Connect with us


      




ಕ್ರೀಡೆ

ಏಳು ಬ್ಯಾಡ್ಮಿಂಟನ್ ಆಟಗಾರರಿಗೆ ಕೋವಿಡ್ ಪಾಸಿಟಿವ್

Published

on

ನವದೆಹಲಿ, ಜ 13( ಯುಎನ್‌ ಐ) ಯೋನೆಕ್ಸ್- ಸನ್‌ರೈಸ್ ಇಂಡಿಯಾ ಓಪನ್ 2022 ರಲ್ಲಿ ಪಾಲ್ಗೊಳ್ಳಲಿರುವ ಏಳು ಬ್ಯಾಡ್ಮಿಂಟನ್ ಆಟಗಾರರಿಗೆ ಕೋವಿಡ್ -19 ಪಾಸಿಟಿವ್ ಎಂದು ಕಂಡುಬಂದಿದೆ. ಸೋಂಕು ದೃಢಪಟ್ಟವರಲ್ಲಿ ಕಿಡಂಬಿ ಶ್ರೀಕಾಂತ್, ಅಶ್ವಿನಿ ಪೊನಪ್ಪ, ರಿತಿಕಾ ರಾಹುಲ್ ಠಾಕ್ರೆ, ಟ್ರೇಸಾ ಜಾಲಿ, ಮಿಥುನ್ ಮಂಜುನಾಥ್, ಸಿಮ್ರಾನ್ ಅಮನ್ ಸಿಂಗ್ ಮತ್ತು ಖುಷಿ ಗುಪ್ತಾ ಸೇರಿದ್ದಾರೆ.
ಕೋವಿಡ್‌ -19 ಪಾಸಿಟಿವ್‌ ಎಂದು ತಿಳಿದು ಬಂದ ನಂತರ ಇಂಡಿಯಾ ಓಪನ್‌ ಟೂರ್ನಿಯಿಂದ ಏಳು ಮಂದಿ ಆಟಗಾರರನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (ಡಬ್ಲ್ಯೂಬಿಎಫ್) ಹೇಳಿಕೆಯಲ್ಲಿಎಂದು ತಿಳಿಸಿದೆ.

ಕ್ರೀಡೆ

ಟೀಂ ಇಂಡಿಯಾ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಟ್ವಿಟರ್ ಖಾತೆ ಹ್ಯಾಕ್

Published

on

ಮುಂಬೈ: ಜನೆವರಿ ೨೭ (ಯು.ಎನ್.ಐ.) ಇತ್ತೀಚೆಗೆ ಬಿಟ್‌ಕಾಯಿನ್ ಸ್ಕ್ಯಾಮರ್ ಗಳು ಟ್ವಿಟರ್ ಖಾತೆಗಳನ್ನು ಹ್ಯಾಕ್ ಮಾಡುತ್ತಿದ್ದು, ಈಗಾಗಲೇ ಸಾಕಷ್ಟು ಮಂದಿಯ ಟ್ವಿಟರ್ ಖಾತೆ ಇದೇ ವಿಚಾರಕ್ಕೆ ಹ್ಯಾಕ್ ಆಗಿದೆ. ಇದೀಗ ಈ ಪಟ್ಟಿಗೆ ಕ್ರನಾಲ್ ಸೇರ್ಪಡೆಗೊಂಡಿದ್ದಾರೆ.

ಹೌದು ಟೀಂ ಇಂಡಿಯಾ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಅವರ ಟ್ವಿಟರ್ ಖಾತೆಯು ಹ್ಯಾಕ್ ಆಗಿದೆ. ಬಿಟ್ ಕಾಯಿನ್ ವಂಚಕರು ಹ್ಯಾಕ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹ್ಯಾಕ್ ಆದ ಅಕೌಂಟ್ ನಿಂದ ಬೆಳಿಗ್ಗೆ ಸುಮಾರು ೭.೩೦ಕ್ಕೆ ಅನುಸರಿಸಿದ್ದಕ್ಕಾಗಿ ಕೃನಾಲ್ ಅವರಿಗೆ ಧನ್ಯವಾದಗಳು ಎಂಬ ವಾಕ್ಯ ಮರು ಟ್ವೀಟ್ ಆಗಿದೆ.

