Connect with us


      




ರಾಜಕೀಯ

ಚುನಾವಣಾ ಆಯೋಗ ಹೊರಡಿಸಿದ ಕೋವಿಡ್ ಮಾರ್ಗಸೂಚಿಗಳು ಯಾವುವು? ಇಲ್ಲಿದೆ ಮಾಹಿತಿ

Published

on

ನವದೆಹಲಿ: ಜನೆವರಿ 08(ಯು.ಎನ್.ಐ.) ಮುಂಬರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಮುಂದೂಡುವ ಊಹಾಪೆÇೀಹಗಳಿಗೆ ತೆರೆ ಎಳೆದಿರುವ ಭಾರತೀಯ ಚುನಾವಣಾ ಆಯೋಗವು ಶನಿವಾರ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ ಮತ್ತು ಗೋವಾ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಆದಾಗ್ಯೂ, ಕೋವಿಡ್-19 ರ ಮೂರನೇ ಅಲೆ ಮತ್ತು ಒಮೈಕ್ರಾನ್ ಹರಡುವಿಕೆಯನ್ನು ಗಮನದಲ್ಲಿಟ್ಟುಕೊಂಡು ಮಾತನಾಡಿದ ಕೇಂದ್ರ ಚುನಾವಣಾ ಆಯುಕ್ತ

ಸುಶೀಲ್ ಚಂದ್ರ, ಹಲವಾರು ಕೋವಿಡ್ ಸುರಕ್ಷಿತತೆಗಳೊಂದಿಗೆ ಚುನಾವಣೆ ನಡೆಸಲಾಗುವುದು ಎಂದು ಹೇಳಿದ್ದಾರೆ.

“ವಿಸ್ತೃತ ಸಿದ್ಧತೆಗಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರನ್ನು ಸೆಳೆಯುವ ಮೂಲಕ ಐದು ರಾಜ್ಯಗಳಲ್ಲಿ ಕೋವಿಡ್-ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಚುನಾವಣೆಗಳನ್ನು ನಡೆಸುವ ಗುರಿಯನ್ನು ಹೊಂದಿದ್ದೇವೆ ಎಂದು ಚಂದ್ರ ಹೇಳಿದರು.

ಚುನಾವಣಾ ಪ್ರಯುಕ್ತ ಭಾರತದ ಚುನಾವಣಾ ಆಯೋಗವು ರೂಪಿಸಿದ ಮಾರ್ಗಸೂಚಿಗಳು ಇಲ್ಲಿವೆ:
• ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಭೌತಿಕ ರ್ಯಾಲಿಗಳು, ಬೈಕ್ ರ್ಯಾಲಿಗಳು, ಪಾದಯಾತ್ರೆಗಳು, ರೋಡ್‍ಶೋಗಳು ಮತ್ತು ಮೆರವಣಿಗೆಗಳನ್ನು ಜನವರಿ 15 ರವರೆಗೆ ನಿಷೇಧಿಸಲಾಗಿದೆ. ಪರಿಶೀಲನಾ ಸಭೆ ಮತ್ತು ದೇಶದಲ್ಲಿನ ಕೋವಿಡ್ ಪರಿಸ್ಥಿತಿ ಅರಿತು ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು.

• ಆಯೋಗವು ಮನೆ-ಮನೆಗೆ ಪ್ರಚಾರಕ್ಕೆ ತೆರಳುವ ವ್ಯಕ್ತಿಗಳ ಸಂಖ್ಯೆಯನ್ನು ಕೇವಲ ಐದಕ್ಕೆ ಸೀಮಿತಗೊಳಿಸಿದೆ.

• ರಾಜ್ಯಗಳಾದ್ಯಂತ ಎಲ್ಲಾ ಮತಗಟ್ಟೆಗಳಲ್ಲೂ ಸ್ಯಾನಿಟೈಸರ್‍ಗಳು ಮತ್ತು ಮಾಸ್ಕ್‍ಗಳಂತಹ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಬೇಕು.
ಈ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಲ್ಲಿ ಕಟ್ಟುನಿಟ್ಟಾಗಿ ಶಿಕ್ಷೆ ವಿಧಿಸಲಾಗುತ್ತದೆ

• ಒಂದೇ ಸ್ಥಳದಲ್ಲಿ ಹೆಚ್ಚಿನ ಜನಸಂದಣಿ ಉಂಟಾಗದಂತೆ ತಡೆಯಲು ಬೂತ್‍ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಮತ್ತು ಮತದಾನದ ಸಮಯವನ್ನು ಒಂದು ಗಂಟೆ ಹೆಚ್ಚಿಸಲಾಗಿದೆ.

