Connect with us


      
ಅಪರಾಧ

ಬೆಂಗಳೂರು ಚೂರಿ ಇರಿತ: ಮೂವರು ಆರೋಪಿಗಳ ಬಂಧನ

Iranna Anchatageri

Published

on

ಬೆಂಗಳೂರು: ಏಪ್ರಿಲ್ 06 (ಯು.ಎನ್.ಐ.) ನಗರದಲ್ಲಿ ನಿನ್ನೆ ರಾತ್ರಿ, ಚೂರಿ ಇರಿತಕ್ಕೆ ಒಬ್ಬ ಯುವಕ ಬಲಿಯಾದ ಅಮಾನವೀಯ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ಇದುವರೆಗೆ ಮೂರು ಮಂದಿಯನ್ನು ಪೋಲೀಸರು ಬಂಧಿಸಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ, ತಕ್ಷಣಕ್ಕೆ ಸಿಕ್ಕ ಮಾಹಿತಿ ಹಾಗೂ ಮೂಲಗಳ, ಪ್ರಕಾರ, ಉರ್ದು ಮಾತನಾಡದ ಕಾರಣ, ಯುವಕ ನನ್ನು ಚೂರಿಯಿಂದ ಬಳಸಿ ಕೊಲೆಗೈಯ್ಯಲಾಗಿದೆ ಎಂದು ಹೇಳಿಕೆ ನೀಡಲಾಗಿದೆ. ಆದರೆ, ಪ್ರಸ್ತುತ ಘಟನೆಗೆ ಸಂಬಂಧಿಸಿದಂತೆ, ಪೂರ್ಣ ಹಾಗೂ ವಿಸ್ತೃತ ಮಾಹಿತಿ ದೊರಕಿದ್ದು, ಸ್ಥಳದಲ್ಲಿ ನಡೆದ ದ್ವಿಚಕ್ರ ವಾಹನ ಅಪಘಾತಕ್ಕೆ ಸಂಬಂಧಿಸಿದಂತೆ, ಯುವಕರ ನಡುವೆ ಮಾತಿನ ಚಕಮಕಿ ನಡೆದಿದೆ.

ವಾಗ್ಯುದ್ದದ ನಡುವೆ, ವಾಹನ ಚಾಲಕನಿಗೆ, ದುಷ್ಕರ್ಮಿಗಳು, ಚೂರಿಯಿಂದ ಇರಿದು ಗಾಯಗೊಳಿಸಿದ್ದಾರೆ. ದುರದೃಷ್ಟವಶಾತ್, ಗಾಯಾಳುವಿಗೆ ಚಿಕಿತ್ಸೆ ಕೊಡಿಸಿದರೂ, ಬದುಕುಳಿಯಲಿಲ್ಲ. ಈ ಘಟನೆ ಅತ್ಯಂತ ಅಮಾನುಷವಾಗಿದ್ದು, ಕೊಲೆ ಆಪಾದಿತರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

Share