ಕೃನಾಲ್ ಪಾಂಡ್ಯ ಅವರ ಹ್ಯಾಕ್ ಆದ ಅಕೌಂಟ್ ನಿಂದ ಮಾಡಿದ ಹಲವಾರು ಟ್ವೀಟ್ ಗಳಲ್ಲಿ ಒಂದರಲ್ಲಿ ‘ಬಿಟ್‌ಕಾಯಿನ್ ಗಳ ಖಾತೆಯನ್ನು’ ಮಾರಾಟ ಮಾಡುವುದಾಗಿ ಹೇಳಿಕೊಂಡಿದ್ದಾರೆ.

ಕೃನಾಲ್ ಅವರು ಇಲ್ಲಿಯವರೆಗೆ ಭಾರತೀಯ ಕ್ರಿಕೆಟ್ ತಂಡಕ್ಕಾಗಿ ಐದು ಏಕದಿನ ಸರಣಿಗಳು ಮತ್ತು 19 ಟಿ೨೦ಐ ಗಳನ್ನು ಆಡಿದ್ದಾರೆ ಮತ್ತು 2022 ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಅವರ ದೇಶೀಯ ತಂಡ ಬರೋಡಾ ಪರವಾಗಿ ಕೊನೆಯ ಬಾರಿಗೆ ಕಾಣಿಸಿಕೊಂಡರು. ಐಪಿಎಲ್ 2022 ರ ಮೆಗಾ ಹರಾಜು ಮುಂದಿನ ತಿಂಗಳು ನಡೆಯಲಿದೆ ಮತ್ತು ಕ್ರುನಾಲ್ ಈಗ ಅದನ್ನು ಎದುರು ನೋಡುತ್ತಿದ್ದಾರೆ ಏಕೆಂದರೆ 10 ತಂಡಗಳು ಇಡೀ ವಿಶ್ವದ ಅಗ್ರ T20 ಆಟಗಾರರಿಗಾಗಿ ಪರಸ್ಪರ ಸೆಣಸಾಡಲಿವೆ.

ಫೆಬ್ರವರಿ 12 ಮತ್ತು 13 ರಂದು ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಹರಾಜು ನಡೆಯಲಿದೆ. ಭಾರತದಲ್ಲಿನ ಕೋವಿಡ್-19 ಪರಿಸ್ಥಿತಿಯನ್ನು ನೋಡಿದರೆ, ಐಪಿಎಲ್ 2022 ಅನ್ನು ಭಾರತದಲ್ಲಿ ಆಡುವ ಎಲ್ಲಾ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಕಳೆದ ವರ್ಷ IPL 2021 ರ ಮೊದಲಾರ್ಧವನ್ನು ಭಾರತದಲ್ಲಿ ಆಡಲಾಯಿತು ಮತ್ತು ಉಳಿದವು ಯುಎಇಯಲ್ಲಿ ಪೂರ್ಣಗೊಂಡಿತು.

Continue Reading

ಕ್ರೀಡೆ

ವೆಸ್ಟ್ ಇಂಡೀಸ್ ತಂಡ ಪ್ರಕಟ; ಕೆಮರ್ ರೋಚ್‌ಗೆ ಬುಲಾವ್!

Published

on

ಹೊಸದಿಲ್ಲಿ: ಜನೆವರಿ 27 (ಯು.ಎನ್.ಐ.) ಫೆಬ್ರುವರಿ 6 ರಿಂದ ಆರಂಭವಾಗಲಿರುವ ಭಾರತ ವಿರುದ್ಧದ ಏಕದಿನ ಸರಣಿಗೆ ವೆಸ್ಟ್ ಇಂಡೀಸ್ ತಂಡವನ್ನು ಪ್ರಕಟಿಸಿದೆ. ವೆಸ್ಟ್ ಇಂಡೀಸ್ ಕೆಮರ್ ರೋಚ್, ಎನ್ಕ್ರುಮಾ ಬೋನರ್ ಮತ್ತು ಬ್ರಾಂಡನ್ ಕಿಂಗ್ ಅವರನ್ನು ಮರಳಿ ಕರೆ ತರಲಾಗಿದೆ. ಆದರೆ, ವೆಸ್ಟ್ ಇಂಡೀಸ್ ಇನ್ನೂ ತನ್ನ ಟಿ20 ತಂಡವನ್ನು ಪ್ರಕಟಿಸಿಲ್ಲ. ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡದ ನಾಯಕತ್ವವನ್ನು ಕೀರನ್ ಪೊಲಾರ್ಡ್ ವಹಿಸಿದ್ದಾರೆ. ಇದಕ್ಕೂ ಮುನ್ನ ಭಾರತ ನಿನ್ನೆ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮತ್ತು ಟಿ20 ತಂಡವನ್ನು ಪ್ರಕಟಿಸಿತ್ತು.