• ಚುನಾವಣಾ ಅಭ್ಯರ್ಥಿಗಳು ಆನ್‍ಲೈನ್‍ನಲ್ಲಿ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿದೆ.

• ಕೋವಿಡ್ ರೋಗಿಗಳು ಮತ್ತು 80 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು, ವಿಕಲಾಂಗ ಚೇತನರು ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಬಹುದು.

• ಚುನಾವಣೆಗೆ ಚುನಾಯಿತರಾದ ಎಲ್ಲ ಅಧಿಕಾರಿಗಳನ್ನು ಮುಂಚೂಣಿಯ ಕೆಲಸಗಾರರೆಂದು ಪರಿಗಣಿಸಲಾಗುವುದು ಮತ್ತು ಕೋವಿಡ್ ಲಸಿಕೆಯ ಮುನ್ನೆಚ್ಚರಿಕೆ ಪ್ರಮಾಣವನ್ನು ನೀಡಲಾಗುತ್ತದೆ.

• ಫಲಿತಾಂಶದ ನಂತರ ಯಾವುದೇ ವಿಜಯೋತ್ಸವ ಅಥವಾ ಮೆರವಣಿಗೆಗಳನ್ನು ಅನುಮತಿಸಲಾಗುವುದಿಲ್ಲ

• ರಾತ್ರಿ 8 ರಿಂದ ಬೆಳಿಗ್ಗೆ 8 ರವರೆಗೆ ಚುನಾವಣಾ ಪ್ರಚಾರ ನಡೆಸುವಂತಿಲ್ಲ.

ಫೆಬ್ರವರಿ 10 ರಿಂದ ಮಾರ್ಚ್ 7 ರ ನಡುವೆ ಒಟ್ಟು ಏಳು ಹಂತಗಳಲ್ಲಿ ಎಲ್ಲಾ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಪೂರ್ಣಗೊಳ್ಳಲಿದ್ದು, ಮಾರ್ಚ್ 10 ರಂದು ಫಲಿತಾಂಶ ಹೊರಬೀಳಲಿದೆ.

ರಾಜಕೀಯ

ಸಿದ್ದರಾಮಯ್ಯ ಅವರಿಗೆ ಅಭದ್ರತೆ ಕಾಡುತ್ತಿದೆ: ಮುಖ್ಯಮಂತ್ರಿ ಬೊಮ್ಮಾಯಿ

Published

on

ಬಿಜೆಪಿ ಶಾಸಕರ ವಲಸೆ ಸುಳ್ಳು 

ಬೆಂಗಳೂರು: ಜನವರಿ 26 (ಯು.ಎನ್.ಐ)  ಕೆ.ಪಿ.ಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಂದೆ ಹೋಗಿದ್ದಾರೆ ಎಂದು ಎಲ್ಲೋ ಒಂದು ಕಡೆ ಸಿದ್ದರಾಮಯ್ಯ ಅವರಿಗೆ ಅಭದ್ರತೆ ಕಾಡುತ್ತಿದೆ. ಇವರ ತಿಕ್ಕಾಟದಿಂದ ಮುಂದಿನ ದಿನಗಳಲ್ಲಿ ಬಹಳಷ್ಟ ಜನ ಕಾಂಗ್ರೆಸ್ ಪಕ್ಷವನ್ನು ತೊರೆಯಲಿದ್ದಾರೆಯೇ ಹೊರೆತು ಅಲ್ಲಿ ಹೋಗುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಚುನಾವಣೆ ಸಂದರ್ಭದಲ್ಲಿ ಸಚಿವರು ಕಾಂಗ್ರೆಸ್ ಪಕ್ಷಕ್ಕೆ ವಲಸೆ ಬರಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪುನರುಚ್ಚರಿಸುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ʼಮೊದಲು ಶಾಸಕರು ನಿರಂತರ ಸಂಪರ್ಕದಲ್ಲಿದ್ದಾರೆʼ -ʼಬಂದೇ ಬಿಡುತ್ತಾರೆʼಎಂದರು. ಈಗ ಚುನಾವಣಾ ಸಂದರ್ಭದಲ್ಲಿ ಬರಲಿದ್ದಾರೆ ಎನ್ನುತ್ತಿದ್ದಾರೆ. ಅಂದರೆ ಮೊದಲು ಮಾತನಾಡಿದ್ದು ಸುಳ್ಳು ಎಂದು ಸ್ಷಷ್ಟವಾಗುತ್ತದೆ ಎಂದರು.

