Connect with us


      




ಬೆಂಗಳೂರು

ಹ್ಯಾಪಿಯೆಸ್ಟ್ ಹೆಲ್ತ್ ಆರಂಭ

Kumara Raitha

Published

on

• ಇದು ಜಾಗತಿಕ ಆರೋಗ್ಯ & ಕ್ಷೇಮ ಜ್ಞಾನದ ಉದ್ಯಮ
• ಸಂಶೋದನೆ ಚಾಲಿತ ಚೈದ್ಯಕೀಯ ವಿಚಾರದ ಪ್ರವೇಶದೊಂದಿಗೆ ಜಾಗತಿಕ ಪ್ರೇಕ್ಷಕರ ಆರೋಗ್ಯ ಮತ್ತು ಯೋಗಕ್ಷೇಮದ ಜ್ಞಾನದ ಅಗತ್ಯಗಳಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸೌಮ್ಯವಾದ ಮತ್ತು ಸರಳ ಚಿಕಿತ್ಸೆಗಳ ಪರಾಮುಖ್ಯತೆಯನ್ನು ಹೆಚ್ಚಿಸುವುದು ಇದರ ಉದ್ದೇಶ
• ಕ್ಷೇಮ ಮತ್ತು ವೈದ್ಯಕೀಯ ತಜ್ಞರು, ವೈಜ್ಞಾನಿಕ ನಿಯತಕಾಲಿಕೆಗಳು ಹಾಗೂ ಜಾಗತಿಕ ಸಂಶೋಧನಾ ಸಂಸ್ಥೆಗಳ ಸಹಯೋಗದೊಂದಿಗೆ ವಿಷಯವನ್ನು ರಚಿಸಲಾಗಿದೆ

ಬೆಂಗಳೂರು:  ಜುಲೈ 14(ಯು.ಎನ್.‌ಐ.) ಖ್ಯಾತ ಉದ್ಯಮಿ ಮತ್ತು ಹ್ಯಾಪಿಯೆಸ್ಟ್ ಮೈಂಡ್ಸ್  ಕಾರ್ಯಕಾರಿ ಅಧ್ಯಕ್ಷ ಅಶೋಕ್ ಸೂಟ ಅವರು ಇಂದು ತಮ್ಮ ಮತ್ತೊಂದು ಔದ್ಯಮಿಕ ಸಂಸ್ಥೆಯಾದ Happiest Health ಅನ್ನು ಘೋಷಣೆ ಮಾಡಿದ್ದಾರೆ. ಆರೋಗ್ಯ ಮತ್ತು ಕ್ಷೇಮಕ್ಕೆ ಸಂಬಂಧಿಸಿದಂತೆ ಆಳವಾದ, ವಿಶ್ವಾಸಾರ್ಹವಾದ ಮತ್ತು ನಂಬಲರ್ಹ ಜ್ಞಾನವನ್ನು ಒದಗಿಸುವ ಗುರಿಯನ್ನು ಹೊಂದಿರುವ ಜಾಗತಿಕ ಆರೋಗ್ಯ ಮತ್ತು ಕ್ಷೇಮ ಜ್ಞಾನದ ಒಂದು ಉದ್ಯಮವಾಗಿದೆ.

ಸಂಸ್ಥೆ ತನ್ನ ಅಧಿಕೃತ ವೆಬ್ ಸೈಟ್ Happiest Health ಅನ್ನು ಈಗಾಗಲೇ ಆರಂಭಿಸಿದೆ. ಆರೋಗ್ಯ ಮತ್ತು ಯೋಗಕ್ಷೇಮ ಕ್ಷೇತ್ರದಲ್ಲಿ ಇದು ಅಶೋಕ್ ಸೂಟ ಅವರ ಎರಡನೇ ಬದ್ಧತೆಯಾಗಿದೆ. ಕಳೆದ ವರ್ಷ SKAN ಎಂಬ ವಯೋಸಹಜ ಮತ್ತು ನರ ವೈಜ್ಞಾನಿಕ ಅಸ್ವಸ್ಥತೆಗಳ ಬಗ್ಗೆ ಸಂಶೋಧನೆ ನಡೆಸುವ ಲಾಭರಹಿತ ವೈದ್ಯಕೀಯ ಸಂಶೋಧನಾ ಸಂಸ್ಥೆಯನ್ನು ಆರಂಭಿಸಿದ್ದರು.

