Connect with us


      
ನ್ಯಾಯಾಲಯ

ಬಿ.ಆರ್ .ಶೆಟ್ಟಿಗೆ ಬಿಗ್ ಶಾಕ್…. ಸಾವಿರ ಕೋಟಿ ರೂಪಾಯಿ ಪಾವತಿಸಲು ಲಂಡನ್‌ ಕೋರ್ಟ್‌ ಆದೇಶ

Published

on

ಲಂಡನ್‌, ಜ 11(ಯುಎನ್‌ ಐ) ಅಬುಧಾಬಿಯ ಭಾರತೀಯ ಕೋಟ್ಯಾಧಿಪತಿ ಬಾವ ಗುತು ರಘುರಾಮ್ ಶೆಟ್ಟಿ ಅಲಿಯಾಸ್ ಬಿ ಆರ್ ಶೆಟ್ಟಿ ಅವರಿಗೆ ಭಾರೀ ಹಿನ್ನಡೆ ಯಾಗಿದೆ. ವಿದೇಶಿ ವಿನಿಮಯ ವ್ಯವಹಾರ ವಹಿವಾಟಿನ ಭಾಗವಾಗಿ ಲಂಡನ್ ಬ್ಯಾಂಕ್ ಬಾರ್ಕ್ಲೇಸ್‌ ಗೆ ಪೂರ್ಣ ಮೊತ್ತ ಪಾವತಿಸಬೇಕೆಂದು ಲಂಡನ್‌ ಕೋರ್ಟ್‌ ಆದೇಶ ಹೊರಡಿಸಿದೆ. 131 ಮಿಲಿಯನ್ (ಭಾರತೀಯ ಕರೆನ್ಸಿಯಲ್ಲಿ ರೂ 9,68,27,99,500) ಪಾವತಿಸಬೇಕಿದೆ.

2020 ರಲ್ಲಿ ಲಂಡನ್‌ ಬ್ಯಾಂಕ್‌ ಬಾರ್ಕ್ಲೇಸ್ ವಿದೇಶಿ ವಿನಿಮಯ ವ್ಯಾಪಾರ ವಹಿವಾಟು ಒಪ್ಪಂದದ ಭಾಗವಾಗಿ ಬಿ ಆರ್ ಶೆಟ್ಟಿ ಸದರಿ ಬ್ಯಾಂಕ್‌ ಗೆ ದೊಡ್ಡ ಮೊತ್ತದ ಹಣ ಪಾವತಿಸಬೇಕಾಗಿತ್ತು. ಇದೇ ವಿಷಯವಾಗಿ ದುಬೈ ಕೋರ್ಟ್ ಬಿ.ಆರ್ ಶೆಟ್ಟಿ ವಿರುದ್ಧ ತೀರ್ಪು ನೀಡಿತ್ತು. ದುಬೈ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಅವರು ಲಂಡನ್ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಈ ಪ್ರಕರಣದ ಕುರಿತು ಕಳೆದ ವರ್ಷ ಡಿಸೆಂಬರ್‌ನಲ್ಲಿ ಬ್ರಿಟನ್‌ ನ್ಯಾಯಾಲಯ ವಿಚಾರಣೆಯ ಸಂದರ್ಭದಲ್ಲಿ ಬಿ.ಆರ್.ಶೆಟ್ಟಿ ಪರ ವಕೀಲರು ತಮ್ಮ ಕಕ್ಷಿದಾರರು ಆರ್ಥಿಕ ಸಂಕಷ್ಟದಲ್ಲಿದ್ದು, ತೀರ್ಪನ್ನು ಮುಂದೂಡಬೇಕು ಎಂದು ಕೋರಿದ್ದರು. ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು 2022ರ ಜನವರಿ 10ಕ್ಕೆ ಮುಂದೂಡಿತ್ತು.

