Connect with us


      
ಕ್ರೀಡೆ

ನೊವಾಕ್ ಜೊಕೊವಿಕ್ ವೀಸಾ ರದ್ದು, ಆಸ್ಟ್ರೇಲಿಯನ್ ಓಪನ್‍ನಲ್ಲಿ ಆಡುವುದು ಅನುಮಾನ

Published

on

ನೊವಾಕ್ ಜೊಕೊವಿಕ್ ವೀಸಾ ರದ್ದು, ಆಸ್ಟ್ರೇಲಿಯನ್ ಓಪನ್‍ನಲ್ಲಿ ಆಡುವುದು ಅನುಮಾನ

ಮೆಲ್ಬೋರ್ನ್: ಜನೆವರಿ 14 (ಯು.ಎನ್.ಐ.) ವಿಶ್ವದ ನಂಬರ್ ಒನ್ ಟೆನಿಸ್ ತಾರೆ ನೊವಾಕ್ ಜೊಕೊವಿಕ್ ವೀಸಾವನ್ನು ಆಸ್ಟ್ರೇಲಿಯಾ ರದ್ದುಗೊಳಿಸಿದ್ದು, ಆಸ್ಟ್ರೇಲಿಯನ್ ಓಪನ್‍ನಲ್ಲಿ ಭಾಗವಹಿಸುವುದು ಅನುಮಾನವಾಗಿದೆ.

ನೊವಾಕ್ ಜೊಕೊವಿಕ್ ವೀಸಾವನ್ನು ಆಸ್ಟ್ರೇಲಿಯಾದ ವಲಸೆ ಸಚಿವ ಅಲೆಕ್ಸ್ ಹಾಕ್ಸ್ ಅವರು ರದ್ದುಗೊಳಿಸಿದ್ದಾರೆ. ಸೋಮವಾರ (ಜನವರಿ 17) ಪ್ರಾರಂಭವಾಗುವ ವರ್ಷದ ಮೊದಲ ಗ್ರ್ಯಾಂಡ್ ಸ್ಲಾಮ್‍ನಲ್ಲಿ ಭಾಗವಹಿಸುವ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ.

‘ಆರೋಗ್ಯ ಮತ್ತು ಸಾರ್ವಜನಿಕ ಹಿತಾಸಕ್ತಿಯ ಆಧಾರದ ಮೇಲೆ ವೀಸಾವನ್ನು ರದ್ದುಗೊಳಿಸಿದ್ದೇನೆ’ ಎಂದು ವಲಸೆ ಸಚಿವ ಅಲೆಕ್ಸ್ ಹಾಕ್ ಟ್ವಿಟರ್‍ನಲ್ಲಿ ಹೇಳಿದ್ದಾರೆ.
ವಿಶ್ವ ನಂ. 1 ಟೆನಿಸ್ ತಾರೆಯ ಕಾನೂನು ತಂಡವು ಆಸ್ಟ್ರೇಲಿಯನ್ ಓಪನ್‍ನಲ್ಲಿ ಉಳಿಯಲು ಮತ್ತು ಆಡಲು ಅವಕಾಶ ನೀಡುವ ಪ್ರಯತ್ನದಲ್ಲಿ ಸಚಿವರ ನಿರ್ಧಾರದ ವಿರುದ್ಧ ತಡೆಯಾಜ್ಞೆ ಸಲ್ಲಿಸಲು ಉದ್ದೇಶಿಸಿದೆ.

ಸರ್ಕಾರದ ನಡೆಯಿಂದಾಗಿ ಜೊಕೊವಿಕ್ ಹೊಸ ವೀಸಾವನ್ನು ಪಡೆಯಲು ಮೂರು ವರ್ಷಗಳ ಕಾಲ ಕಾಯಬೇಕಾಗುತ್ತದೆ. ಅಂದರೆ ಮೂರು ವರ್ಷಗಳ ಕಾಲ ನಿಷೇಧ ಹೇರಲಾಗುತ್ತದೆ. ಜನವರಿ 6 ರಂದು ಮೆಲ್ಬೋರ್ನ್‍ಗೆ ಆಗಮಿಸಿದ ಸ್ವಲ್ಪ ಸಮಯದ ನಂತರ ಜೊಕೊವಿಕ್ ವೀಸಾವ£ ಆಸ್ಟ್ರೇಲಿಯನ್ ಗಡಿ ಫೋರ್ಸ್ ಅಧಿಕಾರಿಗಳು ತಡೆಹಿಡಿದರು. ಲಸಿಕೆ ವಿನಾಯಿತಿ ಪಡೆಯಲು ಸೂಕ್ತ ಸಾಕ್ಷ್ಯವನ್ನು ಒದಗಿಸಲು ವಿಫಲರಾಗಿದ್ದಾರೆ’ ಎಂದು ಕಾರಣ ತಿಳಿಸಿದರು.