ಯಾವ ಶಾಸಕರು ಬರುತ್ತಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಅವರ ಬಳಿ ಉತ್ತರವಿಲ್ಲ. ಕಾಂಗ್ರೆಸ್‍ನಲ್ಲಿ ಆಂತರಿಕವಾಗಿ ಸ್ಪರ್ಧೆ ಇದೆ. ಡಿ.ಕೆ.ಶಿವಕುಮಾರ್ ಅವರು ಅವರು, ಇವರ ಬಳಿ ಮಾತನಾಡಿದ್ದೇನೆ ಎಂದು ಅಲ್ಲಲ್ಲಿ ಸುದ್ದಿ ಮಾಡುತ್ತಾರೆ ಎಂದರು.

ಕಾಂಗ್ರೆಸ್ ಅಪ್ರಸ್ತುತವಾಗಲಿದೆ: ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಅಸ್ತಿತ್ವವೇ ಇಲ್ಲ. ಪಂಜಾಬ್‍ನಲ್ಲಿ ಅಧಿಕಾರ ಕಳೆದುಕೊಳ್ಳುತ್ತಿದ್ದಾರೆ. ಗೋವಾದಲ್ಲಿ ಅಧಿಕಾರಕ್ಕೆ ಬರುವ ಪರಿಸ್ಥಿತಿಯೇ ಇಲ್ಲ. ಹೀಗಾಗಿ ಈ ಐದೂ ರಾಜ್ಯಗಳ ಚುನಾವಣೆಯಾದ ಮೇಲೆ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಅಪ್ರಸ್ತುತವಾಗಲಿದೆ. ರಾಷ್ಟ್ಟಮಟ್ಟದಲ್ಲಿ ಒಂದು ಪಕ್ಷ ಅಪ್ರಸ್ತುತವಾದಾಗ ಅದರ ಕರಿನೆರಳು ರಾಜ್ಯದ ಕಾಂಗ್ರೆಸ್ ಮೇಲೂ ಹಾಗೂ ರಾಜಕಾರಣದ ಮೇಲೂ ಆಗಲಿದೆ. ಅದರ ಪರಿಣಾಮವನ್ನು ಬರುವ ದಿನಗಳಲ್ಲಿ ಕಾಣಲಿದ್ದೇವೆ ಎಂದರು.
ಡಿ.ಕೆ.ಶಿವಕುಮಾರ್ ಹಾಗೂ ಸಿದ್ಧರಾಮಯ್ಯನವರು ಪೈಪೋಟಿ ಮೇಲೆ ಹೇಳಿಕೆಗಳನ್ನು ನೀಡುತ್ತಿದ್ದಾರೆಯೇ ಎನ್ನುವ ಮಾಧ್ಯಮಗಳ ಪ್ರಶ್ನೆಗೇ ಉತ್ತರಿಸುತ್ತಾ, ಅದು ಆಂತರಿಕ ಪೈಪೋಟಿ. ಅವರ ಮಾತುಗಳಲ್ಲಿ ಯಾವುದೇ ಸತ್ಯಾಂಶವೂ ಇಲ್ಲ ವಾಸ್ತವಾಂಶವೂ ಇಲ್ಲ. ಆ ಭೂಮಿಕೆಯೇ ಇಲ್ಲ ಎಂದರು.
ಬಿಜೆಪಿ ಸಂಪರ್ಕದಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆಯೇ ಎಂಬ ಪ್ರಶ್ನೆಗೆ , ನಾನು ಎಲ್ಲಿಯೂ ಈ ರೀತಿ ಹೇಳಿಲ್ಲ ಎಂದರು. ರಮೇಶ್ ಜಾರಕಿಹೊಳಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ ಅವರ ಬಳಿ ಯಾರು ಸಂಪರ್ಕದಲ್ಲಿದ್ದಾರೆ ಎಂದು ವಿಚಾರಣೆ ಮಾಡುವುದಾಗಿ ತಿಳಿಸಿದರು. ನಿಮ್ಮ ಸಂಪರ್ಕದಲ್ಲಿ ಯಾರಾದರೂ ಇದ್ದಾರೆಯೇ ಎಂಬ ಪ್ರಶ್ನೆಗೆ – ʼನಾನು ಜವಾಬ್ದಾರಿಯುತ ಸ್ಥಾನದಲ್ಲಿದ್ದು ಅದರ ಬಗ್ಗೆ ಮಾತನಾಡಲು ನಾನು ಸಿದ್ಧವಿಲ್ಲ. ಅವರ ಹಾಗೆ ಬೇಜವಾಬ್ದಾರಿಯಿಂದ ಮಾತನಾಡಲು ಸಾಧ್ಯವಿಲ್ಲʼ ಎಂದರು.