ನಿನ್ನೆ ಮತ್ತೆ ಪ್ರಕರಣದ ವಿಚಾರಣೆ ನಡೆಸಿದ ಲಂಡನ್ ಕೋರ್ಟ್ ಬಿ.ಆರ್. ಶೆಟ್ಟಿ ಅವರ ಮನವಿಯನ್ನು ತಿರಸ್ಕರಿಸಿದೆ. ಈ ಸಂದರ್ಭದಲ್ಲಿ ಬಾರ್ಕ್ಲೇಸ್ ಗೆ ಪಾವತಿಸಬೇಕಿರುವ, ತಮ್ಮ ಕಕ್ಷಿದಾರ ಬಿ.ಆ ರ್.ಶೆಟ್ಟಿಯವರ ಆಸ್ತಿಗಳನ್ನು ಮುಟ್ಟುಗೋಲುಹಾಕಿಕೊಳ್ಳಲಾಗಿದೆ. ತೀರ್ಪನ್ನು ಮುಂದೂಡುವಂತೆ ಮತ್ತೊಮ್ಮೆ ನ್ಯಾಯಾಲಯವನ್ನು ಕೋರಿದರು. ಆದರೆ ಲಂಡನ್ ಕೋರ್ಟ್ ಆ ಮನವಿಯನ್ನು ತಿರಸ್ಕರಿಸಿದೆ . ಬಿ ಆರ್ ಶೆಟ್ಟಿ ಬ್ಯಾಂಕ್ ಬಾರ್ಕ್ಲೇಸ್‌ಗೆ 131 ಮಿಲಿಯನ್ ರೂ ಪಾವತಿಸಲು ಆದೇಶಿಸಿದೆ. ಜೊತೆಗೆ ಭಾರತ ಸೇರಿದಂತೆ ಇತರ ದೇಶಗಳು, ಲಂಡನ್‌ ನಲ್ಲಿರುವ ಬಿ.ಆರ್.ಶೆಟ್ಟಿ ಅವರ ಆಸ್ತಿ ಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಬ್ಯಾಂಕ್‌ ಪ್ರತಿನಿಧಿಗಳು ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡಿದ್ದಾರೆ.

ಯಾರು ಈ ಬಿ ಆರ್ ಶೆಟ್ಟಿ ?
ಬಾವಗುತ್ತು ರಘುರಾಮ ಶೆಟ್ಟಿ (ಬಿಆರ್ ಶೆಟ್ಟಿ) ಐಷಾರಾಮಿ ಜೀವನಕ್ಕೆ ಮತ್ತೊಂದು ಹೆಸರು. ಇಲ್ಲದ ಆಸ್ತಿ ಇದೆ ಎಂದು ತೋರಿಸಿ ಐಷಾರಾಮಿ ಜೀವನ ಸಾಗಿಸುವಲ್ಲಿ ಅವರಿಗೆ ಅವರೇ ಸಾಟಿ ಎಂಬ ಆರೋಪಗಳಿವೆ. ಕರ್ನಾಟಕದ ಉಡುಪಿಯಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದರು. ತಮ್ಮ ಶೈಕ್ಷಣಿಕ ಅರ್ಹತೆಗಳೊಂದಿಗೆ ಫಾರ್ಮಾ ವಲಯದಲ್ಲಿ ಮಾರಾಟ ಪ್ರತಿನಿಧಿಯಾಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದ್ದರು.

1973ರಲ್ಲಿ ಉಡುಪಿಯಿಂದ ಯುಎಇಗೆ ತೆರಳಿ ಅಲ್ಲಿ ಫಾರ್ಮಸಿಯಲ್ಲಿ ಕ್ಲಿನಿಕಲ್ ಪದವಿ ಪಡೆದರು . ನಂತರ ಅವರು 1975 ರಲ್ಲಿ ‘ಅಬುಧಾಬಿಯಲ್ಲಿ ತಮ್ಮದೇ ಆದ NMC ಹೆಲ್ತ್ ಹೆಸರಿನಲ್ಲಿ ಆಸ್ಪತ್ರೆಗಳ ನೆಟ್‌ ವರ್ಕ್‌ ಸ್ಥಾಪಿಸಿದರು. ಮುಂದಿನ ದಿನಗಳಲ್ಲಿ ಶತಕೋಟಿ ಆಸ್ತಿ ಸಂಪಾದಿಸಿದ್ದರು. 2019 ರಲ್ಲಿ ಫೋರ್ಬ್ಸ್ ಅಂಕಿಅಂಶಗಳ ಪ್ರಕಾರ, ಅವರು ಭಾರತದ 42 ನೇ ಶ್ರೀಮಂತ ವ್ಯಕ್ತಿ, ಅಬುಧಾಬಿಯ ಐದನೇ ಶ್ರೀಮಂತ ಭಾರತೀಯರಲ್ಲಿ ಒಬ್ಬರು ಎಂದು ಹೇಳಿತ್ತು. ಪ್ರಸ್ತುತ 19 ದೇಶಗಳಲ್ಲಿ ಅವರಿಗೆ ಸೇರಿದ 194 ಆಸ್ಪತ್ರೆಗಳಿವೆ.