ಕೋವಿಡ್‍ಗೆ ಒಳಪಟ್ಟ ಕಾರಣ ಲಸಿಕೆ ಪಡೆದುಕೊಂಡಿರಲಿಲ್ಲ ಎಂದು ವೈದ್ಯಕಿಯ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ನಂತರ ಜೊಕೊವಿಕ್ ಅನ್ನು ಇರಿಸಿದ್ದ ಸ್ಥಳದಿಂದ ಕಳುಹಿಸಿಕೊಡಲಾಗಿತ್ತು.

ಕ್ರೀಡೆ

ಅಂಕುಶ್ ರಘುವಂಶಿ ಟೀಂ ಇಂಡಿಯಾದ ಉದಯೋನ್ಮುಖ ತಾರೆ!

Published

on

ಹೊಸದಿಲ್ಲಿ: ಜನೆವರಿ 23 (ಯು.ಎನ್.ಐ.) ಅಂಡರ್ 19 ವರ್ಲ್ಡ್ ಕಪ್ ಮೂಲಕ ಭಾರತ ಕ್ರಿಕೆಟ್ ತಂಡಕ್ಕೆ ಮತ್ತೊಬ್ಬ ಉದಯೋನ್ಮುಖ ಆಟಗಾರ ದೊರೆತಿದ್ದಾರೆ. ಅವರೇ ದೆಹಲಿ ಮೂಲದ ಅಂಕುಶ್ ರಘವಂಶಿ. ಇತ್ತೀಚೆಗೆ ನಡೆಯುತ್ತಿರುವ ಐಸಿಸಿ ಅಂಡರ್ -19 ವರ್ಲ್ಡ್ ಕಪ್ ನಲ್ಲಿ ಐರ್ಲೆಂಡ್ ವಿರುದ್ಧ ಅರ್ಧಶತಕ, ಉಗಾಂಡಾ ವಿರುದ್ಧ ಶತಕ ಬಾರಿಸುವ ಮೂಲಕ ಮುಂದಿನ ಕ್ರಿಕೆಟ್ ತಾರೆ ಎಂದೇ ಬಿಂಬಿತವಾಗುತ್ತಿದ್ದಾರೆ. ಇದುವರೆಗೆ ನಡೆದ ವಿಶ್ವಕಪ್ ನಲ್ಲಿ ರಘುವಂಶಿ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ಮಾಡಿದ್ದಾರೆ.

ಅಂಡರ್-19 ವಿಶ್ವಕಪ್‌ನಲ್ಲಿ ಉಗಾಂಡ ವಿರುದ್ಧ ಟೀಂ ಇಂಡಿಯಾ 326 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಟೀಂ ಇಂಡಿಯಾದ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಅಂಕುಶ್ ರಘುವಂಶಿ 144 ರನ್ ಗಳಿಸಿದ್ದಾರೆ. ಇದಲ್ಲದೇ, ಶ್ರೀಲಂಕಾ ವಿರುದ್ಧದ ಏಷ್ಯಾಕಪ್ ಫೈನಲ್‌ನಲ್ಲಿ 56 ರನ್ ಗಳಿಸಿ ತಂಡವನ್ನು ಗೆಲ್ಲಿಸಿ ಕೊಟ್ಟಿದ್ದರು. ಅಂಕುಶ್ ರಘುವಂಶಿಗೆ ಸದ್ಯ 16 ವರ್ಷ. 5 ಜೂನ್ 2005ರಂದು ದೆಹಲಿಯಲ್ಲಿ ಜನಿಸಿದ್ದಾರೆ.

