Connect with us


      
ರಾಜಕೀಯ

ಸಿದ್ದರಾಮಯ್ಯ ಹೇಳಿಕೆಗೆ ಅಶೋಕ್ ತಿರುಗೇಟು

Kumara Raitha

Published

on

ಬೆಂಗಳೂರು: ಜನೆವರಿ ೨೬ (ಯು.ಎನ್.‌ಐ.) ಕಾಂಗ್ರೆಸ್ ನ 20 ಮಂದಿ ಮುಖಂಡರು ನಮ್ಮ ಸಂಪರ್ಕದಲ್ಲಿದ್ದಾರೆ. ಸಿದ್ದರಾಮಯ್ಯ ಸಂಪರ್ಕದಲ್ಲಿ ನಮ್ಮವರು ಯಾರೂ ಇಲ್ಲ ಅವರು  ಕುಚೋದ್ಯದ ಹೇಳಿಕೆ ಕೊಡ್ತಿದಾರೆ ಎಂದು ಕಂದಾಯ ಸಚಿವ ಆರ್.‌ ಅಶೋಕ್‌ ತಿರುಗೇಟು ನೀಡಿದರು.

ಇಂದು ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಪಾದಯಾತ್ರೆ ಅರ್ಧಕ್ಕೆ ಮೊಟಕಾಗಿದ್ದು ಅವರಿಗೆ ಭ್ರಮನಿರಸನ ಆಗಿದೆ. ಅಪಶಕುನ ಅದು ಅವರಿಗೆ ಅನ್ಕೊಂಡಿದ್ದಾರೆ. ಹೀಗಾಗಿ ಅವರು ಒಳ್ಳೆಯ ಶಕುನಕ್ಕಾಗಿ ಕಾಯುತ್ತಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ ಪಕ್ಷದವರು ಎಲ್ಲ ನದಿಗಳ ಹೆಸರೂ ನೆನಪಿಸಿಕೊಳ್ತಾರೆ ಚುನಾವಣೆ ಅಂತ ಎಲ್ಲ ನದಿಗಳ ಮೇಲೂ ಅವರಿಗೆ ಪ್ರೀತಿ ಉಕ್ಕುತ್ತೆ ಚುನಾವಣೆ ಮುಗಿದ ಮೇಲೆ ಯಾವ ನದಿಯ ಹೆಸರೂ ಅವರಿಗೆ ನೆನಪಿರಲ್ಲ. ಯಾವ ನದಿ ಎಲ್ಲಿ ಹುಟ್ಟುತ್ತೆ, ಹರಿಯುತ್ತೆ ಅಂತ ಗೊತ್ತಿರಲ್ಲ ಅವರಿಗೆ ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ. ಸುಳ್ಳು ಸುದ್ದಿಗಳು ಈ ಬಗ್ಗೆ ಬರ್ತಿವೆ. ಯಾರೋ ಜ್ಯೋತಿಷ್ಯಾಲಯ ತೆರೆದು ಈ ಸುದ್ದಿ ಹಬ್ಬಿಸ್ತಿದಾರೆ ನಾನೂ‌ ವರಿಷ್ಠರ ಜತೆಗೆ ಸಂಪರ್ಕದಲ್ಲಿದ್ದೇನೆ. ಇದು ಗಾಳಿ ಸುದ್ದಿ, ಗಾಳಿಯಲ್ಲೇ ಹರಿದು ಹೋಗುವ ಸುದ್ದಿ ಅವು. ಬದಲಾವಣೆ ಸಂಬಂಧ ನಮ್ಮ ಪಕ್ಷದಲ್ಲಿ ಚರ್ಚೆ ಆಗ್ತಿಲ್ಲ. ಕುಚೋದ್ಯದ ಹೇಳಿಕೆಗಳನ್ನು ಕೆಲವರು ಕೊಡ್ತಿದಾರೆ. ಈ ಅವಧಿ ಪೂರ್ತಿ ಬೊಮ್ಮಾಯಿ ಅವರೇ ಸಿಎಂ ಆಗಿರ್ತಾರೆ ಮುಂದಿನ ಚುನಾವಣೆಯನ್ನೂ ಬೊಮ್ಮಾಯಿ ನೇತೃತ್ವದಲ್ಲೇ ನಡೆಸ್ತೇವೆ ಎಂದು  ಸಿಎಂ ಪರ ಆರ್ ಅಶೋಕ್ ಬ್ಯಾಟಿಂಗ್ ಮಾಡಿದರು.

 ಜಿಲ್ಲಾ ಉಸ್ತುವಾರಿ ನೀಡದ ವಿಚಾರವಾಗಿ ಪ್ರತಿಕ್ರಿಯಿಸಿದ ಅಶೋಕ್, ಸಿಎಂ ನನ್ನ ಜತೆ ಚರ್ಚೆ ನಡೆಸಿಯೇ ಈ ನಿರ್ಣಯ ಮಾಡಿದ್ದಾರೆ. ನಮ್ಮಲ್ಲಿ ಉಸ್ತುವಾರಿ ಹಂಚಿಕೆಯಲ್ಲಿ ಗೊಂದಲ ಇಲ್ಲ.  ನಾನು ಒಂದೂವರೆ ವರ್ಷದ ಹಿಂದೆಯೇ ಜಿಲ್ಲಾ ಉಸ್ತುವಾರಿ ಬೇಡ ಅಂದಿದ್ದೆ. ಯಡಿಯೂರಪ್ಪ ಅವಧಿಯಲ್ಲೂ ಉಸ್ತುವಾರಿ ಇರಲಿಲ್ಲ, ಈಗಲೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ನಮ್ಮ ಯಾವ ಸಚಿವರೂ, ಶಾಸಕರೂ ಕಾಂಗ್ರೆಸ್ ಗೆ ಹೋಗಲ್ಲ. ಸೂರ್ಯ ಚಂದ್ರ ಇರೋವರೆಗೂ‌ ೧೭ ಜನರನ್ನು ಸೇರಿಸಿಕೊಳ್ಳಲ್ಲ ಅಂದಿದ್ರು ಸಿದ್ದರಾಮಯ್ಯ. ಅವರಿಗೆ ಸೋಲುವ ಭಯ ಕಾಡ್ತಿದೆ ಹೀಗಾಗಿ ಈಥರದ ಹೇಳಿಕೆಗಳನ್ನು ಕೊಡ್ತಿದಾರೆ ಎಂದು ವ್ಯಂಗ್ಯವಾಡಿದರು.

Share