ನ್ಯಾಯಾಲಯ

ಬೆಂಕಿ ಹಚ್ಚಿದ ಪ್ರಕರಣ: ದಿನೇಶ್ ಯಾದವ್‌ಗೆ ಜೈಲು

Published

on

ನವದೆಹಲಿ: ಜನೆವರಿ 20 (ಯ.ಎನ್.ಐ.) 2020ರ ಮನೆಗೆ ಬೆಂಕಿ ಹಚ್ಚಿದ ಗಲಭೆಗೆ ಸಂಬಂಧಿಸಿದಂತೆ ಪ್ರಮುಖ ಅಪರಾಧಿ ದಿನೇಶ್ ಯಾದವ್‌ಗೆ ದೆಹಲಿ ನ್ಯಾಯಾಲಯವು ಗುರುವಾರ ಐದು ವರ್ಷಗಳ ಕಾಲ ಜೈಲು ಶಿಕ್ಷೆ, ದಂಡ ವಿಧಿಸಿದೆ.

ಕಳೆದ ತಿಂಗಳು, ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವೀರೇಂದ್ರ ಭಟ್ ಅಪರಾಧಿ ದಿನೇಶ್ ಯಾದವ್‌ ಅವರನ್ನು ದೋಷಿ ಎಂದು ತೀರ್ಪು ನೀಡಿದ್ದರು.

12,000 ದಂಡವನ್ನು ಪಾವತಿಸುವಂತೆಯೂ ಯಾದವ್‌ಗೆ ಸೂಚಿಸಲಾಗಿದೆ ಎಂದು ವಿಚಾರಣೆ ವೇಳೆ ಅವರನ್ನು ಪ್ರತಿನಿಧಿಸಿದ್ದ ವಕೀಲ ಶಿಖಾ ಗಾರ್ಗ್ ಹೇಳಿದ್ದಾರೆ.

ಪ್ರಾಸಿಕ್ಯೂಷನ್ ಪ್ರಕಾರ, ಯಾದವ್ “ಗಲಭೆಯ ಗುಂಪಿನ ಸಕ್ರಿಯ ಸದಸ್ಯ” ಮತ್ತು ಫೆಬ್ರವರಿ 25 ರಂದು ರಾತ್ರಿ ಮನೋರಿ ಎಂಬ 73 ವರ್ಷದ ಮಹಿಳೆಯ ಮನೆಯನ್ನು ಧ್ವಂಸಗೊಳಿಸಿದ್ದಲ್ಲದೇ ಬೆಂಕಿ ಕೂಡ ಹಚ್ಚಿದ್ದರು.

ಸುಮಾರು 150-200 ಗಲಭೆಕೋರರ ಗುಂಪೊಂದು ತನ್ನ ಮನೆಯವರು ಇಲ್ಲದಿದ್ದಾಗ ತನ್ನ ಮನೆಯ ಮೇಲೆ ದಾಳಿ ಮಾಡಿ ಎಲ್ಲಾ ವಸ್ತುಗಳನ್ನು ಮತ್ತು ಎಮ್ಮೆಯನ್ನು ಲೂಟಿ ಮಾಡಿದೆ ಎಂದು ಮನೋರಿ ಆರೋಪಿಸಿದ್ದಾರೆ. 25 ವರ್ಷದ ಯಾದವ್ ಅವರನ್ನು ಜೂನ್ 8, 2020 ರಂದು ಬಂಧಿಸಲಾಯಿತು.

