Connect with us


      
ದೇಶ

ದೆಹಲಿ: ಕನಿಷ್ಠ ತಾಪಮಾನ 6.4 ಡಿಗ್ರಿ ಸೆಲ್ಸಿಯಸ್‌ ದಾಖಲು

Vidyashree S

Published

on

ನವದೆಹಲಿ: ದೇಶದ ರಾಜಧಾನಿ ನವದೆಹಲಿಯಲ್ಲಿ ಭಾನುವಾರ ಈ ಋತುಮಾನ ಅತ್ಯಂತ ಕನಿಷ್ಠ ತಾಪಮಾನ 6.4 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಶನಿವಾರ ನಗರದಲ್ಲಿ ಕನಿಷ್ಠ ತಾಪಮಾನ 8.3 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ಸೋಮವಾರವೂ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈ ಮಧ್ಯೆ, ದೆಹಲಿಯ ವಾಯುಗುಣಮಟ್ಟ ಸೂಚ್ಯಂಕ (ಎಕ್ಯೂಐ) ಹದಗೆಟ್ಟಿದ್ದು 255 ರಷ್ಟಿತ್ತು. ನೆರೆಯ ಫರಿದಾಬಾದ್‌ನಲ್ಲಿ 288, ಘಾಜಿಯಾಬಾದ್‌ನಲ್ಲಿ 274, ಗುರುಗ್ರಾಮದಲ್ಲಿ 200 ಮತ್ತು ನೋಯ್ಡಾ 213 ರಷ್ಟಿತ್ತು.

ಸೂಚ್ಯಂಕ 301ರಿಂದ 400 ಸೂಚ್ಯಂಕ ಒಳಗಿದ್ದರೆ, ಅದು ಗಾಳಿಯ ಗುಣಮಟ್ಟ ಕಳಪೆಯಾಗಿದೆ ಎಂದು ಸೂಚಿಸುತ್ತದೆ.

Share