ಎರಡು ವರ್ಷಗಳ ಬಳಿಕ ಕೆಮರ್ ರೋಚ್ ಆಗಮನ

ವೆಸ್ಟ್ ಇಂಡೀಸ್ ಪರ 92 ಏಕದಿನ ಪಂದ್ಯಗಳಲ್ಲಿ 124 ವಿಕೆಟ್ ಗಳನ್ನು ಪಡೆದಿರುವ ವೇಗದ ಬೌಲರ್ ಕೆಮರ್ ರೋಚ್, 2019ರ ಆಗಸ್ಟ್ ನಲ್ಲಿ ಭಾರತದ ವಿರುದ್ಧ ಕೊನೆಯ ಒಡಿಐ ಪಂದ್ಯ ಆಡಿದ್ದರು. ಈ ಸರಣಿಯ ನಂತರ ರೋಚ್ ಟೆಸ್ಟ್ ತಂಡದ ಭಾಗವಾಗಿದ್ದರಿಂದ ಅವರಿಗೆ ODIಗಳಲ್ಲಿ ಆಡಲು ಅವಕಾಶ ಸಿಕ್ಕಿರಲಿಲ್ಲ. ಇದೇ ರೀತಿ ಆರಂಭಿಕ ಬ್ಯಾಟ್ಸ್‌ಮನ್ ಬ್ರಾಂಡನ್ ಕಿಂಗ್ ಅವರನ್ನು ಭಾರತದ ವಿರುದ್ಧದ ಸರಣಿಗೆ ಬುಲಾವ್ ನೀಡಲಾಗಿದೆ. ಬ್ರಾಂಡನ್ ಕಿಂಗ್ ಅವರು ಟಿ20 ಮಾದರಿಯಲ್ಲಿ ವೆಸ್ಟ್ ಇಂಡೀಸ್ ಪರ ಉತ್ತಮ ಆಟ ಪ್ರದರ್ಶಿಸುತ್ತಿದ್ದಾರೆ.

ಫೆಬ್ರವರಿ 6 ರಿಂದ ಪ್ರಾರಂಭವಾಗುವ ODI ಸರಣಿಗಾಗಿ, ವೆಸ್ಟ್ ಇಂಡೀಸ್ ಕೂಡ ತಮ್ಮ ತಂಡದಲ್ಲಿ ಯುವ ಆಟಗಾರರೊಂದಿಗೆ ಅನುಭವಕ್ಕೆ ಆದ್ಯತೆ ನೀಡಿದೆ. ಡ್ಯಾರೆನ್ ಬ್ರಾವೋ, ಕೋಮರ್ ರೋಚ್, ಕಿರೊಣ್ ಪೊಲಾರ್ಡ್, ಜೇಸನ್ ಹೋಲ್ಡರ್ ಜೊತೆಗೆ ಯುವ ಆಟಗಾರರಾದ ಹೇಡನ್ ವಾಲ್ಷ್, ಅಲ್ಜಾರಿ ಜೋಸೆಫ್, ಬ್ರಾಂಡನ್ ಕಿಂಗ್‌ಗೆ ಅವಕಾಶ ಸಿಕ್ಕಿದೆ.

ತಂಡ: ಕಿರೊನ್ ಪೊಲಾರ್ಡ್ (ನಾಯಕ), ಕೆಮರ್ ರೋಚ್, ನ್ಕ್ರುಮಾ ಬೊನ್ನರ್, ಬ್ರಾಂಡನ್ ಕಿಂಗ್, ಫ್ಯಾಬಿಯನ್ ಅಲೆನ್, ಡ್ಯಾರೆನ್ ಬ್ರಾವೋ, ಶಮ್ರಾ ಬ್ರೂಕ್ಸ್, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಕಿಲ್ ಹೊಸೈನ್, ಅಲ್ಜಾರಿ ಜೋಸೆಫ್, ನಿಕೋಲಸ್ ಪೂರನ್, ರೊಮಾರಿಯೊ ಶೆಫರ್ಡ್, ಓಡಿಯನ್ ವಾಲ್ಶ್ ಜೆರ್, ಓಡಿಯನ್ ಸ್ಮಿತ್.