ಓಪನರ್ ಅಂಕುಶ್ ರಘುವಂಶಿ ಪೋಷಕರೂ ಸಹ ಕ್ರೀಡಾ ಹಿನ್ನೆಲೆ ಹೊಂದಿದ್ದಾರೆ. ಅಂಕುಶ್ ತಾಯಿ ಮಲಿಕಾ ಭಾರತ ತಂಡದ ಪರ ಬ್ಯಾಸ್ಕೆಟ್‌ ಬಾಲ್ ಆಡಿದ್ದಾರೆ ಮತ್ತು ತಂದೆ ಅವನೀಶ್ ರಘುವಂಶಿ ಟೆನಿಸ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಗುರ್‌ಗಾಂವ್‌ನಲ್ಲಿ ಆರಂಭಿಕ ತರಬೇತಿ ಪಡೆದ ಅಂಕುಶ್, ಏನಾದ್ರೂ ಸಾಧಿಸಬೇಕು ಹಾಗೂ ಉತ್ತಮ ಕ್ರಿಕೆಟಿಗನಾಗುವ ಕನಸಿನೊಂದಿಗೆ ಕೋಚಿಂಗ್‌ಗಾಗಿ 10ನೇ ವಯಸ್ಸಿನಲ್ಲಿ ಮುಂಬೈನತ್ತ ಹೊರಟರು.

10ನೇ ವಯಸ್ಸಿನಲ್ಲಿ ದೆಹಲಿಯಿಂದ ಮುಂಬೈಗೆ ಬಂದ ನಂತರ ಅಂಕುಶ್ ಗೆ ಅಭಿಷೇಕ್ ನಾಯರ್ ಎಂಬವರು ತಮ್ಮ ಮನೆಯಲ್ಲಿಯೇ ತರಬೇತಿ ನೀಡಿದರು. ಬಲಗೈ ಬ್ಯಾಟ್ಸ್‌ಮನ್ ಅಂಕುಶ್ ಅಂಡರ್-19 ವಿಶ್ವಕಪ್‌ನಲ್ಲಿ ಭಾರತ ತಂಡಕ್ಕಾಗಿ ಸತತ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಐರ್ಲೆಂಡ್ ವಿರುದ್ಧ 79 ರನ್ ಮತ್ತು ಉಗಾಂಡಾ ವಿರುದ್ಧ 144 ರನ್ ಗಳಿಸಿದ್ದಾರೆ. ಇಲ್ಲಿಯವರೆಗೆ ಅಂಕುಶ್ 7 ಅಂಡರ್-19 ಒಡಿಐಗಳಲ್ಲಿ 55.83 ಸರಾಸರಿಯಲ್ಲಿ 335 ರನ್ ಗಳಿಸಿದ್ದಾರೆ.

ಐಸಿಸಿ ಅಂಡರ್ – 19 ವಿಶ್ವಕಪ್ ನಲ್ಲಿ ಭಾರತ ತಂಡ ಗ್ರೂಪ್ ಸುತ್ತಿನ ಎಲ್ಲ ಪಂದ್ಯಗಳನ್ನು ಗೆಲ್ಲುವ ಮೂಲಕ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಭಾರತ ತಂಡ ಜನವರಿ 29ರಂದು ಬಾಂಗ್ಲಾದೇಶ ವಿರುದ್ಧ ಕ್ವಾರ್ಟರ್ ಫೈನಲ್ ಪಂದ್ಯವನ್ನು ಆಡಬೇಕಾಗಿದೆ. ಆಂಟಿಗುವಾದ ಕೂಲಿಡ್ಜ್ ಕ್ರಿಕೆಟ್ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ. ಕಳೆದ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ ಎದುರು ಭಾರತ ಫೈನಲ್‌ನಲ್ಲಿ ಸೋಲನುಭವಿಸಿತ್ತು. ಅಂಕುಶ್ ರಘುವಂಶಿ ಮುಂಬರುವ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಇದೆ.

Continue Reading

ಕ್ರೀಡೆ

ಧಾವನ್‌ ದಾಖಲೆ ಮುರಿದು ಸಂಚಲನ ಸೃಷ್ಟಿಸಿದ ರಾಜ್ ಬಾವಾ..

Published

on

By

ಉಗಾಂಡ ಜ 23(ಯುಎನ್‌ ಐ) ಅಂಡರ್ 19 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ವಿಜಯ ಯಾತ್ರೆ ಮುಂದುವರಿದಿದೆ. ಉಗಾಂಡದೊಂದಿಗೆ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಯುವ ಭಾರತ ತಂಡ 326 ರನ್‌ಗಳಿಂದ ಜಯ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 405 ರನ್ ಗಳಿಸಿತು. ಮತ್ತೊಂದೆಡೆ 406 ರನ್ ಗಳ ಬೃಹತ್ ಗುರಿಯ ಬೆನ್ನಟ್ಟಿದ ಉಗಾಂಡ ಕೇವಲ 79 ರನ್ ಗಳಿಗೆ ಆಲೌಟ್ ಆಯಿತು. ಈ ಗೆಲುವಿನಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ ಮನ್‌ ರಾಜ್ ಬಾವಾ (ಔಟಾಗದೆ 162), ಆರಂಭಿಕ ಆಟಗಾರ ಅಂಗ್‌ ಕೃಷ್ಣ ರಘುವಂಶಿ (144) ಪ್ರಮುಖ ಪಾತ್ರ ವಹಿಸಿದರು.

