Connect with us


      




ಬೆಂಗಳೂರು

ಬೆಂಗಳೂರು; ಗುಡುಗು ಸಹಿತ ಭಾರಿ ಮಳೆ

Kumara Raitha

Published

on

ಬೆಂಗಳೂರು ಮೇ ೦೧ (ಯು.ಎನ್.‌ಐ.) ನಗರದ ಹಲವೆಡೆ ಗುಡುಗು ಸಹಿತ ಭಾರಿ ಮಳೆಯಾಗುತ್ತಿದೆ. ಬೆಳಗ್ಗೆಯಿಂದ ಎಂದಿನಂತೆ ಬಿಸಿಲಿತ್ತು. ಮಧ್ಯಾಹ್ನ ಮೋಡ ಕವಿದ ವಾತಾವರಣ ಉಂಟಾಯಿತು. ಗುಡುಗು ಶುರುವಾಯಿತು. ಸಂಜೆ ೪.೩೦ ರ ವೇಳೆಗೆ  ಮಳೆ ಆರಂಭವಾಯ್ತು.

ನಿಧಾನವಾಗಿ ಶುರುವಾದ ಮಳೆ ಕ್ರಮೇಣ ಅಬ್ಬರದ ಸ್ವರೂಪ ಪಡೆದುಕೊಂಡಿತು.  ಕೆಲವು ಪ್ರದೇಶಗಳಲ್ಲಿ ಆಲಿಕಲ್ಲು ಸಹಿತ  ಮಳೆಯಾಗಿದೆ.  ನಗರದ ಕೆಲವೆಡೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ತೊಂದರೆಗೀಡಾಗಿದ್ದಾರೆ.

ಒಂದೂವರೆ ತಾಸಿಗೂ ಹೆಚ್ಚು ಸಮಯ ಸುರಿದ ಮಳೆಯಿದಾಗಿ ವಾತಾವಾರಣದ ತಾಪಮಾನ ಕುಗ್ಗಿದೆ. ಸಂಜೆ ೬ರ ವೇಳೆಗೆ ಗರಿಷ್ಠ ತಾಪಮಾನ ೨೯ ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ರಾತ್ರಿಯ ವೇಳೆಗೆ ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆಯಿದೆ.

Share