Connect with us


      




ಸಾಮಾನ್ಯ

IPL ಸಮಾರೋಪ ಸಮಾರಂಭ ಆಯೋಜಿಸಲು ಟೆಂಡರ್ ಕರೆದ ಬಿಸಿಸಿಐ

Lakshmi Vijaya

Published

on

ನವದೆಹಲಿ: ಏಪ್ರಿಲ್ 16 (ಯು.ಎನ್.ಐ.) ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ರ ಸಮಾರೋಪ ಸಮಾರಂಭವನ್ನ ಟೆಂಡರ್ ಮೂಲಕ ಆಯೋಜಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ (ಬಿಸಿಸಿಐ) ಬಿಡ್ ಕರೆದಿದೆ.

ಮುಕ್ತಾಯ ಸಮಾರಂಭವನ್ನು ನಡೆಸಲು ಆಸಕ್ತಿ ಹೊಂದಿರುವ ಘಟಕಗಳಿಂದ ಬಿಸಿಸಿಐ ಶನಿವಾರ ಬಿಡ್‌ಗಳನ್ನು ಆಹ್ವಾನಿಸಿದೆ. ಸಮಾರೋಪ ಸಮಾರಂಭವನ್ನು ಆಯೋಜಿಸಲು ಪ್ರಸ್ತಾವನಾ ಮನವಿಯನ್ನು (RFP) ಬಿಡುಗಡೆ ಮಾಡಿರುವುದಾಗಿ ಬಿಸಿಸಿಐ ಘೋಷಿಸಿದೆ.

ಟೆಂಡರ್ ಪ್ರಕ್ರಿಯೆಯ ವಿವರಣೆ, ಅರ್ಹತಾ ಅಗತ್ಯತೆಗಳು, ಬಿಡ್‌ಗಳ ಸಲ್ಲಿಕೆ ಪ್ರಕ್ರಿಯೆ, ಹಕ್ಕುಗಳು ಮತ್ತು ಕಟ್ಟುಪಾಡುಗಳು ಇತ್ಯಾದಿಗಳನ್ನು ಒಳಗೊಂಡಂತೆ ಟೆಂಡರ್ ಪ್ರಕ್ರಿಯೆಯ ವಿವರವಾದ ನಿಯಮಗಳು ಮತ್ತು ಷರತ್ತುಗಳನ್ನ ಪ್ರಸ್ತಾವನಾ ಮನವಿಯಲ್ಲಿ ತಿಳಿಸಲಾಗಿದೆ. 1 ಲಕ್ಷ ರೂಪಾಯಿಗಳ ಮರುಪಾವತಿಸಲಾಗದ ಶುಲ್ಕ ( ಸರಕು ಮತ್ತು ಸೇವಾ ತೆರಿಗೆ ಸೇರಿ) ಪಾವತಿಸಿದರೆ ಪ್ರಸ್ತಾವನಾ ಲಭ್ಯವಾಗಲಿದೆ ಎಂದು ತಿಳಿಸಿದೆ.

ಪ್ರಸ್ತಾವನಾ ಮನವಿ ಪಡೆಯಲು ಏಪ್ರಿಲ್ 25 ರವರೆಗೆ ಕಾಲಾವಕಾಶವಿರಲಿದೆ.

ಆರ್‌ಎಫ್‌ಪಿಯಲ್ಲಿ ನಿಗದಿಪಡಿಸಿದ ಅರ್ಹತಾ ಮಾನದಂಡಗಳನ್ನು ಪೂರೈಸುವವರು ಮತ್ತು ಅದರಲ್ಲಿ ನಿಗದಿಪಡಿಸಿದ ಇತರ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟವರು ಮಾತ್ರ ಬಿಡ್‌ಗೆ ಅರ್ಹರಾಗಿರುತ್ತಾರೆ.

ಐಪಿಎಲ್ ಮಾರ್ಚ್ 26 ರಂದು ಆರಂಭವಾಗಿದ್ದು, ಮೇ 29 ರಂದು ಫೈನಲ್ ಪಂದ್ಯ ನಡೆಯಲಿದೆ.

Share