Continue Reading

ನ್ಯಾಯಾಲಯ

ಧರ್ಮ ನಿಂದನೆ ಸಂದೇಶ ಕಳುಹಿಸಿದ ಮಹಿಳೆಗೆ ಮರಣದಂಡನೆ

Published

on

ಇಸ್ಲಾಮಾಬಾದ್: ಜನೆವರಿ 20 (ಯು.ಎನ್.ಐ.) ಸ್ನೇಹಿತನಿಗೆ ಧರ್ಮನಿಂದನೆಯ ಸಂದೇಶಗಳನ್ನು ಕಳುಹಿಸಿದ ಮಹಿಳೆಗೆ ಪಾಕಿಸ್ತಾನದ ನ್ಯಾಯಾಲಯವು ಮರಣದಂಡನೆ ಶಿಕ್ಷೆ ವಿಧಿಸಿದೆ.

2020ರಲ್ಲಿ ಫಾರೂಕ್ ಹಸನಾತ್ ಎಂಬಾತನಿಗೆ ಧರ್ಮ ನಿಂದನೆಯ ಸಂದೇಶ ಕಳುಹಿಸಿದ್ದಳು. ಈತ ಅನಿಕಾ ಅಟಿಕ್ ವಿರುದ್ಧ ದೂರು ದಾಖಲಿಸಿದ್ದನು. ಈ ಬಗ್ಗೆ ಅನಿಕಾ ಅಟಿಕ್ ಅವರನ್ನು ಬುಧವಾರ ವಿಚಾರಣೆ ನಡೆಸಿದ ರಾವಲ್ಪಿಂಡಿಯ ನ್ಯಾಯಾಲಯವು ತಪ್ಪಿತಸ್ಥರೆಂದು ಘೋಷಿಸಿತು.

ಅನಿಕಾ ಅಟ್ಟಿಕ್ ಪ್ರವಾದಿ ವಿರುದ್ಧ ಧರ್ಮನಿಂದನೆ, ಇಸ್ಲಾಂ ಧರ್ಮವನ್ನು ಅವಮಾನಿಸಿದ್ದಾರೆ ಮತ್ತು ಸೈಬರ್ ಕ್ರೈಮ್ ಕಾನೂನುಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಅನಿಕಾ ಮತ್ತು ಫಾರೂಕ್ ಸ್ನೇಹಿತರಾಗಿದ್ದರು. ಆದರೆ ಅಂತಿಮವಾಗಿ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಕಾಣಿಸಿಕೊಂಡ ನಂತರ ಅನಿಕಾ ಅವರಿಗೆ ವಾಟ್ಸಾಪ್ ನಲ್ಲಿ ‘ಧರ್ಮನಿಂದನೆಯ’ ಸಂದೇಶಗಳನ್ನು ಕಳುಹಿಸಿದ್ದಾರೆ. ಪವಿತ್ರ ಪ್ರವಾದಿಗಳ ಧರ್ಮನಿಂದೆಯ ವ್ಯಂಗ್ಯಚಿತ್ರಗಳನ್ನು ಕಳುಹಿಸಿದ್ದಾರೆ ಮತ್ತು ವಾಟ್ಸಾಪ್ ನಲ್ಲಿ ಪ್ರವಾದಿಗಳ ಬಗ್ಗೆ ಟೀಕೆಗಳನ್ನು ಮಾಡಿದ್ದಾರೆ. ಆಕೆಯ ಫೇಸ್‌ಬುಕ್ ಖಾತೆಯನ್ನು ಧರ್ಮನಿಂದೆಯ ವಿಷಯವನ್ನು ರವಾನಿಸಲು ಬಳಸುತ್ತಿದ್ದಾರೆ. ಉದ್ದೇಶಪೂರ್ವಕವಾಗಿ ಪವಿತ್ರ ನೀತಿವಂತ ವ್ಯಕ್ತಿಗಳನ್ನು ತಮ್ಮ ಸಂದೇಶಗಳ ಅಪವಿತ್ರಗೊಳಿಸಿದ್ದಾರೆ ಮತ್ತು ಮುಸ್ಲಿಮರ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಫರೂಕ್ ಸಂದೇಶಗಳನ್ನು ಅಳಿಸಿ ಹಾಕಿ, ಕ್ಷಮೆ ಕೇಳುವಂತೆ ಹೇಳಿದ್ದಾರೆ. ಇದಕ್ಕೆ ಅನಿಕಾ ನಿರಾಕರಿಸಿದ್ದರು ಎನ್ನಲಾಗುತ್ತಿದೆ.

