Connect with us


      




ಕರ್ನಾಟಕ

ಬಿಬಿಎಂಪಿ ವಲಯ ಕೋವಿಡ್-19 ಸಹಾಯವಾಣಿ ಸಂಖ್ಯೆಗಳು

Kumara Raitha

Published

on

ಬೆಂಗಳೂರು: ಜನೆವರಿ 04 (ಯು.ಎನ್.ಐ.) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಸಂಬಂಧಿಸಿದ ಮಾಹಿತಿಗಾಗಿ ಎಲ್ಲಾ ಎಂಟು ವಲಯಗಳಲ್ಲಿ ನಿಯಂತ್ರಣಾ ಕೊಠಡಿಗಳನ್ನು ತೆರೆಯಲಾಗಿರುತ್ತದೆ.

ನಗರದ ಎಲ್ಲ ನಾಗರೀಕರು ಕೋವಿಡ್ ಸಂಬಂಧಿಸಿದಂತೆ ಟ್ರಯಾಜಿಂಗ್, ಕೋವಿಡ್ ಪರೀಕ್ಷೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಾಹಿತಿ, ಆಸ್ಪತ್ರೆಗೆ ದಾಖಲಾಗುವ, ಲಸಿಕೆ ಪಡೆಯುವುದು ಸೇರಿದಂತೆ ಇನ್ನಿತರೆ ವಿಷಯಗಳ ಬಗ್ಗೆ ನಿಯಂತ್ರಣ ಕೊಠಡಿಯ ಸಿಬ್ಬಂದಿಯು ದಿನದ 24 ಗಂಟೆಯೂ ಅಗತ್ಯ ಮಾಹಿತಿ ನೀಡಲಿದ್ದಾರೆ.

ನಾಗರೀಕರು ಇದರ ಸದುಪಯೋಗಪಡಿಸಿಕೊಂಡು ನಗರದಲ್ಲಿ ಕೋವಿಡ್ ಸೋಂಕನ್ನು ನಿಯಂತ್ರಿಸಲು ಸಹಕರಿಸಬೇಕಾಗಿ ಕೋರಿದೆ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.

ಬಿಬಿಎಂಪಿ ವಲಯ ಕೋವಿಡ್-19 ಸಹಾಯವಾಣಿ ಸಂಖ್ಯೆಗಳ ವಿವರ:

ಕ್ರ.ಸಂಖ್ಯೆ – ವಲಯ – ದೂ.ಸಂಖ್ಯೆ

1. ಬೊಮ್ಮನಹಳ್ಳಿ 8884666670
2. ದಾಸರಹಳ್ಳಿ‌ 94806 83132
3. ಪೂರ್ವ 9480685163
4. ಮಹದೇವಪುರ 08023010102
5. ಆರ್.ಆರ್.ನಗರ 08028601050.
6. ದಕ್ಷಿಣ 8431816718
7. ಪಶ್ಚಿಮ 08068248454
8. ಯಲಹಂಕ 9480685961

Share