Continue Reading

ಕ್ರೀಡೆ

ಲಸಿಕೆ ಹಾಕಿಸಿಕೊಳ್ಳದಿದ್ದರೂ ಫ್ರೆಂಚ್ ಓಪನ್ ರಿಂಗ್ ನಲ್ಲಿ ಜೊಕೊವಿಕ್..!

Published

on

ಪ್ಯಾರಿಸ್: ಜನೆವರಿ 27 (ಯು.ಎನ್.ಐ.) ಲಸಿಕೆ ಹಾಕಿಸಿಕೊಳ್ಳದ ಕಾರಣ ಆಸ್ಟ್ರೇಲಿಯನ್ ಓಪನ್‌ನಿಂದ ಹೊರಗುಳಿದಿರುವ ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಮುಂಬರುವ ಫ್ರೆಂಚ್ ಓಪನ್‌ನಲ್ಲಿ ಆಡುವ ಲಕ್ಷಣಗಳು ಗೋಚರಾವಾಗುತ್ತಿವೆ. ಫ್ರಾನ್ಸ್ ನಲ್ಲಿ ಕೋವಿಡ್ ನಿಯಮಾವಳಿಗಳನ್ನು ಸಡಿಲಗೊಳಿಸಲಾಗುತ್ತಿದೆ. ಅದರಲ್ಲಿ ಪ್ರಮುಖವಾಗಿ ಲಸಿಕೆ ಹಾಕಿಸಿಕೊಳ್ಳದವರ ಬಗ್ಗೆ ಉಲ್ಲೇಖ ಮಾಡಲಾಗಿದೆ.

ಫ್ರಾನ್ಸ್ ನಲ್ಲಿ ಕೋವಿಡ್ ಹೊಸ ಗೈಡ್ ಲೈನ್ಸ್ ಅನ್ನು ಮುಂದಿನ ಸೋಮವಾರದಿಂದ ಜಾರಿಗೆ ಬರಲಿದ್ದು, ಅದರಲ್ಲಿ ವ್ಯಾಕ್ಸಿನ್ ಡೋಸ್ ಪಡೆಯದಿದ್ದರೂ ಪರವಾಗಿಲ್ಲ ಎಂದು ಹೇಳಿದೆ. ಆದರೆ, ಒಂದು ಷರತ್ತನ್ನು ವಿಧಿಸಿರುವ ಫ್ರಾನ್ಸ್ ಸರ್ಕಾರ, ವ್ಯಕ್ತಿಯೊಬ್ಬ ಹಿಂದಿನ ಆರು ತಿಂಗಳಲ್ಲಿ ಕೋವಿಡ್ ಗೆ ತುತ್ತಾಗಿರಬಾರದು. ಈ ವರದಿಯನ್ನು ಹೊಂದಿದ್ದರೆ ಫ್ರಾನ್ಸ್ ಪ್ರವೇಶ ಮಾಡಲು ಕಡ್ಡಾಯ ಲಸಿಕೆಯಿಂದ ವಿನಾಯಿತಿ ಇದೆ ಎಂಬ ಹೊಸ ನಿಯಮವನ್ನು ಅಳವಡಿಸಿಕೊಂಡಿದೆ.

ಇದು ಜಾಕೊವಿಕ್ ಗೆ ಫ್ರಾನ್ಸ್ ಪ್ರವೇಶಕ್ಕೆ ಹಾದಿ ಸುಗಮವಾದಂತಾಗಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯನ್ ಓಪನ್‌ ಸಮಯದಲ್ಲಿ ಜಾಕೋಗೆ ಸೋಂಕು ಧೃಢಪಟ್ಟಿತ್ತು ಎಂದು ಅವರೇ ಬಹಿರಂಗಪಡಿಸಿದ್ದರು.  ಈ ಹಿನ್ನೆಲೆಯಲ್ಲಿ ಜೊಕೊವಿಕ್ ಅವರು ಮುಂದಿನ ಗ್ರ್ಯಾಂಡ್ ಸ್ಲಾಮ್ ಪಂದ್ಯಾವಳಿಯಾದ ಮೇ ಮತ್ತು ಜೂನ್‌ನಲ್ಲಿ ಫ್ರೆಂಚ್ ಓಪನ್‌ನಲ್ಲಿ ಆಡಬಹುದು.

