Connect with us


      




ರಾಜಕೀಯ

ಕ್ರೈಸ್ತ ಸಮುದಾಯಕ್ಕೆ ಅನಗತ್ಯ ಭೀತಿ ಹುಟ್ಟಿಸುವ ಪ್ರಯತ್ನ:ಡಿಕೆಶಿ

UNI Kannada

Published

on

ಬೆಂಗಳೂರು,ಡಿ.14(ಯು.ಎನ್.ಐ)ಕ್ರೈಸ್ತ ಸಮುದಾಯಕ್ಕೆ ಅನಗತ್ಯ ಭೀತಿ ಹುಟ್ಟಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿರುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್,ಮತಾಂತರ ನಿಷೇಧ ಕಾಯ್ದೆಯನ್ನು ಕಾಂಗ್ರೆಸ್ ಪ್ರಬಲವಾಗಿ ವಿರೋಧಿಸುವುದಾಗಿ ಹೇಳಿದರು. ಬಿಜೆಪಿ ಕ್ರೈಸ್ತ ಸಮುದಾಯದಲ್ಲಿ ಭೀತಿ ಹುಟ್ಟಿಸುವ ಪ್ರಯತ್ನ ಮಾಡುತ್ತಿದೆ.ಅನಗತ್ಯ ಗೊಂದಲ ಮೂಡಿಸಲು ಬಿಜೆಪಿ ಹೊರಟಿದೆ.ಕ್ರೈಸ್ತರ ಸೇವೆಯನ್ವು ನಾವು ಸ್ಮರಿಸಲೇಬೇಕು ಎ<ದು ಹೇಳಿದರು.
ಕ್ರೈಸ್ತ ಸಂಸ್ಥೆಗಳು ಸ್ಥಾಪಿಸಿದ  ಎಷ್ಟೊಂದು ಆಸ್ಪತ್ರೆ, ವಿದ್ಯಾಸಂಸ್ಥೆಗಳು ಸೇವೆ ನೀಡುತ್ತಾ ಬಂದಿದೆ. ಹೀಗೆ ಸೇವೆ ಪಡೆದವರೆಲ್ಲ ಮತಾಂತರ ಆದರೇ?ಎಂದು ಪ್ರಶ್ನಿಸಿದ ಡಿ.ಕೆ.ಶಿವಕುಮಾರ್,ಮತಾಂತರ ನಿಷೇಧ ಕಾನೂನು ಜಾರಿ ಎನ್ನುವುದು ಅರ್ಥಹೀನ ಪ್ರಯತ್ನ ಎಂದು ಅಭಿಪ್ರಾಯಪಟ್ಟರು.
ಬಿಜೆಪಿಯ ಈ ಪ್ರಯತ್ನ ಅವರಿಗಲ್ಲ ಇಡೀ ರಾಜ್ಯದ ಭವಿಷ್ಯಕ್ಕೆ ಪೆಟ್ಟು ಬೀಳುತ್ತದೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆಗೂ ಹಿನ್ನಡೆಯಾಗಬಹುದು.ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಆತಂಕ ವ್ಯಕ್ತಪಡಿಸಿದರು.



Share