ಆದರೆ, 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ ಎಂಬ ರಾಜ್ ಬಾವಾ ಸೃಷ್ಟಿಸಿದ್ದಾರೆ. ಇದುವರೆಗೆ ಶಿಖರ್ ಧವನ್ (155) ಅವರ ಹೆಸರಿನಲ್ಲಿದ್ದ ದಾಖಲೆಯನ್ನು ರಾಜ್ ಬಾವಾ ಮುರಿದಿದ್ದಾರೆ. ಅದೇ ರೀತಿ ಈ ಬಾರಿಯ ವಿಶ್ವಕಪ್ ನಲ್ಲಿ ರಾಜ್ ಬಾವಾ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ನಲ್ಲಿ ಅದ್ಬುತವಾಗಿ ಮಿಂಚಿದ್ದರು. ಈ ಆಲ್ ರೌಂಡರ್ ಅಂಡರ್-19 ಏಷ್ಯನ್ ಕಪ್ ಭಾರತ ಗೆಲ್ಲುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿತ್ತು.

Continue Reading

ಕ್ರೀಡೆ

SA vs IND: ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಏಕದಿನ ಪಂದ್ಯ.. ವಿರಾಟ್ ಕೊಹ್ಲಿ ದೂರ!

Published

on

By

ಕೇಪ್ ಟೌನ್, ಜ 23(ಯುಎನ್‌ ಐ) ಕೇಪ್‌ ಟೌನ್‌ ನಲ್ಲಿಂದು ದಕ್ಷಿಣ ಆಫ್ರಿಕಾ – ಭಾರತ ನಡುವಣ ಅಂತಿಮ ಏಕದಿನ ಪಂದ್ಯ ನಡೆಯಲಿದೆ. ಈಗಾಗಲೇ ಎರಡು ಏಕ ದಿನ ಪಂದ್ಯಗಳಲ್ಲಿ ಸೋತಿರುವ ಭಾರತ ಸರಣಿ ಕಳೆದುಕೊಂಡಿದೆ. ಎರಡೂ ಏಕದಿನ ಪಂದ್ಯಗಳಲ್ಲಿ ನಾಯಕನಾಗಿ ಕೆ .ಎಲ್ .ರಾಹುಲ್ ಸಫಲರಾಗಿಲ್ಲ… ರಾಹುಲ್ ದ್ರಾವಿಡ್ ಕೂಡ ಮುಖ್ಯ ಕೋಚ್ ಆಗಿ ಪ್ರಮುಖ ಆಟಗಾರರೊಂದಿಗಿನ ಮೊದಲ ಪ್ರವಾಸದಲ್ಲಿ ತೃಪ್ತಿಕರ ಫಲಿತಾಂಶ ಪಡೆಯಲಿಲ್ಲ. ಆದರೆ, ಅಂತಿಮ ಪಂದ್ಯದಲ್ಲಿ ಭಾರತ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡಲಿದೆಯಂತೆ.

ಮೊದಲೆರಡು ಏಕ ದಿನ ಪಂದ್ಯಗಳಲ್ಲಿ ವಿಫಲರಾಗಿದ್ದ ಭುವನೇಶ್ವರ್ ಕುಮಾರ್ ಅಂತಿಮ ಪಂದ್ಯದಲ್ಲಿ ಸ್ಥಾನ ತಪ್ಪಲಿದ್ದು, ಅವರ ಸ್ಥಾನಕ್ಕೆ ದೀಪಕ್ ಚಹಾರ್ ಗೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿದುಬಂದಿದೆ. ಅದೇ ರೀತಿ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಆತನ ಸ್ಥಾನದಲ್ಲಿ ಸೂರ್ಯಕುಮಾರ್‌ ಯಾದವ್‌ ಗೆ ಅವಕಾಶ ನೀಡುವ ಆಲೋಚನೆ ತಂಡದಲ್ಲಿದೆ. ಮೊದಲೆರಡು ಏಕ ದಿನ ಪಂದ್ಯಗಳಲ್ಲಿ ವೈಫಲ್ಯ ಕಂಡಿರುವ ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್ ಅವಕಾಶ ಕೈತಪ್ಪುವ ಸಾಧ್ಯತೆ ಇದೆ. ಒಂದು ವೇಳೆ ಶ್ರೇಯಸ್‌ ಅಯ್ಯರ್‌ ಹೊರಗುಳಿದರೆ ಅವರ ಸ್ಥಾನಕ್ಕೆ ರುತುರಾಜ್‌ ಗಾಯಕ್‌ವಾಡ್‌ ಕಣಕ್ಕಿಳಿಯಲಿದ್ದಾರೆ.

