Published
2 months agoon
ಕೌಲಾಲಂಪುರ್: ಜೂನ್ 27 (ಯು.ಎನ್.ಐ.) ಮಲೇಷ್ಯಾದ ಚಿಕ್ಕ ಪಟ್ಟಣದಲ್ಲಿ ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡುತ್ತಿದ್ದ ಮಹಿಳೆಯೊಬ್ಬರ ತಲೆಯ ಮೇಲೆ ತೆಂಗಿನಕಾಯಿ ಬಿದ್ದಿದ್ದು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜಲನ್ ತೆಲುಕ್ ಕುಂಬಾರ್ ನಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ಅದರ ವಿಡಿಯೋ ಇದೀಗ ವೈರಲ್ ಆಗಿದೆ. ಮಹಿಳೆ ಹೆಲ್ಮೆಟ್ ಧರಿಸಿದ್ದರಿಂದ ಆಕೆಯ ಪ್ರಾಣ ಉಳಿದಿದೆ.
ರೆಡ್ಡಿಟ್ನಲ್ಲಿ ಪೋಸ್ಟ್ ಮಾಡಲಾದ 28 ಸೆಕೆಂಡುಗಳ ವೀಡಿಯೊವನ್ನ ದ್ವಿಚಕ್ರ ವಾಹನದ ಹಿಂದೆ ಇದ್ದ ಕಾರಿನ ಡ್ಯಾಶ್ಕ್ಯಾಮ್ನಲ್ಲಿ ಸೆರೆಹಿಡಿಯಲಾಗಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಸ್ಕೂಟರ್ ತೆಲುಕ್ ಕುಂಬಾರ್ ನಿಂದ ಜಾರ್ಜ್ ಟೌನ್ ಕಡೆಗೆ ಹೋಗುತ್ತಿತ್ತು.
ಬ್ಯಾಸ್ಕೆಟ್ ಬಾಲ್ ಗಾತ್ರದ ತೆಂಗಿನಕಾಯಿ ತಲೆಗೆ ಬಡಿದ ನಂತರ ದ್ವಿಚಕ್ರ ವಾಹನದ ಹಿಂಬದಿ ಸವಾರರು ರಸ್ತೆಯಲ್ಲಿ ತಕ್ಷಣ ಕೆಳಕ್ಕೆ ಬಿದ್ದು ರಸ್ತೆಯಲ್ಲಿ ಉರುಳುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಪರಿಣಾಮ ಹೆಲ್ಮೆಟ್ ಕೂಡ ನೆಲಕ್ಕೆ ಬಿದ್ದಿದೆ.
ವೀಡಿಯೊದಲ್ಲಿ ಕಂಡುಬರುವಂತೆ ದ್ವಿಚಕ್ರ ವಾಹನದ ಹಿಂದಿನ ಕಾರು ತಕ್ಷಣವೇ ನಿಂತಿದೆ. ಸ್ಕೂಟರ್ ಚಲಾಯಿಸುತ್ತಿದ್ದ ಇನ್ನೊಬ್ಬ ಮಹಿಳೆ ತಕ್ಷಣವೇ ವಾಹನವನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸುತ್ತಾರೆ. ಗಾಯಗೊಂಡ ತನ್ನ ಸ್ನೇಹಿತೆಗೆ ಸಹಾಯ ಮಾಡಲು ಧಾವಿಸುತ್ತಾರೆ. ಹಲವಾರು ಸ್ಥಳೀಯರು ಮತ್ತು ದಾರಿಹೋಕರು ತ್ವರಿತವಾಗಿ ಸಹಾಯಕ್ಕೆ ಮುಂದಾಗುತ್ತಾರೆ. ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ.
ಸ್ಥಳೀಯ ರಾಜಕಾರಣಿ ಅಜ್ರುಲ್ ಮಹತೀರ್ ಅಜೀಜ್ ಅವರು ಫೇಸ್ಬುಕ್ನಲ್ಲಿ ಘಟನೆಯ ಕುರಿತು ಪೋಸ್ಟ್ ಮಾಡಿದ್ದಾರೆ ಮತ್ತು ಮಹಿಳೆಯನ್ನು ತಮ್ಮ ಕ್ಷೇತ್ರದಲ್ಲಿರುವ ತಮನ್ ಎಮಾಸ್ನ ಪುವಾನ್ ಅನಿತಾ ಎಂದು ಗುರುತಿಸಿದ್ದಾರೆ. ಅಜೀಜ್ ಅವರು ಅಪಘಾತದ ಸ್ಥಳಕ್ಕೆ ಧಾವಿಸಿದ್ದು, ಸಂಬಂಧಿಸಿದ ಏಜೆನ್ಸಿಗಳು ತಕ್ಷಣ ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ. ಅಜೀಜ್ ಅವರು ಪೆನಾಂಗ್ ಆಸ್ಪತ್ರೆಯಲ್ಲಿ ಸಂತ್ರಸ್ತೆಯ ಮಕ್ಕಳನ್ನು ಸಂಪರ್ಕಿಸಿದ್ದಾರೆ ಎಂದು ಹೇಳಿದರು.
ಸಲ್ಮಾನ್ ರಶ್ದಿ ಆರೋಗ್ಯದಲ್ಲಿ ಚೇತರಿಕೆ; ವೆಂಟಿಲೇಟರ್ ನಿಂದ ಬಿಡುಗಡೆ
ಆಸ್ಟ್ರೇಲಿಯಾದ ಕ್ಯಾನ್ಬೆರಾ ವಿಮಾನ ನಿಲ್ದಾಣದಲ್ಲಿ ಗುಂಡಿನ ದಾಳಿ; ಬಂದೂಕಿನೊಂದಿಗೆ ಓರ್ವನ ಬಂಧನ
ಬೂಕರ್ ಪ್ರಶಸ್ತಿ ವಿಜೇತ ಸಲ್ಮಾನ್ ರಶ್ದಿಗೆ ಚಾಕು ಇರಿತ, ವೆಂಟಿಲೇಟರ್ ನಲ್ಲಿಯೇ ಮುಂದುವರೆದ ಚಿಕಿತ್ಸೆ
ಹಲ್ಲೆಗೊಳಗಾಗಿರುವ ಲೇಖಕ ಸಲ್ಮಾನ್ ರಶ್ದಿ ಅವರ ಆರೋಗ್ಯ ಸ್ಥಿತಿ ಗಂಭೀರ; ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ
ತೈವಾನ್ ; ಆಗಮಿತ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ ರದ್ದು
ಸಂಕಷ್ಟದಲ್ಲಿ ಟ್ರಂಪ್: ವಿಚಾರಣೆಗಾಗಿ ನ್ಯೂಯಾರ್ಕ್ ಕಚೇರಿಗೆ ಆಗಮಿಸಿದ ಮಾಜಿ ಅಧ್ಯಕ್ಷ!