ರಮೇಶ್ ಜಾರಕಿಹೊಳಿಯವರು ಆಪರೇಷನ್ ಕಮಲದ ಉಸ್ತುವಾರಿ ವಹಿಸಿಕೊಂಡಂತೆ ಮಾತನಾಡುತ್ತಿದ್ದು, ಎಲ್ಲಿ ಹೋದರೂ 15- 20 ಜನ ಬರಲಿದ್ದಾರೆ ಎನ್ನುತ್ತಾರೆ. ನಳಿನ್ ಕುಮಾರ್ ಕಟೀಲ್ ಸಹ ಅದನ್ನೇ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಅದೆಲ್ಲಾ ಗೊತ್ತಿರುವ ವಿಚಾರ ಎಂದರು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಚುನಾವಣೆ ಬಳಿಕ ನಮ್ಮನ್ನು ಬಿಟ್ಟು ಯಾರೂ ಸರ್ಕಾರ ರಚನೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅದು ಅವರ ಸದಾಶಯ ಯಾವಾಗಲೂ ಹಾಗೆಯೇ ಇರುತ್ತದೆ. ಅತಂತ್ರವಾದರೆ ಅವರು ಸ್ವತಂತ್ರರಾಗುತ್ತಾರೆ ಎಂದು ಸಹಜವಾಗಿ ಆಶಿಸುತ್ತಾರೆ ಎಂದರು.

Continue Reading

ರಾಜಕೀಯ

ನಾರಾಯಣಗುರು ಟ್ಯಾಬ್ಲೋಗೆ ನಿರಾಕರಣೆ; ಕಾಂಗ್ರೆಸ್‌ ಆಕ್ರೋಶ

Published

on

ಬೆಂಗಳೂರು: ಜನೆವರಿ ೨೬ (ಯು.ಎನ್.‌ಐ.) ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ನಾರಾಯಣ ಗುರು ಟ್ಯಾಬ್ಲೋಗೆ ಅವಕಾಶ ನಿರಾಕರಣೆಯಾಗಿರುವುದಕ್ಕೆ ರಾಜ್ಯ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ. ಈ ಸಂಬಂಧ ಪಕ್ಷದ ನಾಯಕರು ಹೇಳಿಕೆ ನೀಡಿದ್ದಾರೆ.

ನಾರಾಯಣಗುರು ಒಬ್ಬ ದಾರ್ಶನಿಕರು. ಕೇರಳದಲ್ಲಿ ಜಾತೀಯತೆ ಹೆಚ್ಚಿತ್ತು. ನಂಬೂದರಿಗಳ ದೌರ್ಜನ್ಯ ಹೆಚ್ಚಾಗಿತ್ತು. ಕೆಳಗಿನವರನ್ನು ಅಸ್ಪೃಶ್ಯರ  ರೀತಿ ನೋಡ್ತಿದ್ರು. ಗುರುಗಳು ಇದರ ವಿರುದ್ಧ ಚಳುವಳಿ ಆರಂಭಿಸಿದ್ರು. ಮನುಷ್ಯರೆಲ್ಲ ಒಂದೇ ದೇವರು ಒಬ್ಬನೇ ಎಂದ್ರು. ನೀವೇ ದೇಗುಲ ಕಟ್ಟಿ ಪೂಜೆ ಮಾಡಿ ಎಂದ ಇದ್ದರು. ಜನರಲ್ಲಿ ಜಾಗೃತಿ ಮೂಡಿಸಿದ್ದವರು. ಅಂತಹ ವ್ಯಕ್ತಿ ಟ್ಯಾಬ್ಲೋವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಪೆರೇಡ್ ನಲ್ಲಿ ಭಾಗವಹಿಸಲು ಅವಕಾಶ ಕೊಟ್ಟಿಲ್ಲ. ಕೇಂದ್ರ ಸರ್ಕಾರ ಅಕ್ಷಮ್ಯ ಅಪರಾಧ ವೆಸಗಿದೆ. ಜನರು ಇವತ್ತು ಪ್ರತಿಭಟನೆ ನಡೆಸ್ತಿದ್ದಾರೆ. ಅವರಿಗೆ ನೋವಾಗಿದೆ ಪ್ರತಿಭಟನೆ ಮಾಡ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ  ಬಿಜೆಪಿ ಶಾಸಕರು ಸಂಪರ್ಕದಲ್ಲಿದ್ದಾರೆಂಬ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು ನಾವು ಬಿಟ್ಟು ಹೋದವರನ್ನ ಸೇರಿಸಿಕೊಳ್ತೇವೆಂದು ಎಲ್ಲಿ ಹೇಳಿದ್ದೇವೆ ? ಕಾಂಗ್ರೆಸ್ ಸಿದ್ಧಾಂತ ಒಪ್ಪಿಬಂದವರಿಗೆ ಸ್ವಾಗತ. ಇದನ್ನೇ ನಾನೂ ಹೇಳಿದ್ದೇನೆ. ಕಾಂಗ್ರೆಸ್ ಬಿಟ್ಟವರನ್ನ ಸೇರಿಸಿಕೊಳ್ಳಲ್ಲ. ಅಸೆಂಬ್ಲಿಯಲ್ಲೇ ನಾನು ಈ ಬಗ್ಗೆ ಹೇಳಿದ್ದೇನೆ. ನಾನು ನಾನಾಗಿ ಯಾರ ಜೊತೆ ಮಾತನಾಡಲ್ಲ. ಅವರಾಗಿ ಬಂದರೆ ಮಾತ್ರ ಮಾತನಾಡ್ತೇನೆ. ನಾನು ಕುಮಾರಸ್ವಾಮಿ ಬಗ್ಗೆ ಮಾತನಾಡಲ್ಲ. ಅವರ ಹೇಳಿಕೆಗೆ ಮಾತನಾಡಲ್ಲ. ನೋ ನೋ ನಾನು ಮಾತನಾಡಲ್ಲ ಎಂದು ಪುನರುಚ್ಛರಿಸಿದರು.

