ಯ ತಪ್ಪಾಯಿತೆಂದು ಜನರಲ್ಲಿ ಕ್ಷಮೆ ಕೇಳಬೇಕೆಂದು ಗೃಹ ಸಚಿವ ಆರಗ ಜ್ಞಾನೇಂದ್ರ ಆಗ್ರಹಿಸಿದ್ದಾರೆ.
ಕಾಂಗ್ರೆಸ್ನ ಮೇಕೆದಾಟು ಪಾದಯಾತ್ರೆ ವಿರೋಧಿಸಿ ನಗರದಲ್ಲಿಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಆರಗ ಜ್ಞಾನೇಂದ್ರ,ನಮಗೆ ಸಿಕ್ಕ ವರದಿ ಪ್ರಕಾರ 30ಜನ ಕಾಂಗ್ರೆಸ್ ನಾಯಕೆ ವಿರುದ್ಧ ಎಫ್ಐಆರ್ ದಾಖಲಾಗಿದೆ. ಎಫ್ ದಾಖಲಿಕೆ ಇಂದೂ ನಡೆಯಲಿದೆ. ನಿಯಮ ಉಲ್ಲಂಘಿಸಿದವರ ವಿರುದ್ದಸ ರಾಮನಗರ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ. ಪಾದಯಾತ್ರೆಗೆ ನಿಯಮ ಮೀರಲು ಮೊದಲು ಯಾರು ಕಾರಣಕರ್ತರೋ ಅವರ ವಿರುದ್ಧ ಮೊದಲು, ನಂತರ ಉಳಿದವರ ಮೇಲೆ ನಂತರ ಕಾನೂನು ಕ್ರಮ ಜರುಗಿಸಲಾಗುವುದು.ಇವರುಗಳಿಗೆ ದಂಡ ಹಾಕುವ ಪ್ರಕ್ರಿಯೆಯಲ್ಲಿ ಸರ್ಕಾರದ ವಿಳಂಬ ಮಾಡುವುದಿಲ್ಲ ಎಂದು ಎಚ್ಚರಿಸಿದರು.
ಕಾಂಗ್ರೆಸ್ನವರು ಮಾಡಬೇಕಾದ್ದು ಪಾದಯಾತ್ರೆ ಅಲ್ಲ. ನೀರಿನಲ್ಲಿ ಕಿವಿ ಹಿಡಿದು ಕುಳಿತು, ಜನರಲ್ಲಿ ದಮ್ಮಯ್ಯ ತಪ್ಪಾಯ್ತು ಎಂದಜ ಕ್ಷಮೆ ಕೇಳಬೇಕು. ಕೊರೊನಾ ಸಂದರ್ಭದಲ್ಲಿ ಇವರು ಈ ರೀತಿ ಮಾಡಬಾರದಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಾದಯಾತ್ರೆ ಮಾಡಲು ತಮಗೆ ಸರಕಾರದ ಅನುಮತಿ ಬೇಕಿಲ್ಲ ಎಂದಿದ್ದರು.
ನಾವು ಅಸಹಾಯಕರಲ್ಲ, ನಿರ್ಲಕ್ಷ್ಯ ಕೂಡ ಮಾಡಿಲ್ಲ.
ಒಂದು ರಾಜಕೀಯ ಪಕ್ಷವಾಗಿ ವಿರೋಧ ಮಾಡಿಯೇ ಮಾಡುತ್ತೆವೆಂದು ಹೋಗಿದ್ದಾರೆ.ಪೊಲೀಸ್ ಫೋರ್ಸ್ ಇದೆ,ಕ್ರಮ ಜರುಗಿಸುವುದಿಲ್ಲ ಅಂತಲ್ಲ.ಇದುಅದು ಮತ್ತೊಂದು ಘಟನೆಗೆ ಕಾರಣ ಆಗಬಾರದು ಎಂದು ಸೂಚ್ಯವಾಗಿ ಆರಗ ಹೇಳಿದರು.
