Connect with us


      
ದೇಶ

ಪ್ರತ್ಯೇಕ ವಾಸದಲ್ಲಿ ಕೇಜ್ರಿವಾಲ್ !

UNI Kannada

Published

on

KEJRIVAL TESTED COVIDE POSITIVE
ಕೋವಿಡ್‌ ಸೋಂಕಿರುವುದಾಗಿ ಸ್ವತಃ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ನವದೆಹಲಿ,ಜನೆವರಿ.04(ಯು.ಎನ್.ಐ)ಮೊನ್ನೆಮೊನ್ನೆಯಷ್ಟೇ ದೆಹಲಿಯಲ್ಲಿ ಕೊರೋನಾ ಹೆಚ್ಚುತ್ತಿದೆಯಾದರೂ ಗಂಭೀರ ಸ್ವರೂಪ ಇರದ ಕಾರಣ ಯಾರೂ ಭಯಭೀತರಾಗುವ ಅವಶ್ಯಕತೆಯಿಲ್ಲ ಎಂದಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಇದೀಗ ಸ್ವತಃ‌ ಕೋವಿಡ್‌ಪೀಡಿತರಾಗಿ ಐಸೋಲೇಷನ್‌ನಲ್ಲಿದ್ದಾರೆ.
ಕೇಜ್ರಿವಾಲ್‌ಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಬಗ್ಗೆ ಅವರೇ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.
ಕಳೆದ ಮೂರು ದಿನಗಳಲ್ಲಿ ಉತ್ತರ ಪ್ರದೇಶ, ಪಂಜಾಬ್ ಮತ್ತು ಉತ್ತರಾಖಂಡದಲ್ಲಿ ಚುನಾವಣಾ ಪ್ರಚಾರದಲ್ಕಿ ಭಾಗವಹಿಸಿದ್ದರು ಅರವಿಂದ್ ಕೇಜ್ರಿವಾಲ್. ಸದ್ಯ ತಮ್ಮ ಮನೆಯಲ್ಲಿಯೇ ಸ್ವ ಐಸೋಲೇಶನ್‌ನಲ್ಲಿರುವ ಕೇಜ್ರಿವಾಲ್‌‌ಗೆ ಕೋವಿಡ್ ಸೌಮ್ಯಗುಣಲಕ್ಷಣಗಳಿರುವುದಾಗಿ ತಿಳಿದುಬಂದಿದೆ.

53 ವರ್ಷದ ಕೇಜ್ರಿವಾಲ್, ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಮಧ್ಯೆಯೇ ತಮ್ಮ ಆಮ್ ಆದ್ಮಿ ಪಾರ್ಟಿ (ಎಎಪಿ)ಗಾಗಿ ಸುಂಟರಗಾಳಿ ವೇಗದಲ್ಲಿ ಪ್ರಚಾರದಲ್ಲಿದ್ದಾರೆ. ಅವರು ಸೋಮವಾರ ಡೆಹ್ರಾಡೂನ್‌ನಲ್ಲಿದ್ದರು ಮತ್ತು ಅದಕ್ಕೂ ಮೊದಲು ಅಮೃತಸರ ಮತ್ತು ಪಟಿಯಾಲದಲ್ಲಿ ಚುನಾವಣಾ ರ‌್ಯಾಲಿಗಳನ್ನು ನಡೆಸಿದ್ದರು.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ಸೋಂಕು ಅತ್ಯಂತ ವೇಗವಾಗಿ ಹರಡುತ್ತಿದ್ದು, ಕಳೆದ ಸೋಮವಾರ, ರಾಜಧಾನಿ ದೆಹಲಿಯಲ್ಲಿ 4099 ಹೊಸ ಕೊರೋನಾ ರೋಗಿಗಳು ಕಂಡುಬಂದರೆ, ಸೋಂಕಿನ ಪ್ರಮಾಣ ಈಗ 6.46%ಕ್ಕೆ ತಲುಪಿದೆ.

ಕಳೆದ ಮೂರು ದಿನಗಳಿಂದ ಆಪ್ ಚುನಾವಣಾ ಪ್ರಚಾರದಲ್ಲಿ ಅರವಿಂದ್ ಕೇಜ್ರಿವಾಲ್ ಸಕ್ರಿಯ ಭಾಗವಹಿಸಿದ್ದರು.

Share