Connect with us


      




ದೇಶ

ಸಿಎಂ ಭೇಟಿಯಾಗಲು ಪ್ರವಾಹದ ನೀರಲ್ಲಿ ಪರದಾಡಿದ ಅಸ್ಸಾಂ ಯುವಕ

Lakshmi Vijaya

Published

on

ಗುವಾಹಟಿ: ಜೂನ್ 26 (ಯು.ಎನ್.ಐ.) ಅಸ್ಸಾಂನಲ್ಲಿ ಭಾರೀ ಮಳೆಯಿಂದ ಪ್ರವಾಸ ಸ್ಥಿತಿ ಉಂಟಾಗಿದ್ದು 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇಂತಹ ಸ್ಥಿತಿಯನ್ನ ಅವಲೋಕಿಸಲು ಸಿಎಂ ಹಿಮಂತ್ ಬಿಸ್ವಾ ಶರ್ಮಾ ಭಾನುವಾರ ಪರಿಶೀಲನೆಗಿಳಿದಿದ್ರು. ಈ ವೇಳೆ ಸಿಲ್ಚಾರ್ ನಿವಾಸಿಯೊಬ್ಬರು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರನ್ನು ಸ್ವಾಗತಿಸಲು ಸೊಂಟದವರೆಗೂ ನಿಂತಿದ್ದ ನೀರಲ್ಲೇ ಪರದಾಡುತ್ತಾ ಬಂದು ಸಿಎಂ ಭೇಟಿಯಾದರು.

ನೀರಿನಲ್ಲಿ ಮುಳುಗಿದ ಗೇಟ್‌ಗೆ ಅಂಟಿಕೊಂಡಿದ್ದ ವ್ಯಕ್ತಿ ಬೋಟ್ ನಲ್ಲಿದ್ದ ಸಿಎಂ ಬಳಿ ಬಂದು ಕೈಕುಲಿದ್ರು.  ತುರ್ತು ಸೇವೆಗಳ ಸಿಬ್ಬಂದಿಯ ಸಹಾಯದಿಂದ ಅವರು ಮುಖ್ಯಮಂತ್ರಿಯ ದೋಣಿಯನ್ನ ತಲುಪಿ ಸಾಂಪ್ರದಾಯಿಕ ಅಸ್ಸಾಮಿ ಉಡುಪುಗಳ ಒಂದು “ಗಮುಸಾ” ಅನ್ನು ಅವರಿಗೆ ನೀಡಿದರು.

ನಾನು ಯಾವಾಗಲಾದರೂ ಬಂದು ನಿಮ್ಮೊಂದಿಗೆ ಒಂದು ಕಪ್ ಚಹಾ ಸೇವಿಸುತ್ತೇನೆ ಎಂದು ಮುಖ್ಯಮಂತ್ರಿ “ಗಮುಸ” ಸ್ವೀಕರಿಸಿ ವ್ಯಕ್ತಿಗೆ ಭರವಸೆ ನೀಡಿದರು.

ನಾನು ಮುಂದೆ ಸಿಲ್ಚಾರ್ಗೆ ಭೇಟಿ ನೀಡಿದಾಗ ನಾನು ನಿಮ್ಮ ಮನೆಗೆ ಬರುತ್ತೇನೆ ಎಂದು ಸಿಎಂ ಇನ್ನೊಬ್ಬ ನಿವಾಸಿಗೆ ಉತ್ತರಿಸಿದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.

ಅಸ್ಸಾಂನಾದ್ಯಂತ ಪ್ರವಾಹ ಮತ್ತು ಭೂಕುಸಿತದಿಂದಾಗಿ ಇದುವರೆಗೆ 121 ಜನರು ಸಾವನ್ನಪ್ಪಿದ್ದಾರೆ. ರಾಜ್ಯದ 25 ಜಿಲ್ಲೆಗಳಲ್ಲಿ ಇನ್ನೂ 25 ಲಕ್ಷ ಜನರು ಪೀಡಿತರಾಗಿದ್ದಾರೆ. ಸಿಲ್ಚಾರ್‌ನಲ್ಲಿ ಪರಿಸ್ಥಿತಿ ಇನ್ನೂ ಕಠೋರವಾಗಿದೆ.  ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಅಗತ್ಯ ವಸ್ತುಗಳನ್ನು ತಲುಪಿಸಲು ಡ್ರೋನ್‌ಗಳನ್ನು ಬಳಸಲಾಗುತ್ತಿದೆ.

ಸಿಎಂ ಶರ್ಮಾ ಅವರು ಇಂದು ತಮ್ಮ ಸಿಲ್ಚಾರ್ ಭೇಟಿಯ ಸಂದರ್ಭದಲ್ಲಿ, ತಮ್ಮ ಸರ್ಕಾರದ ಆದ್ಯತೆಯು ವಿದ್ಯುತ್ ಮರುಸ್ಥಾಪನೆಯಾಗಿದೆ ಎಂದು ಹೇಳಿದರು. ಮುಂದಿನ 24 ಗಂಟೆಗಳಲ್ಲಿ ಮಳೆ ಬಾರದಿದ್ದರೆ ಸಿಲ್ಚಾರ್‌ನಲ್ಲಿ ಪರಿಸ್ಥಿತಿ ಉತ್ತಮವಾಗಲಿದೆ ಎಂದು ಅವರು ಹೇಳಿದರು.

Share