Continue Reading

ನ್ಯಾಯಾಲಯ

ಬಿಇಎಂಎಲ್ ಖಾಸಗೀಕರಣ: ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

Published

on

ಬೆಂಗಳೂರು: ಜನೆವರಿ 18 (ಯು.ಎನ್.ಐ.) ಸಾರ್ವಜನಿಕ ಉದ್ದಿಮೆಯಾದ ಬಿಇಎಂಎಲ್ ಲಿಮಿಟೆಡ್ ಅನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿರುವ ಮನವಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಬಿಇಎಂಎಲ್ ಲಿಮಿಟೆಡ್ಗೆ ಮಂಗಳವಾರ ಕರ್ನಾಟಕ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಬಿಇಎಂಎಲ್ ಸಿಬ್ಬಂದಿ ಸಂಘಟನೆ ಮತ್ತು ಬಿಇಎಂಎಲ್ ಉದ್ಯೋಗಿಗಳ ಸಂಘಟನೆಗಳು ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲರು “ಕಳೆದ ಹತ್ತು ವರ್ಷಗಳಿಂದ ಬಿಇಎಂಎಲ್ ಅನ್ನು ಖಾಸಗೀಕರಣಗೊಳಿಸುತ್ತಿರುವುದರ ವಿರುದ್ಧ ಅರ್ಜಿದಾರರು ಹೋರಾಟ ನಡೆಸುತ್ತಿದ್ದಾರೆ. ಆದರೆ, ರಕ್ಷಣಾ ಇಲಾಖೆ ಇದಕ್ಕೆ ಬೆಂಬಲ ನೀಡಿಲ್ಲ. ಖಾಸಗೀಕರಣಗೊಳಿಸುವುದಕ್ಕಾಗಿ ಹಾಲಿ ಸರ್ಕಾರವು ಸಚಿವಾಲಯವನ್ನು ಸೃಷ್ಟಿಸಿದೆ.

ಈ ವಿಚಾರದ ಕುರಿತು ಆ ಸಚಿವಾಲಯ ನಿರ್ಧಾರ ಕೈಗೊಳ್ಳುತ್ತದೆ. ಇಚ್ಛೆ ಅಭಿವ್ಯಕ್ತಿಗಾಗಿಆಹ್ವಾನ ನೀಡಲಾಗಿದೆ. ಬಿಇಎಂಎಲ್ ಅನ್ನು ಖಾಸಗೀಕರಣಗೊಳಿಸಲು ಕೈಗೊಂಡಿರುವ ನಿರ್ಧಾರ ಬಹಿರಂಗಪಡಿಸಬೇಕು ಎಂದು ಮಧ್ಯಂತರ ಕೋರಿಕೆ ಮಾಡಿದ್ದೇವೆ. ಈ ಸಂಬಂಧ ಮಾಹಿತಿ ಹಕ್ಕು ಕಾಯಿದೆ ಅಡಿ ಮಾಹಿತಿ ಕೋರಲಾಗಿದೆ. ಹೀಗಾಗಿ, ನ್ಯಾಯಾಲಯವು ಯಥಾಸ್ಥಿತಿ ಕಾಪಾಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು” ಎಂದು ಕೋರಿದರು. ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠವು ನೋಟಿಸ್ ಜಾರಿ ಮಾಡಿತು.

