Connect with us


      
ಅಪರಾಧ

ಮಗಳ ಕಪಾಳಕ್ಕೆ ಹೊಡೆದ ಶಿಕ್ಷಕ; ಶಾಲಾ ನಿರ್ದೇಶಕರ ಮೇಲೆ ಗುಂಡು ಹಾರಿಸಿದ ಯೋಧ

Vanitha Jain

Published

on

ಭರತ್ ಪುರ: ಜನವರಿ 04(ಯು.ಎನ್..ಐ) ಮಗಳ ಕಪಾಳಕ್ಕೆ ಹೊಡೆದ ಶಿಕ್ಷಕಿಯ ಮೇಲೆ ದೂರು ನೀಡಲು ಹೋಗಿದ್ದ ಸೈನಿಕರೊಬ್ಬರು ಶಾಲಾ ನಿರ್ದೇಶಕರ ಮೇಲೆ ಗುಂಡು ಹಾರಿಸಿದ ಘಟನೆ ರಾಜಸ್ಥಾನದ ಭರತ್ ಪುರ ಜಿಲ್ಲೆಯಲ್ಲಿ ನಡೆದಿದೆ.

ದುರದೃಷ್ಟಾವಶಾತ್ ಆ ಗುಂಡು ಮಧ್ಯೆ ಬಂದ ಪತ್ನಿಗೆ ಕೈಗೆ ತಗುಲಿ ಗಾಯವಾಗಿದ್ದು, ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಿಕ್ಷಕಿ ಮೇಲೆ ಗುಂಡು ಹಾರಿಸಿದ ಯೋಧ ಪಪ್ಪು ಗುರ್ಜರ್. ಇವರು ಕಾನ್ವಾಡ ಗ್ರಾಮದ ಖಾಸಗಿ ಶಾಲೆಯ ನಿರ್ದೇಶಕರನ್ನು ಭೇಟಿಯಾಗಲು ಹೋಗಿದ್ದರು. ಮಗಳು ಮನೆಕೆಲಸವನ್ನು ಪೂರ್ಣಗೊಳಿಸದ ಕಾರಣಕ್ಕೆ ಶಿಕ್ಷಕಿಯೊಬ್ಬರು ಕಪಾಳಮೋಕ್ಷ ಮಾಡಿದ್ದಾರೆ ಎಂದು ದೂರಿದರು.

ಈ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದು, ಗುರ್ಜರ್ ಶಾಲಾ ನಿರ್ದೇಶಕರತ್ತ ಗನ್ ತೋರಿಸಿದ್ದಾನೆ. ಆದರೆ, ಅವರ ಪತ್ನಿ ಮಧ್ಯೆ ಬಂದಿದ್ದು ಆಕೆಯ ಕೈಗೆ ಗುಂಡು ತಗುಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆಯ ನಂತರ ಯೋಧ ಸ್ಥಳದಿಂದ ಪರಾರಿಯಾಗಿದ್ದು, ಆತನ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಎಂದು ಠಾಣಾಧಿಕಾರಿ ಕಾಮ ದೌಲತ್ ಸಿಂಗ್ ತಿಳಿಸಿದ್ದಾರೆ.

ಗುರ್ಜರ್ ರಜೆಯಲ್ಲಿದ್ದರು ಮತ್ತು ಶಾಲಾ ನಿರ್ದೇಶಕರನ್ನು ಭೇಟಿ ಮಾಡಲು ಹೋದಾಗ ಸೇವಾವಧಿಯ ಗನ್ ಅನ್ನು ತಮ್ಮೊಂದಿಗೆ ತೆಗೆದುಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Share