Continue Reading
Advertisement
ದೇಶ8 mins ago

ರಾಷ್ಟ್ರೀಯ ಬಾಲ ಪುರಸ್ಕಾರ್ ಪುರಸ್ಕೃತರೊಂದಿಗೆ ಪ್ರಧಾನಿ ನಾಳೆ ಸಂವಾದ

ನವದೆಹಲಿ, ಜ ೨೩(ಯುಎನ್ ಐ) ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ್ ಪುರಸ್ಕೃತರೊಂದಿಗೆ ನಾಳೆ ವೀಡಿಯೊ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ....

ಅಂಕಣ10 mins ago

ಮಾಯಾಜಾಲದ ಬೆನ್ನು ಹತ್ತಿ

ಅಂಕಣ: ಮುಖಗಳು -೩ ಒಂಬತ್ತನೆ ತರಗತಿ ವಿದ್ಯಾರ್ಥಿ ತಂದೆಯೊಬ್ಬರು ಫೋನ್ ಮಾಡಿದ್ದರು. ‘ಮಗ ಮೊಬೈಲ್ ಕೊಡಿಸು ಎಂದು ಹಠ ಮಾಡುತ್ತಿದ್ದಾನೆ ಏನು ಮಾಡಲಿ?’ ಎಂದು ಕೇಳಿದ್ದರು. ‘ಅವನಿಗೇಕೆ...

ದೇಶ12 mins ago

ಟ್ರೈನ್ ಡ್ರೈವರ್‌ಗೆ ನಿದ್ದೆ ಎಂಬ ಚಿಂತೆ; ಪ್ರಯಾಣಿಕರಿಗೆ ಸುಸ್ತೋ ಸುಸ್ತು..!!

ಶಹಜಹಾನ್ಪುರ್/ಉತ್ತರಪ್ರದೇಶ: ಜನೆವರಿ 23 (ಯು.ಎನ್.ಐ.) “ನನ್ನ ನಿದ್ದೆ ಸಂಪೂರ್ಣವಾಗಿಲ್ಲ. ನಾನು ಸದ್ಯ ರೈಲು ಚಲಾಯಿಸುವುದಿಲ್ಲ.” ಉತ್ತರ ಪ್ರದೇಶದ ಶಹಜಹಾನ್‌ಪುರ ರೈಲು ನಿಲ್ದಾಣದಲ್ಲಿ ಶುಕ್ರವಾರ ಇಂಥದ್ದೊಂದು ವಿಚಿತ್ರ ಘಟನೆ...

ದೇಶ41 mins ago

ಬಂಗಾಳ: ನೇತಾಜಿ ಜನ್ಮದಿನದಂದು ಲಾಠಿ ಚಾರ್ಜ್

ಕೋಲ್ಕತ್ತಾ: ಜನೆವರಿ 23 (ಯು.ಎನ್.ಐ.) ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ಸಂದರ್ಭದಲ್ಲಿಯೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ರಾಜಕೀಯ ನಿಂತಿಲ್ಲ. ಪಶ್ಚಿಮ ಬಂಗಾಳದ...

ಅಂಕಣ2 hours ago

ದಟ್ಟ ಕಾಡಿನಲ್ಲಿ ʻಸಪ್ನೋಂ ಕೀ ರಾಣೀʼ

ಅಂಕಣ: ಒಂದೂರಲ್ಲಿ ಒಂದಿನ- 3 ಈ ಒಂದೂರು ಅನ್ನುವ ಮಾಯೆ ಇದೆಯಲ್ಲ, ಅದು ವಿಚಿತ್ರವಾದದ್ದು. ಅಪ್ಪ ಕಥೆ ಹೇಳುವಾಗ ಪ್ರತಿ ಸಲವೂ ಆ ಕಥೆ ಒಂದೂರಿನಲ್ಲಿ ಅಂತಲೇ...