Continue Reading
Advertisement
ದೇಶ3 mins ago

ಬಂಗಾಳ: ನೇತಾಜಿ ಜನ್ಮದಿನದಂದು ಲಾಠಿ ಚಾರ್ಜ್

ಕೋಲ್ಕತ್ತಾ: ಜನೆವರಿ 23 (ಯು.ಎನ್.ಐ.) ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ಸಂದರ್ಭದಲ್ಲಿಯೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ರಾಜಕೀಯ ನಿಂತಿಲ್ಲ. ಪಶ್ಚಿಮ ಬಂಗಾಳದ...

ಅಂಕಣ53 mins ago

ದಟ್ಟ ಕಾಡಿನಲ್ಲಿ ʻಸಪ್ನೋಂ ಕೀ ರಾಣೀʼ

ಅಂಕಣ: ಒಂದೂರಲ್ಲಿ ಒಂದಿನ- 3 ಈ ಒಂದೂರು ಅನ್ನುವ ಮಾಯೆ ಇದೆಯಲ್ಲ, ಅದು ವಿಚಿತ್ರವಾದದ್ದು. ಅಪ್ಪ ಕಥೆ ಹೇಳುವಾಗ ಪ್ರತಿ ಸಲವೂ ಆ ಕಥೆ ಒಂದೂರಿನಲ್ಲಿ ಅಂತಲೇ...

ಕ್ರೀಡೆ1 hour ago

ಅಂಕುಶ್ ರಘುವಂಶಿ ಟೀಂ ಇಂಡಿಯಾದ ಉದಯೋನ್ಮುಖ ತಾರೆ!

ಹೊಸದಿಲ್ಲಿ: ಜನೆವರಿ 23 (ಯು.ಎನ್.ಐ.) ಅಂಡರ್ 19 ವರ್ಲ್ಡ್ ಕಪ್ ಮೂಲಕ ಭಾರತ ಕ್ರಿಕೆಟ್ ತಂಡಕ್ಕೆ ಮತ್ತೊಬ್ಬ ಉದಯೋನ್ಮುಖ ಆಟಗಾರ ದೊರೆತಿದ್ದಾರೆ. ಅವರೇ ದೆಹಲಿ ಮೂಲದ ಅಂಕುಶ್...

ಅಂಕಣ2 hours ago

ಎಳವೆಯಿಂದ ರಂಗಭೂಮಿ

ನಾದಾಂಕಣ – ಡಾ. ನಾ. ದಾಮೋದರ ಶೆಟ್ಟಿ ಭಾರತೀಯ ಹಾಗೂ ಗ್ರೀಕ್‌ ರಂಗಭೂಮಿಗೆ ಬಹುದೊಡ್ಡ ಪರಂಪರೆಇದೆ ಎನ್ನುವುದು ಸಾರ್ವಕಾಲಿಕ ಸತ್ಯ. ಆದರೆ ಯುರೋಪಿನ ರಂಗಭೂಮಿಯಾಗಲೀ ರಷ್ಯಾ, ಅಮೇರಿಕಾ...

ದೇಶ2 hours ago

ಅರುಣಾಚಲದಿಂದ ನಾಪತ್ತೆಯಾಗಿದ್ದ ಯುವಕ ಚೀನಾ ಗಡಿಯಲ್ಲಿ ಪತ್ತೆ!

ಹೊಸದಿಲ್ಲಿ: ಜನೆವರಿ 23 (ಯು.ಎನ್.ಐ.) ಅರುಣಾಚಲ ಪ್ರದೇಶದಿಂದ ನಾಪತ್ತೆಯಾಗಿದ್ದ ಭಾರತೀಯ ಯುವಕ ಚೀನಾ ಗಡಿಯಲ್ಲಿ ಪತ್ತೆಯಾಗಿದ್ದಾನೆ. ಈ ಬಗ್ಗೆ ಚೀನಾ ಸೈನಿಕರು ಭಾರತೀಯ ಯೋಧರಿಗೆ ಮಾಹಿತಿ ನೀಡಿದ್ದು,...