ವಿಧಾನಸಭೆ ಚುನಾವಣೆ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ,  ನನಗೆ ಎಲ್ಲ ಕಡೆ ನಿಲ್ಲಿ ಅಂತಾರೆ. ಕೋಲಾರ,ಕೊಪ್ಪಳ,ಚಾಮರಾಜಪೇಟೆಯಲ್ಲೂ ನಿಲ್ಲಿ ಅಂತಾರೆ. ಚಾಮುಂಡೇಶ್ವರಿಯಲ್ಲೂ ನಿಲ್ಲಿ ಅಂತಾರೆ. ವರುಣಾದಲ್ಲೂ ನಿಲ್ಲಿ ಅಂತಾರೆ ನಾನೇ ಬೇಡ ಅಂತ ಸುಮ್ಮನಾಗಿದ್ದೇನೆ ಎಂದರು.

ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಅದಕ್ಕೆ ನಾರಾಯಣಗುರು ಸ್ಥಬ್ಧ ಚಿತ್ರ ಕಳಿಸಲಾಗಿತ್ತು. ಆದರೆ  ಕೇಂದ್ರ ಸರ್ಕಾರ ಸ್ಥಬ್ಧ ಚಿತ್ರ ತಿರಸ್ಕರಿಸಿದೆ. ರಾಷ್ಟ್ರಕ್ಕಾಗಿ ತ್ಯಾಗ ಮಾಡಿದ ಹಿರಿಯರನ್ನ ಕಡೆಗಣಿಸಿದೆ. ತಮಿಳುನಾಡಿನ ವೀರಬೊಮ್ಮನ್ ಕೂಡ ಕಡೆಗಣಿಸಿದೆ. ಒನ್ ನೇಷನ್,ಒನ್ ಕಲ್ಚರ್ ಅಂತಾರೆ. ಆದರೆ ನಾರಾಯಣಗುರುಗಳ ಸ್ಥಬ್ಧ ಚಿತ್ರವನ್ನ ತಿರಸ್ಕರಿಸಿದ್ದಾರೆ. ಪ್ರಧಾನಿ ಮೋದಿಯವರು ಕ್ಷಮೆಕೇಳಬೇಕು ಎಂದು ಕಾಂಗ್ರೆಸ್‌ ಮುಖಂಡ ಬಿ.ಕೆ. ಹರಿಪ್ರಸಾದ್‌ ಆಗ್ರಹಿಸಿದ್ದಾರೆ.

Continue Reading

ರಾಜಕೀಯ

ಸಿದ್ದರಾಮಯ್ಯ ಹೇಳಿಕೆಗೆ ಅಶೋಕ್ ತಿರುಗೇಟು

Published

on

ಬೆಂಗಳೂರು: ಜನೆವರಿ ೨೬ (ಯು.ಎನ್.‌ಐ.) ಕಾಂಗ್ರೆಸ್ ನ 20 ಮಂದಿ ಮುಖಂಡರು ನಮ್ಮ ಸಂಪರ್ಕದಲ್ಲಿದ್ದಾರೆ. ಸಿದ್ದರಾಮಯ್ಯ ಸಂಪರ್ಕದಲ್ಲಿ ನಮ್ಮವರು ಯಾರೂ ಇಲ್ಲ ಅವರು  ಕುಚೋದ್ಯದ ಹೇಳಿಕೆ ಕೊಡ್ತಿದಾರೆ ಎಂದು ಕಂದಾಯ ಸಚಿವ ಆರ್.‌ ಅಶೋಕ್‌ ತಿರುಗೇಟು ನೀಡಿದರು.

