Connect with us


      




ವಿದೇಶ

ಎರಡು ವರ್ಷಗಳ ನಂತರ ವಲಸಿಗರಿಗೆ, ವಿದ್ಯಾರ್ಥಿಗಳಿಗೆ ಪ್ರವೇಶ ಮುಕ್ತಗೊಳಿಸಿದ ಆಸ್ಟ್ರೇಲಿಯಾ

Vanitha Jain

Published

on

ಸಿಡ್ನಿ, ಡಿಸೆಂಬರ್ 15(ಯು.ಎನ್.ಐ) ಕೋವಿಡ್-19 ಲಾಕ್‍ಡೌನ್‍ನಿಂದ ಎದುರಾದ ಆರ್ಥಿಕ ಸಂಕಷ್ಟದಿಂದ ಚೇತರಿಸಿಕೊಳ್ಳುವ ಸಲುವಾಗಿ ಸತತ ಎರಡು ವರ್ಷಗಳ ನಂತರ ನುರಿತ ವಲಸಿಗರು ಹಾಗೂ ವಿದೇಶಿ ವಿದ್ಯಾರ್ಥಿಗಳಿಗೆ ಆಸ್ಟ್ರೇಲಿಯಾವು ಪ್ರವೇಶಕ್ಕೆ ಮುಕ್ತ ಅವಕಾಶ ನೀಡಿದೆ ಮತ್ತು ಅಂತರಾಷ್ಟ್ರೀಯ ಪ್ರಯಾಣಕ್ಕೂ ಅವಕಾಶ ಮಾಡಿಕೊಟ್ಟಿದೆ.

ಒಮೈಕ್ರಾನ್ ಭೀತಿ ಹಿನ್ನೆಲೆ ಎರಡು ವಾರಗಳ ನಂತರ ಪ್ರವೇಶಕ್ಕೆ ಅನುಮತಿ ನೀಡಬೇಕೆಂದು ಒತ್ತಾಯಿಸಿದ ಆರೋಗ್ಯ ಇಲಾಖೆಗೆ ಮಣಿಯದ ಆಸ್ಟ್ರೇಲಿಯಾ ಓಡಾಟಕ್ಕೆ ಅನುವು ಮಾಡಿಕೊಟ್ಟಿದೆ.

ಈ ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸಸ್, ನಾವು ವೈರಸ್‍ನೊಂದಿಗೆ ಬದುಕಲಿದ್ದೇವೆ. ಪುನಃ ಹಿಂದಿನಂತೆಯೇ ಆರ್ಥಿಕ ಸಂಕಷ್ಟ ಎದುರಿಸಲು ಸಿದ್ಧರಿಲ್ಲ. ನಾವು ಉತ್ತಮ ಗುಣಮಟ್ಟದ ವ್ಯಾಕ್ಸಿನ್ ಪಡೆದುಕೊಂಡಿರುವ ವೈರಸ್‍ನೊಂದಿಗೆ ಹೋರಾಡಲು ಸಮರ್ಥರಿದ್ದೇವೆ. ಆದ ಕಾರಣ ವೈರಸ್‍ಗೆ ಶರಣಾಗಬೇಕಿಲ್ಲ. ಈಗಾಗಲೇ ಆಸ್ಟ್ರೇಲಿಯಾವು 90 ಪ್ರತಿಶತದಷ್ಟು ಎರಡು ಡೋಸ್ ವ್ಯಾಕ್ಸಿನ್ ಪಡೆದುಕೊಂಡಿದೆ. ಹಾಗಾಗಿ ಒಮೈಕ್ರಾನ್‍ಗೆ ಭೀತರಾಗಿ ಬೂಸ್ಟರ್ ಮೊರೆ ಹೋಗುವ ಪರಿಸ್ಥಿತಿ ಇಲ್ಲ ಎಂದು ಹೇಳಿದರು.

ಆಸ್ಟ್ರೇಲಿಯಾವು 2020ರಲ್ಲಿ ಕೋವಿಡ್-19 ಕಾರಣ ಪ್ರವೇಶವನ್ನು ನಿಷೇಧಿಸಿತ್ತು. ಇದೀಗ ಎರಡು ವರ್ಷಗಳ ನಂತರ ಪ್ರವೇಶಕ್ಕೆ ಅನುವು ಮಾಡಿಕೊಡುವ ಮೂಲಕ ಕಾರ್ಮಿಕರ ಕೊರತೆಯನ್ನು ನೀಗಿಸುವುದರ ಜೊತೆಯಲ್ಲಿ ಆರ್ಥಿಕವಾಗಿ ಅಭಿವೃದ್ಧಿ ಸಾಧ್ಯವಾಗಲಿದೆ. ವಿದೇಶಿ ವಿದ್ಯಾರ್ಥಿಗಳಿಂದಾಗಿ ವರ್ಷಕ್ಕೆ 35 ಶತಕೋಟಿ ಆಸ್ಟ್ರೇಲಿಯನ್ ಡಾಲರ್ ಆದಾಯ ಬರಲಿದ್ದು, ಇದರಿಂದಾಗಿ ವ್ಯವಹಾರಗಳಲ್ಲಿ ಉದ್ಯೋಗಿಗಳನ್ನು ನಿಯೋಜಿಸಿಕೊಳ್ಳಲು ಸಹಾಯಕವಾಗಲಿದೆ. ಅಕ್ಟೋಬರ್ ಅಂತ್ಯದಲ್ಲಿ ಸುಮಾರು 160,000 ವಿದ್ಯಾರ್ಥಿಗಳು ಸೇರಿದಂತೆ 235,000 ವಿದೇಶಿಗರು ಆಸ್ಟ್ರೇಲಿಯಾ ವೀಸಾಗಳನ್ನು ಹೊಂದಿದ್ದಾರೆ ಎಂದು ಅಧಿಕೃತ ಮಾಹಿತಿಯು ತೋರಿಸಿದೆ.

ಆಸ್ಟ್ರೇಲಿಯಾದಲ್ಲಿ 1,360 ಕೋವಿಡ್-19 ಹೊಸ ಪ್ರಕರಣಗಳು ದಾಖಲಾಗಿವೆ. ಕೋವಿಡ್ ಪ್ರಾರಂಭವಾದಾಗಿನಿಂದ ಆಸ್ಟ್ರೇಲಿಯಾದಲ್ಲಿ ಸುಮಾರು 235,500 ಪ್ರಕರಣಗಳು ದಾಖಲಾಗಿದೆ ಮತ್ತು 2,117 ಸಾವುಗಳು ಸಂಭವಿಸಿದೆ.

Share