ಹಣಕಾಸು3 hours ago

ಕೆಲಸ ಬದಲಾಯಿಸಿದ್ದೀರಾ? ಚಿಂತೆ ಬಿಡಿ.. ನಿಮ್ಮ ನೆರವಿಗೆ ಇದೆ ಇಪಿಎಫ್ಒ!

ಬೆಂಗಳೂರು: ಜನೆವರಿ 23 (ಯು.ಎನ್.ಐ.) ಉತ್ತಮ ಸಂಬಳ, ಭದ್ರತೆಯುಳ್ಳ ನೌಕರಿ, ವಿಶೇಷ ಸವಲತ್ತುಗಳು.. ಹೀಗೆ ನಾನಾ ಉದ್ದೇಶಗಳಿಂದ ಉದ್ಯೋಗಿಗಳು ತಮ್ಮ ಕೆಲಸವನ್ನು ಬದಲಾಯಿಸುತ್ತಾ ಇರುತ್ತಾರೆ. ಇಂತಹ ಸಂದರ್ಭದಲ್ಲಿ...

ದೇಶ3 hours ago

ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ… ದೇಶಾದ್ಯಂತ ಪರಾಕ್ರಮ ದಿನವಾಗಿ ಆಚರಣೆ

ನವದೆಹಲಿ, ಜ ೨೩( ಯುಎನ್ ಐ) ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ೧೨೫ನೇ ಜನ್ಮಜಯಂತಿ ಇಂದು. ದೇಶಾದ್ಯಂತ ಪರಾಕ್ರಮ ದಿನವಾಗಿ ನೇತಾಜಿ...

ಕರ್ನಾಟಕ4 hours ago

ಇಡೀ ವರ್ಷ ಸುಭಾಷ್ ಚಂದ್ರಬೋಸ್ ಜನ್ಮದಿನಾಚರಣೆಗೆ ತೀರ್ಮಾನ: ಸಿಎಂ

ಬೆಂಗಳೂರು : ಜನೆವರಿ 23 (ಯು.ಎನ್.ಐ.) ರಾಜ್ಯ ಸರ್ಕಾರದ ವತಿಯಿಂದ ವರ್ಷವಿಡೀ ನೇತಾಜಿ ಸುಭಾಷ್ ಚಂದ್ರಬೋಸ್ ರವರ 125ನೇ ಜನ್ಮ ದಿನಾಚರಣೆಯನ್ನ ಆಚರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ...

ಅಂಕಣ4 hours ago

ಸ್ವಾತಂತ್ರ್ಯಕ್ಕಿಂತ ದೊಡ್ಡದು ಇನ್ಯಾವುದಿದೆ ?

‌ಅಂಕಣ: ದಿಟನುಡಿ -೩ ಕಳೆದ ವಾರ ನನ್ನ ಕೈರೋಪ್ರಾಕ್ಟರ್ ರೇ ಬಳಿ ಹೋಗಿದ್ದೆ. ಏಕೋ ಗೊತ್ತಿಲ್ಲ ಕೆಲ ದಿನಗಳ ಹಿಂದೆ ಸೊಂಟ ಹಿಡಿದಿತ್ತು. ಏಳಲು, ಕೂರಲು, ನಿಲ್ಲಲು...

ದೇಶ4 hours ago

ಪಂಜಾಬ್ ಚುನಾವಣೆ: ಕೆಂಪು ಕೋಟೆ ಹಿಂಸಾಚಾರದ ಆರೋಪಿಗೆ ರೈತ ಸಂಘಟನೆಯಿಂದ ಟಿಕೆಟ್!

ಚಂಡೀಗಢ: ಜನೆವರಿ 23 (ಯು.ಎನ್.ಐ.) ರೈತರ ಸಂಘಟನೆ ಯುನೈಟೆಡ್ ಸಮಾಜ ಮೋರ್ಚಾ ಪಂಜಾಬ್ ವಿಧಾನಸಭಾ ಚುನಾವಣೆಗೆ 35 ಅಭ್ಯರ್ಥಿಗಳ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮಾಜಿ...

ಟ್ರೆಂಡಿಂಗ್

Share