ಇಂದು ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಪಾದಯಾತ್ರೆ ಅರ್ಧಕ್ಕೆ ಮೊಟಕಾಗಿದ್ದು ಅವರಿಗೆ ಭ್ರಮನಿರಸನ ಆಗಿದೆ. ಅಪಶಕುನ ಅದು ಅವರಿಗೆ ಅನ್ಕೊಂಡಿದ್ದಾರೆ. ಹೀಗಾಗಿ ಅವರು ಒಳ್ಳೆಯ ಶಕುನಕ್ಕಾಗಿ ಕಾಯುತ್ತಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ ಪಕ್ಷದವರು ಎಲ್ಲ ನದಿಗಳ ಹೆಸರೂ ನೆನಪಿಸಿಕೊಳ್ತಾರೆ ಚುನಾವಣೆ ಅಂತ ಎಲ್ಲ ನದಿಗಳ ಮೇಲೂ ಅವರಿಗೆ ಪ್ರೀತಿ ಉಕ್ಕುತ್ತೆ ಚುನಾವಣೆ ಮುಗಿದ ಮೇಲೆ ಯಾವ ನದಿಯ ಹೆಸರೂ ಅವರಿಗೆ ನೆನಪಿರಲ್ಲ. ಯಾವ ನದಿ ಎಲ್ಲಿ ಹುಟ್ಟುತ್ತೆ, ಹರಿಯುತ್ತೆ ಅಂತ ಗೊತ್ತಿರಲ್ಲ ಅವರಿಗೆ ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ. ಸುಳ್ಳು ಸುದ್ದಿಗಳು ಈ ಬಗ್ಗೆ ಬರ್ತಿವೆ. ಯಾರೋ ಜ್ಯೋತಿಷ್ಯಾಲಯ ತೆರೆದು ಈ ಸುದ್ದಿ ಹಬ್ಬಿಸ್ತಿದಾರೆ ನಾನೂ‌ ವರಿಷ್ಠರ ಜತೆಗೆ ಸಂಪರ್ಕದಲ್ಲಿದ್ದೇನೆ. ಇದು ಗಾಳಿ ಸುದ್ದಿ, ಗಾಳಿಯಲ್ಲೇ ಹರಿದು ಹೋಗುವ ಸುದ್ದಿ ಅವು. ಬದಲಾವಣೆ ಸಂಬಂಧ ನಮ್ಮ ಪಕ್ಷದಲ್ಲಿ ಚರ್ಚೆ ಆಗ್ತಿಲ್ಲ. ಕುಚೋದ್ಯದ ಹೇಳಿಕೆಗಳನ್ನು ಕೆಲವರು ಕೊಡ್ತಿದಾರೆ. ಈ ಅವಧಿ ಪೂರ್ತಿ ಬೊಮ್ಮಾಯಿ ಅವರೇ ಸಿಎಂ ಆಗಿರ್ತಾರೆ ಮುಂದಿನ ಚುನಾವಣೆಯನ್ನೂ ಬೊಮ್ಮಾಯಿ ನೇತೃತ್ವದಲ್ಲೇ ನಡೆಸ್ತೇವೆ ಎಂದು  ಸಿಎಂ ಪರ ಆರ್ ಅಶೋಕ್ ಬ್ಯಾಟಿಂಗ್ ಮಾಡಿದರು.

 ಜಿಲ್ಲಾ ಉಸ್ತುವಾರಿ ನೀಡದ ವಿಚಾರವಾಗಿ ಪ್ರತಿಕ್ರಿಯಿಸಿದ ಅಶೋಕ್, ಸಿಎಂ ನನ್ನ ಜತೆ ಚರ್ಚೆ ನಡೆಸಿಯೇ ಈ ನಿರ್ಣಯ ಮಾಡಿದ್ದಾರೆ. ನಮ್ಮಲ್ಲಿ ಉಸ್ತುವಾರಿ ಹಂಚಿಕೆಯಲ್ಲಿ ಗೊಂದಲ ಇಲ್ಲ.  ನಾನು ಒಂದೂವರೆ ವರ್ಷದ ಹಿಂದೆಯೇ ಜಿಲ್ಲಾ ಉಸ್ತುವಾರಿ ಬೇಡ ಅಂದಿದ್ದೆ. ಯಡಿಯೂರಪ್ಪ ಅವಧಿಯಲ್ಲೂ ಉಸ್ತುವಾರಿ ಇರಲಿಲ್ಲ, ಈಗಲೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ನಮ್ಮ ಯಾವ ಸಚಿವರೂ, ಶಾಸಕರೂ ಕಾಂಗ್ರೆಸ್ ಗೆ ಹೋಗಲ್ಲ. ಸೂರ್ಯ ಚಂದ್ರ ಇರೋವರೆಗೂ‌ ೧೭ ಜನರನ್ನು ಸೇರಿಸಿಕೊಳ್ಳಲ್ಲ ಅಂದಿದ್ರು ಸಿದ್ದರಾಮಯ್ಯ. ಅವರಿಗೆ ಸೋಲುವ ಭಯ ಕಾಡ್ತಿದೆ ಹೀಗಾಗಿ ಈಥರದ ಹೇಳಿಕೆಗಳನ್ನು ಕೊಡ್ತಿದಾರೆ ಎಂದು ವ್ಯಂಗ್ಯವಾಡಿದರು.