ಕ್ರೀಡೆ2 hours ago

ಅಂಕುಶ್ ರಘುವಂಶಿ ಟೀಂ ಇಂಡಿಯಾದ ಉದಯೋನ್ಮುಖ ತಾರೆ!

ಹೊಸದಿಲ್ಲಿ: ಜನೆವರಿ 23 (ಯು.ಎನ್.ಐ.) ಅಂಡರ್ 19 ವರ್ಲ್ಡ್ ಕಪ್ ಮೂಲಕ ಭಾರತ ಕ್ರಿಕೆಟ್ ತಂಡಕ್ಕೆ ಮತ್ತೊಬ್ಬ ಉದಯೋನ್ಮುಖ ಆಟಗಾರ ದೊರೆತಿದ್ದಾರೆ. ಅವರೇ ದೆಹಲಿ ಮೂಲದ ಅಂಕುಶ್...

ಅಂಕಣ3 hours ago

ಎಳವೆಯಿಂದ ರಂಗಭೂಮಿ

ನಾದಾಂಕಣ – ಡಾ. ನಾ. ದಾಮೋದರ ಶೆಟ್ಟಿ ಭಾರತೀಯ ಹಾಗೂ ಗ್ರೀಕ್‌ ರಂಗಭೂಮಿಗೆ ಬಹುದೊಡ್ಡ ಪರಂಪರೆಇದೆ ಎನ್ನುವುದು ಸಾರ್ವಕಾಲಿಕ ಸತ್ಯ. ಆದರೆ ಯುರೋಪಿನ ರಂಗಭೂಮಿಯಾಗಲೀ ರಷ್ಯಾ, ಅಮೇರಿಕಾ...

ದೇಶ3 hours ago

ಅರುಣಾಚಲದಿಂದ ನಾಪತ್ತೆಯಾಗಿದ್ದ ಯುವಕ ಚೀನಾ ಗಡಿಯಲ್ಲಿ ಪತ್ತೆ!

ಹೊಸದಿಲ್ಲಿ: ಜನೆವರಿ 23 (ಯು.ಎನ್.ಐ.) ಅರುಣಾಚಲ ಪ್ರದೇಶದಿಂದ ನಾಪತ್ತೆಯಾಗಿದ್ದ ಭಾರತೀಯ ಯುವಕ ಚೀನಾ ಗಡಿಯಲ್ಲಿ ಪತ್ತೆಯಾಗಿದ್ದಾನೆ. ಈ ಬಗ್ಗೆ ಚೀನಾ ಸೈನಿಕರು ಭಾರತೀಯ ಯೋಧರಿಗೆ ಮಾಹಿತಿ ನೀಡಿದ್ದು,...

ಹಣಕಾಸು4 hours ago

ಕೆಲಸ ಬದಲಾಯಿಸಿದ್ದೀರಾ? ಚಿಂತೆ ಬಿಡಿ.. ನಿಮ್ಮ ನೆರವಿಗೆ ಇದೆ ಇಪಿಎಫ್ಒ!

ಬೆಂಗಳೂರು: ಜನೆವರಿ 23 (ಯು.ಎನ್.ಐ.) ಉತ್ತಮ ಸಂಬಳ, ಭದ್ರತೆಯುಳ್ಳ ನೌಕರಿ, ವಿಶೇಷ ಸವಲತ್ತುಗಳು.. ಹೀಗೆ ನಾನಾ ಉದ್ದೇಶಗಳಿಂದ ಉದ್ಯೋಗಿಗಳು ತಮ್ಮ ಕೆಲಸವನ್ನು ಬದಲಾಯಿಸುತ್ತಾ ಇರುತ್ತಾರೆ. ಇಂತಹ ಸಂದರ್ಭದಲ್ಲಿ...

ದೇಶ4 hours ago

ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ… ದೇಶಾದ್ಯಂತ ಪರಾಕ್ರಮ ದಿನವಾಗಿ ಆಚರಣೆ

ನವದೆಹಲಿ, ಜ ೨೩( ಯುಎನ್ ಐ) ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ೧೨೫ನೇ ಜನ್ಮಜಯಂತಿ ಇಂದು. ದೇಶಾದ್ಯಂತ ಪರಾಕ್ರಮ ದಿನವಾಗಿ ನೇತಾಜಿ...

ಟ್ರೆಂಡಿಂಗ್

Share