Continue Reading
Advertisement
ಕರ್ನಾಟಕ18 mins ago

ಉ.ಪ್ರ.‌ಚುನಾವಣೆ ನಂತರ ರಾಜ್ಯದಲ್ಲಿ‌ಮಹತ್ವದ ಬದಲಾವಣೆ: ಸಿ.ಎಂ ಇಬ್ರಾಹಿಮ್

ಬೆಂಗಳೂರು: ಜನೆವರಿ 27 (ಯು.ಎನ್.ಐ.)‌ ನಾನು ಹೇಳಿದಂತೆ ರಾಜ್ಯದಲ್ಲಿ ರಾಜಕೀಯ ಬೆಳವಣಿಗೆಗಳು ಘಟಿಸುತ್ತಾ ಬಂದಿವೆ.‌ ಉತ್ತರ ಪ್ರದೇಶ ಚುನಾವಣಾ ಬಳಿಕ ಸಾರ್ವತ್ರಿಕ ಚುನಾವಣೆ, ಇಲ್ಲವೇ ರಾಷ್ಟ್ರ ಪತಿ...

ದೇಶ33 mins ago

ವೈಯಕ್ತಿಕ ದ್ವೇಷ: ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ ದುಷ್ಟರು

ನವದೆಹಲಿ: ಜನೆವರಿ 27 (ಯು.ಎನ್.ಐ.) ವೈಯಕ್ತಿಕ ದ್ವೇಷದ ಕಾರಣ ಮಹಿಳೆಯನ್ನು ಅಪಹರಿಸಿ ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ದುಷ್ಟರು ಚಪ್ಪಲಿ ಹಾರ ಹಾಕಿ, ಮುಖಕ್ಕೆ ಕಪ್ಪು...

ಕರ್ನಾಟಕ2 hours ago

ಸಿಎಂ ಭೇಟಿ ಮಾಡಿದ ಚಿಕ್ಕಮಗಳೂರು ಶಾಸಕರ ನಿಯೋಗ

ಬೆಂಗಳೂರು: ಜನೆವರಿ 27 (ಯು.ಎನ್.ಐ.) ಶಾಸಕ ಹಾಗೂ ಬಿಜೆಪಿ ಪ್ರಧಾನ ಕಾರ್ಯಯದರ್ಶಿ ಸಿ ಟಿ ರವಿ ನೇತೃತ್ವದಲ್ಲಿ ಚಿಕ್ಕಮಗಳೂರು ಜಿಲ್ಲೆ ಶಾಸಕರು ಮುಖ್ಯಮಂತ್ರಿ‌ ಬಸವರಾಜ ಎಸ್ ಬೊಮ್ಮಾಯಿ...

ಕರ್ನಾಟಕ2 hours ago

ಸಿಎಂ‌ ಇಬ್ರಾಹಿಂ ಬಂದರೆ ಸ್ವಾಗತ: ಎಚ್‌‌‌ಡಿಕೆ

ಬೆಂಗಳೂರು:ಜನೆವರಿ 27 (ಯು.ಎನ್.ಐ.) ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಸಿಎಂ‌ ಇಬ್ರಾಹಿಂ‌ ಅವರು ಜಾತ್ಯತೀತ ಜನತಾ ದಳಕ್ಕೆ ಬಂದರೆ ಸ್ವಾಗತಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.‌ಕುಮಾರಸ್ವಾಮಿ ಹೇಳಿದ್ದಾರೆ....

ದೇಶ3 hours ago

ದೆಹಲಿಯಲ್ಲಿ ವೀಕೆಂಡ್ ಕರ್ಫ್ಯೂ ಅಂತ್ಯ; ಶಾಲಾ-ಕಾಲೇಜುಗಳು ಬಂದ್

ಹೊಸದಿಲ್ಲಿ: ಜನೆವರಿ 27 (ಯು.ಎನ್.ಐ.) ರಾಷ್ಟ್ರ ರಾಜಧಾನಿ ಜನರಿಗೆ ದೆಹಲಿ ಸರ್ಕಾರ ಗುಡ್ ನ್ಯೂಸ್ ನೀಡಿದೆ. ದೆಹಲಿಯಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿರುವ  ಹಿನ್ನೆಲೆಯಲ್ಲಿ ವೀಕೆಂಡ್ ಕರ್ಫ್ಯೂ ಅನ್ನು...