ಪಾದಯಾತ್ರೆಯನ್ನು ಜನರೇ ವಿರೋಧಿಸುತ್ತಿದ್ದಾರೆ ಎಂದ ಆರಗ ಜ್ಞಾನೇಂದ್ರ, ಬೆಂಗಳೂರಿನಲ್ಲಿ ಈಗಾಗಲೇ ಹತ್ತು ಸಾವಿರ ಕೋವಿಡದ ಪ್ರಕರಣಗಳು ದಾಖಲಾಗಿವೆ. ಶ್ರಮಿಕ ವರ್ಗದವರು ಬಹಳಷ್ಟು ಕಷ್ಟ ಪಡುತ್ತಿದ್ದಾರೆ.ಕಾಂಗ್ರೆಸದ ನಾಯಕರೇ ಪಾದಯಾತ್ರೆಯಿಂದ ಬೆಂಗಳೂರಿಗೆ ವಾಪಸು ಬರುವುದನ್ನು ಜನರೇ ತಡೆಯಲು ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದರು.
ಕೋವಿಡ್ ಪ್ರಕಣಗಳು ಬೆಳಕಿಗೆ ಬರುತ್ತಿರುವುದು ಸುಳ್ಳು ಮಾಹಿತಿಯೆಂದು ಕಾಂಗ್ರೆಸ್ ನಾಯಕರು ಹೇಳಿಕೊಂಡು ಓಡಾಡುತ್ತಿದ್ದಾರೆ. ಸೋಂಕು ಮತ್ತೆ ಉಲ್ಬಣ ಆದರೆ ಅದಕ್ಕೆ ಕಾಂಗ್ರೆಸ್ ಪಕ್ಷದವರೇ ಕಾರಣ ಎಂದು ಆರೋಪಿಸಿದರು.
ಡಿ.ಕೆ.ಶಿವಕುಮಾರ್ ಮಾಸ್ಕ್ ಧರಿಸದೇ ಓಡಾಡುತ್ತಿದ್ದಾರೆ. ಇವರ ಜೀವ ಮುಖ್ಯ, ಆರೋಗ್ಯ ಮುಖ್ಯ.ಟೆಸ್ಟ್ ಮಾಡಲು ಹೋದ ಆರೋಗ್ಯ ಸಿಬ್ಬಂದಿಗಳನ್ನು ಗದರಿಸಿ ಕಳಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಜ್ವರ ಬಂದಿದೆ. ಯಾವ ರೀತಿಯ ಜ್ವರ ಎಂಬುದು ಗೊತ್ತಿಲ್ಲ.ಅವರು ಆರೋಗ್ಯವಾಗಿ ಇರಲೀ ಎಂಬುವುದೇ ನಮ್ಮ ಉದ್ದೇಶ ಎಂದು ಮತ್ತೆ ಮಾರ್ಮಿಕವಾಗಿ ಆರಗ ಹೇಳಿಕೆ ನೀಡಿದರು.
ಇಂಧನ ಇಲಾಖೆ: 1385 ಅಭ್ಯರ್ಥಿಗಳಿಗೆ ಏಕಕಾಲಕ್ಕೆ ನೇಮಕ ಆದೇಶ
ಮೈಶುಗರ್ ಕಾರ್ಖಾನೆ ಆಗಸ್ಟ್ನಲ್ಲಿ ಪುನಾರಂಭ!
ರಾಷ್ಟ್ರಪತಿ ಚುನಾವಣೆ: ದ್ರೌಪದಿ ಮುರ್ಮು ಅವರಿಗೆ ಜೆಡಿಎಸ್ ಬೆಂಬಲ
‘ಪ್ರತಿ ಹತ್ಯೆಯಲ್ಲೂ ಬಿಜೆಪಿ ಹೆಣದ ರಾಜಕೀಯ’ – ದಿನೇಶ್ ಗುಂಡೂರಾವ್
ರಾಜಸ್ಥಾನ ಹತ್ಯೆ: ಕಾಂಗ್ರೆಸ್ ಸರಕಾರ ವಜಾಗೊಳಿಸಲು ಕಟೀಲ್ ಆಗ್ರಹ
ರಾಜಸ್ಥಾನದಲ್ಲಿ ಟೈಲರ್ ಶಿರಚ್ಛೇದ: ಹತ್ಯೆ ಖಂಡಿಸಿದ ಎಚ್ಡಿಕೆ