Connect with us


      




ಕರ್ನಾಟಕ

15 ನಾಮನಿರ್ದೇಶಿತ ಸದಸ್ಯರ ಮತದಾನಕ್ಕೆ ಪ್ರತ್ಯೇಕ ವ್ಯವಸ್ಥೆ : ಹೈಕೋರ್ಟ್​

Bindushree Hosuru

Published

on

ಬೆಂಗಳೂರು: ಡಿ. 09 (ಯುಎನ್ಐ) ನಗರ ಎಂಎಲ್​ಸಿ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ನಾಮನಿರ್ದೇಶಿತ ಸದಸ್ಯರ ಮತದಾನಕ್ಕೆ ಅವಕಾಶ ಮಾಡಿ ಕೊಡುವ ಸಲುವಾಗಿ ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಎಂದು ಹೈಕೋರ್ಟ್​ ಹೇಳಿದೆ.

15 ನಾಮನಿರ್ದೇಶಿತ ಸದಸ್ಯರ ಮತಗಳನ್ನು ಮುಚ್ಚಿದ ಲಕೋಟೆಯಲ್ಲಿ ಹಾಕಿಡಬೇಕು. ಕೋರ್ಟ್ ಅನುಮತಿಯಿಲ್ಲದೆ ಫಲಿತಾಂಶ ಪ್ರಕಟಿಸಬಾರದು ಎಂದು ನ್ಯಾ. ಎಂ.ನಾಗಪ್ರಸನ್ನ ರವರಿದ್ದ ಹೈಕೋರ್ಟ್ ಪೀಠ ಆದೇಶ ಮಾಡಿದೆ.

ಕಾಂಗ್ರೆಸ್ ಅಭ್ಯರ್ಥಿ ಯೂಸುಫ್ ಷರೀಫ್ ಈ ಸಂಬಂಧ ರಿಟ್ ಅರ್ಜಿ ಸಲ್ಲಿಸಿದ್ದರು. ಆನೇಕಲ್‌, ಅತ್ತಿಬೆಲೆ, ಮಹದೇವಪುರ ಪುರಸಭೆಯ 15 ನಾಮನಿರ್ದೇಶಿತ ಸದಸ್ಯರ ಮತದಾನ ಪ್ರಶ್ನಿಸಿದ್ದರು.

Share