ಕ್ರೀಡೆ3 hours ago

ಟೀಂ ಇಂಡಿಯಾ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಟ್ವಿಟರ್ ಖಾತೆ ಹ್ಯಾಕ್

ಮುಂಬೈ: ಜನೆವರಿ ೨೭ (ಯು.ಎನ್.ಐ.) ಇತ್ತೀಚೆಗೆ ಬಿಟ್‌ಕಾಯಿನ್ ಸ್ಕ್ಯಾಮರ್ ಗಳು ಟ್ವಿಟರ್ ಖಾತೆಗಳನ್ನು ಹ್ಯಾಕ್ ಮಾಡುತ್ತಿದ್ದು, ಈಗಾಗಲೇ ಸಾಕಷ್ಟು ಮಂದಿಯ ಟ್ವಿಟರ್ ಖಾತೆ ಇದೇ ವಿಚಾರಕ್ಕೆ ಹ್ಯಾಕ್...

ಸಿನೆಮಾ3 hours ago

ನಾಗಚೈತನ್ಯ, ಸಮಂತಾ ವಿಚ್ಛೇದನಕ್ಕೆ ನಟ ನಾಗಾರ್ಜುನ ಕೊಟ್ಟ ಕಾರಣ ಏನು?

ಹೈದರಾಬಾದ್: ಜನೆವರಿ 27 (ಯು.ಎನ್.ಐ.) ಟಾಲಿವುಡ್ ಸ್ಟಾರ್ ಗಳಾದ ನಾಗಚೈತನ್ಯ ಮತ್ತು ಸಮಂತಾ ರುತ್ ಪ್ರಭು 2021ರಲ್ಲಿ ವಿಚ್ಛೇದನ ಘೋಷಿಸಿದರು. ಅಂದಿನಿಂದ ಇಮದಿನವರೆಗೆ ಅವರ ನಡುವಿನ ಪ್ರತ್ಯೇಕತೆಗೆ...

ದೇಶ4 hours ago

ಅನ್ಯ ಜಾತಿ ಹುಡುಗಿ ಮದುವೆಯಾದ ಮಗ: ತಾಯಿ ಮೇಲೆ ಹಲ್ಲೆ

ಚೆನ್ನೈ: ಜನೆವರಿ 27 (ಯು.ಎನ್.ಐ.) ಅನ್ಯ ಜಾತಿಯ ಹುಡುಗಿಯನ್ನು ಮಗ ವಿವಾಹವಾದ ಕಾರಣ ತಾಯಿಯನ್ನು ದೀಪದ ಕಂಬಕ್ಕೆ ಕಟ್ಟಿಹಾಕಿ ಥಳಿಸಿದ ಘಟನೆ ತಮಿಳುನಾಡಿನ ವಿರುದುನಗರ ಜಿಲ್ಲೆಯ ತಿರುಚುಲಿ...

ಸಿನೆಮಾ4 hours ago

‘ದೇವರು ನನ್ನ ಬ್ರಾ ಸೈಜ್ ತೆಗೆದುಕೊಳ್ಳುತ್ತಿದ್ದಾರೆ’ – ನಟಿ ಶ್ವೇತಾ ತಿವಾರಿ

ಭೋಪಾಲ್: ಜನೆವರಿ 27 (ಯು.ಎನ್.ಐ.) ಕಿರುತೆರೆ ಹಾಗೂ ಹಿಂದಿ ಫಿಲಂ ನಟಿ ಶ್ವೇತಾ ತಿವಾರಿ ದೇವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಫ್ಯಾಶನ್ ಸಂಬಂಧಿತ ವೆಬ್ ಸರಣಿಯ...

ಸಿನೆಮಾ4 hours ago

ವಿವಾಹ ಜೀವನಕ್ಕೆ ಕಾಲಿರಿಸಿದ ಮೌನಿರಾಯ್, ಸೂರಜ್ ನಂಬಿಯಾರ್

ಪಣಜಿ: ಜನೆವರಿ 27 (ಯು.ಎನ್.ಐ.) ಬಾಲಿವುಡ್ ನಟಿ ಮೌನಿ ರಾಯ್ ಮತ್ತು ಉದ್ಯಮಿ ಸೂರಜ್ ನಂಬಿಯಾರ್ ಇಂದು ಗೋವಾದಲ್ಲಿ ವಿವಾಹ ಜೀವನಕ್ಕೆ ಕಾಲಿರಿಸಿದ್ದಾರೆ. ಇವರ ವಿವಾಹದ ಫೋಟೋಗಳು...

ಟ್ರೆಂಡಿಂಗ್

Share