Continue Reading
Advertisement
ದೇಶ10 mins ago

ಅಧಿಕೃತವಾಗಿ ಟಾಟಾ ಸಮೂಹಕ್ಕೆ ಏರ್ ಇಂಡಿಯಾ ಕಂಪೆನಿ ಹಸ್ತಾಂತರ

ನವದೆಹಲಿ: ಜನೆವರಿ 27  (ಯು.ಎನ್.ಐ.) ಕೇಂದ್ರ ಸರ್ಕಾರವು ಗುರುವಾರ ಅಧಿಕೃತವಾಗಿ ಏರ್ ಇಂಡಿಯಾವನ್ನು ಟಾಟಾ ಸಮೂಹಕ್ಕೆ ಹಸ್ತಾಂತರಿಸಿದೆ. 69 ವರ್ಷಗಳ ಬಳಿಕ ಪುನಃ ಟಾಟಾ ಮಡಿಲಿಗೆ ಏರ್...

ಕರ್ನಾಟಕ34 mins ago

ಉ.ಪ್ರ.‌ಚುನಾವಣೆ ನಂತರ ರಾಜ್ಯದಲ್ಲಿ‌ಮಹತ್ವದ ಬದಲಾವಣೆ: ಸಿ.ಎಂ ಇಬ್ರಾಹಿಮ್

ಬೆಂಗಳೂರು: ಜನೆವರಿ 27 (ಯು.ಎನ್.ಐ.)‌ ನಾನು ಹೇಳಿದಂತೆ ರಾಜ್ಯದಲ್ಲಿ ರಾಜಕೀಯ ಬೆಳವಣಿಗೆಗಳು ಘಟಿಸುತ್ತಾ ಬಂದಿವೆ.‌ ಉತ್ತರ ಪ್ರದೇಶ ಚುನಾವಣಾ ಬಳಿಕ ಸಾರ್ವತ್ರಿಕ ಚುನಾವಣೆ, ಇಲ್ಲವೇ ರಾಷ್ಟ್ರ ಪತಿ...

ದೇಶ48 mins ago

ವೈಯಕ್ತಿಕ ದ್ವೇಷ: ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ ದುಷ್ಟರು

ನವದೆಹಲಿ: ಜನೆವರಿ 27 (ಯು.ಎನ್.ಐ.) ವೈಯಕ್ತಿಕ ದ್ವೇಷದ ಕಾರಣ ಮಹಿಳೆಯನ್ನು ಅಪಹರಿಸಿ ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ದುಷ್ಟರು ಚಪ್ಪಲಿ ಹಾರ ಹಾಕಿ, ಮುಖಕ್ಕೆ ಕಪ್ಪು...

ಕರ್ನಾಟಕ2 hours ago

ಸಿಎಂ ಭೇಟಿ ಮಾಡಿದ ಚಿಕ್ಕಮಗಳೂರು ಶಾಸಕರ ನಿಯೋಗ

ಬೆಂಗಳೂರು: ಜನೆವರಿ 27 (ಯು.ಎನ್.ಐ.) ಶಾಸಕ ಹಾಗೂ ಬಿಜೆಪಿ ಪ್ರಧಾನ ಕಾರ್ಯಯದರ್ಶಿ ಸಿ ಟಿ ರವಿ ನೇತೃತ್ವದಲ್ಲಿ ಚಿಕ್ಕಮಗಳೂರು ಜಿಲ್ಲೆ ಶಾಸಕರು ಮುಖ್ಯಮಂತ್ರಿ‌ ಬಸವರಾಜ ಎಸ್ ಬೊಮ್ಮಾಯಿ...

ಕರ್ನಾಟಕ2 hours ago

ಸಿಎಂ‌ ಇಬ್ರಾಹಿಂ ಬಂದರೆ ಸ್ವಾಗತ: ಎಚ್‌‌‌ಡಿಕೆ

ಬೆಂಗಳೂರು:ಜನೆವರಿ 27 (ಯು.ಎನ್.ಐ.) ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಸಿಎಂ‌ ಇಬ್ರಾಹಿಂ‌ ಅವರು ಜಾತ್ಯತೀತ ಜನತಾ ದಳಕ್ಕೆ ಬಂದರೆ ಸ್ವಾಗತಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.‌ಕುಮಾರಸ್ವಾಮಿ ಹೇಳಿದ್ದಾರೆ....

