Connect with us


      
ಕರ್ನಾಟಕ

ಎಟಿಎಂ: ಹಣ ಎಗರಿಸಲು ಹೊಸ ಕುತಂತ್ರ ಬಳಕೆ

Iranna Anchatageri

Published

on

ಬೆಂಗಳೂರು, ಡಿ 7 (ಯುಎನ್ಐ) ರಾಜಧಾನಿ ಬೆಂಗಳೂರಿನಲ್ಲಿ ಸೈಬರ್ ಚೋರರ ಹಾವಳಿ ಹೆಚ್ಚಾಗ ತೊಡಗಿದೆ. ಇಷ್ಟು ದಿನ ಕ್ರೆಡಿಟ್, ಡೆಬಿಟ್ ಕಾರ್ಡ್ ಗಳನ್ನು ಸ್ಕ್ಯಾನ್ ಮಾಡಿ ವಂಚಿಸುತ್ತಿದ್ದ ತಂಡ, ಇದೀಗ ಹೊಸ ಕುತಂತ್ರವೊಂದನ್ನು ಕಂಡುಕೊಂಡಿದೆ.

ಇಷ್ಟು ದಿನಗಳ ಕಾಲ ಎಟಿಎಂ ಮಶಿನ್ ಗಳಲ್ಲಿ ಸ್ಕ್ಯಾನರ್ ಅಳವಡಿಸಿ ಖದೀಮರು ಹಣವನ್ನು ದೋಚಿ ಪರಾರಿಯಾಗುತ್ತಿದ್ದರು. ಆದ್ರೆ, ಈಗ ಎಟಿಎಂ ಡೇಟಾ ಹ್ಯಾಕ್ ಮಾಡಿ ಹಣವನ್ನು ಕದಿಯುತ್ತಿದ್ದಾರೆ.

ಇತ್ತೀಚಿನ ಖದೀಮರ ಹೊಸ ರೀತಿಯ ಕುತಂತ್ರದಿಂದಾಗಿ ಬೆಂಗಳೂರಿನ ಪೊಲೀಸರಿಗೆ ತಲೆನೋವಾಗಿದ್ದು, ಸೈಬರ್ ಚೋರರ ಕೃತ್ಯಗಳಿಂದಾಗಿ ಶಾಕ್ ಗೆ ಒಳಗಾಗುವಂತೆ ಮಾಡಿದೆ.

ಬೆಂಗಳೂರಿನಲ್ಲಿರುವ ಎಟಿಎಂ ಯಂತ್ರಗಳಿಗೆ ಪೆನ್ ಡ್ರೈವ್ ಹಾಕಿ ಗ್ಯಾಂಗ್ ಡೇಟಾ ಸಂಗ್ರಹಿಸುತ್ತಿದೆ. ಕೆ.ಜಿ ರಸ್ತೆ ಹಾಗೂ ಗಾಂಧಿನಗರದ ಎಸ್‌ಬಿಐ ಎಟಿಎಂ ಕೇಂದ್ರ ಬಳಿ ಇಂತಹ ಪ್ರಕರಣಗಳು ಬೆಳಕಿಗೆ ಬಂದಿದೆ. ಹಂತ ಹಂತವಾಗಿ ಎಟಿಎಂ ಯಂತ್ರದಿಂದ 13.50 ಲಕ್ಷ ರೂಪಾಯಿಯನ್ನು ಸೈಬರ್ ಚೋರರು ಲಪಟಾಯಿಸಿದ್ದಾರೆ.

ಘಟನೆ ಬಳಿಕ ಪಶ್ಚಿಮ ವಿಭಾಗದ ಸೈಬರ್ ಠಾಣೆಗೆ ಎಸ್‌ಬಿಐ ಕಚೇರಿಯ ಮುಖ್ಯ ಅಧಿಕಾರಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರಿಂದ ಸೈಬರ್ ಚೋರರಿಗಾಗಿ ಬಲೆ ಬೀಸಿದ್ದಾರೆ. ಕೆಜಿ ರಸ್ತೆ ಹಾಗೂ ಗಾಂಧಿನಗರದ ಎಟಿಎಂ ಕೇಂದ್ರದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಗಳನ್ನು ಜಾಲಾಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Continue Reading
Share