ಹ್ಯಾಪಿಯೆಸ್ಟ್ ಹೆಲ್ತ್ ಜಾಗತಿಕವಾಗಿ ಆರೋಗ್ಯ ಮತ್ತು ಸ್ವಾಸ್ಥ್ಯದ ಮೇಲಿನ ಎರಡು ವಿಶ್ವಾಸಾರ್ಹ ಮತ್ತು ನಂಬಲರ್ಹವಾದ ಜ್ಞಾನದ ಮೂಲಗಳಲ್ಲಿ ಗುರುತಿಸಲ್ಪಡುವ ಗುರಿಯನ್ನು ಹೊಂದಿದೆ. ಆದರೆ, ಸಮಗ್ರ ಔಷಧ ಹಾಗೂ ಸೌಮ್ಯವಾದ ಕಿಂಡರ್ ಚಿಕಿತ್ಸೆಗಳಿಗೆ ಚಿಂತನೆಯ ನಾಯಕತ್ವಕ್ಕೆ ಚಾಲನೆ ನೀಡುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ಹ್ಯಾಪಿಯೆಸ್ಟ್ ಹೆಲ್ತ್ ನ ಕಾರ್ಯಕಾರಿ ಅಧ್ಯಕ್ಷ ಅಶೋಕ್ ಸೂಟ ಅವರು, “ಹ್ಯಾಪಿಯೆಸ್ಟ್ ಹೆಲ್ತ್ ಜಾಗತಿಕವಾಗಿ ಆರೋಗ್ಯ ರಕ್ಷಣೆಯ ಜ್ಞಾನವು ಕೇವಲ ಪುನರಾವರ್ತಿತ ವಾಸ್ತವಿಕ ಮಾಹಿತಿಯಾಗಿದೆ ಎಂಬ ಅರಿವಿಗೆ ಬದ್ಧವಾಗಿದೆ. ಅದು ಸಾಮಾನ್ಯ ವ್ಯಕ್ತಿಯ ಕಾಳಜಿಗಳಿಗೆ ಅಗತ್ಯವಾಗಿ ಉತ್ತರಿಸುವುದಿಲ್ಲ ಅಥವಾ ಸಂಕೀರ್ಣ ಆರೋಗ್ಯ ಹಾಗೂ ಕ್ಷೇಮ ಸಮಸ್ಯೆಗಳ ಬಗ್ಗೆ ಆಳವಾದ, ಸುಸಂಬದ್ಧವಾದ ತಿಳುವಳಿಕೆಯನ್ನು ನೀಡುತ್ತದೆ. ನಾವು ಆರೋಗ್ಯ ಮತ್ತು ಕ್ಷೇಮ ಜ್ಞಾನದ ಜಾಗತಿಕ ನಾಯಕರಾಗಲು ಬಯಸುತ್ತೇವೆ ಮತ್ತು ನಮ್ಮನ್ನು ಸಂತೋಷ ಹಾಗೂ ಕ್ಷೇಮ ಸಲಹೆಗಾರರನ್ನಾಗಿ ಇಟ್ಟುಕೊಳ್ಳಲು ಬಯಸುತ್ತೇವೆ. ನಾವು ಹ್ಯಾಪಿಯೆಸ್ಟ್ ಹೆಲ್ತ್ ಮೂಲಕ ಸಮಗ್ರವಾದ ಔಷಧದ ಪ್ರಾಮುಖ್ಯತೆಯನ್ನು ನಿರ್ಮಾಣ ಮಾಡಲು ಬಯಸುತ್ತೇವೆ. ಅದೇ ರೀತಿ ಆರಂಭಿಕ ರೋಗ ನಿರ್ಣಯ ಮತ್ತು ಸಾಕ್ಷ್ಯಾಧಾರಿತವಾದ ಚಿಕಿತ್ಸೆಗಳ ಕುರಿತು ತಜ್ಞರ ಮೂಲಕ ಅಮೂಲ್ಯವಾದ ಸಲಹೆ ಸೂಚನೆಗಳನ್ನು ಒದಗಿಸುತ್ತೇವೆ ಮತ್ತು ಸಹಾನುಭೂತಿ ಮತ್ತು ಉತ್ಸಾಹದಿಂದ ಸೇವೆಗಳನ್ನು ನೀಡಲು ಬದ್ಧರಾಗಿದ್ದೇವೆ’’ ಎಂದರು.