ದೇಶ3 hours ago

ದೆಹಲಿಯಲ್ಲಿ ವೀಕೆಂಡ್ ಕರ್ಫ್ಯೂ ಅಂತ್ಯ; ಶಾಲಾ-ಕಾಲೇಜುಗಳು ಬಂದ್

ಹೊಸದಿಲ್ಲಿ: ಜನೆವರಿ 27 (ಯು.ಎನ್.ಐ.) ರಾಷ್ಟ್ರ ರಾಜಧಾನಿ ಜನರಿಗೆ ದೆಹಲಿ ಸರ್ಕಾರ ಗುಡ್ ನ್ಯೂಸ್ ನೀಡಿದೆ. ದೆಹಲಿಯಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿರುವ  ಹಿನ್ನೆಲೆಯಲ್ಲಿ ವೀಕೆಂಡ್ ಕರ್ಫ್ಯೂ ಅನ್ನು...

ಕ್ರೀಡೆ3 hours ago

ಟೀಂ ಇಂಡಿಯಾ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಟ್ವಿಟರ್ ಖಾತೆ ಹ್ಯಾಕ್

ಮುಂಬೈ: ಜನೆವರಿ ೨೭ (ಯು.ಎನ್.ಐ.) ಇತ್ತೀಚೆಗೆ ಬಿಟ್‌ಕಾಯಿನ್ ಸ್ಕ್ಯಾಮರ್ ಗಳು ಟ್ವಿಟರ್ ಖಾತೆಗಳನ್ನು ಹ್ಯಾಕ್ ಮಾಡುತ್ತಿದ್ದು, ಈಗಾಗಲೇ ಸಾಕಷ್ಟು ಮಂದಿಯ ಟ್ವಿಟರ್ ಖಾತೆ ಇದೇ ವಿಚಾರಕ್ಕೆ ಹ್ಯಾಕ್...

ಸಿನೆಮಾ3 hours ago

ನಾಗಚೈತನ್ಯ, ಸಮಂತಾ ವಿಚ್ಛೇದನಕ್ಕೆ ನಟ ನಾಗಾರ್ಜುನ ಕೊಟ್ಟ ಕಾರಣ ಏನು?

ಹೈದರಾಬಾದ್: ಜನೆವರಿ 27 (ಯು.ಎನ್.ಐ.) ಟಾಲಿವುಡ್ ಸ್ಟಾರ್ ಗಳಾದ ನಾಗಚೈತನ್ಯ ಮತ್ತು ಸಮಂತಾ ರುತ್ ಪ್ರಭು 2021ರಲ್ಲಿ ವಿಚ್ಛೇದನ ಘೋಷಿಸಿದರು. ಅಂದಿನಿಂದ ಇಮದಿನವರೆಗೆ ಅವರ ನಡುವಿನ ಪ್ರತ್ಯೇಕತೆಗೆ...

ದೇಶ4 hours ago

ಅನ್ಯ ಜಾತಿ ಹುಡುಗಿ ಮದುವೆಯಾದ ಮಗ: ತಾಯಿ ಮೇಲೆ ಹಲ್ಲೆ

ಚೆನ್ನೈ: ಜನೆವರಿ 27 (ಯು.ಎನ್.ಐ.) ಅನ್ಯ ಜಾತಿಯ ಹುಡುಗಿಯನ್ನು ಮಗ ವಿವಾಹವಾದ ಕಾರಣ ತಾಯಿಯನ್ನು ದೀಪದ ಕಂಬಕ್ಕೆ ಕಟ್ಟಿಹಾಕಿ ಥಳಿಸಿದ ಘಟನೆ ತಮಿಳುನಾಡಿನ ವಿರುದುನಗರ ಜಿಲ್ಲೆಯ ತಿರುಚುಲಿ...

ಸಿನೆಮಾ4 hours ago

‘ದೇವರು ನನ್ನ ಬ್ರಾ ಸೈಜ್ ತೆಗೆದುಕೊಳ್ಳುತ್ತಿದ್ದಾರೆ’ – ನಟಿ ಶ್ವೇತಾ ತಿವಾರಿ

ಭೋಪಾಲ್: ಜನೆವರಿ 27 (ಯು.ಎನ್.ಐ.) ಕಿರುತೆರೆ ಹಾಗೂ ಹಿಂದಿ ಫಿಲಂ ನಟಿ ಶ್ವೇತಾ ತಿವಾರಿ ದೇವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಫ್ಯಾಶನ್ ಸಂಬಂಧಿತ ವೆಬ್ ಸರಣಿಯ...

ಟ್ರೆಂಡಿಂಗ್

Share