ಹ್ಯಾಪಿಯೆಸ್ಟ್ ಹೆಲ್ತ್ ನ ಪ್ರಧಾನ ಸಂಪಾದಕ (ಡಿಜಿಟಲ್) ರವಿ ಜೋಶಿ ಅವರು, “ಇತ್ತೀಚಿನ ದಿನಗಳಲ್ಲಿ ಪರಿಶೀಲಿಸಬಹುದಾದ ವೈದ್ಯಕೀಯ ವಿಷಯಕ್ಕೆ ಬಹುದೊಡ್ಡ ಅವಕಾಶ ಮತ್ತು ಸಾಮರ್ಥ್ಯವಿದೆ. ಇದನ್ನು ಉತ್ತಮ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ ಹ್ಯಾಪಿಯೆಸ್ಟ್ ಹೆಲ್ತ್ ಕ್ಷೇಮ ಜ್ಞಾನದಲ್ಲಿರುವ ಅಂತರವನ್ನು ನಿವಾರಣೆ ಮಾಡುವ ಗುರಿಯನ್ನು ಹಾಕಿಕೊಂಡಿದೆ. ವಿಶ್ವಾಸಾರ್ಹ ಮತ್ತು ಅದಕ್ಕಿಂತ ಪ್ರಮುಖವಾಗಿ ಸ್ಪೆಕ್ಟ್ರಂನಾದ್ಯಂತ ಜನರಿಗೆ ಸಂಬಂಧಿಸಿದ್ದಾಗಿದ್ದು, ನಮ್ಮ ಓದುಗರ ಸರ್ವಾಂಗೀಣ ಕ್ಷೇಮಕ್ಕಾಗಿ ಉತ್ಸಾಹದಿಂದ ಕಾಳಜಿ ವಹಿಸಲಾಗುತ್ತದೆ. ಈ ಮೂಲಕ ನಾವು ಆರೋಗ್ಯ ಮತ್ತು ಕ್ಷೇಮವನ್ನು ನೀಡುವುದರೊಂದಿಗೆ ಭಾರತದಲ್ಲಿ ಹಾಗೂ ವಿಶ್ವದಾದ್ಯಂತ ಗರಿಷ್ಠ ಬಳಕೆದಾರರನ್ನು ತಲುಪುವ ಗುರಿಯನ್ನು ಹೊಂದಿದ್ದೇವೆ’’ ಎಂದು ತಿಳಿಸಿದರು.

ಹ್ಯಾಪಿಯೆಸ್ಟ್ ಹೆಲ್ತ್ ಗ್ಲೋಬಲ್ ಇನ್ ಸ್ಟಿಟ್ಯೂಟ್ ಆಫ್ ಎಕ್ಸ್ ಲೆನ್ಸ್ ನ ಅಧ್ಯಯನಗಳು ಸೇರಿದಂತೆ ಹೊಸ ಸಂಶೋಧನೆಯಿಂದ ಪಡೆದ ಆರೋಗ್ಯ ಮತ್ತು ಕ್ಷೇಮದಲ್ಲಿನ ಪ್ರಗತಿಗಳು ಹಾಗೂ ಬೆಳವಣಿಗೆಗಳೊಂದಿಗೆ ಪ್ರೇಕ್ಷಕರಿಗೆ ಶಿಕ್ಷಣ ನೀಡುತ್ತದೆ. ಪ್ಲಾಟ್ ಫಾರ್ಮ್ ವೈದ್ಯರ ಸಮಿತಿಯಲ್ಲಿನ ವೈದ್ಯರು ಅತಿಥಿ ಪ್ರಬಂಧಗಳು, ಅನನ್ಯ ದೃಷ್ಟಿಕೋನಗಳು ಹಾಗೂ ಆಸಕ್ತಿದಾಯಕ ವೈದ್ಯಕೀಯ ಅನುಭವಗಳನ್ನು ನೀಡುವ ಲೇಖನಗಳ ಮೂಲಕ ಬಹು ವಿಭಾಗಗಳನ್ನು ಒಳಗೊಂಡಿರುತ್ತದೆ.

ಹ್ಯಾಪಿಯೆಸ್ಟ್ ಹೆಲ್ತ್ ನ ಚೀಫ್ ಮಾರ್ಕೆಟಿಂಗ್ ಆಫೀಸರ್ ಆಶಿಶ್ ಪ್ರತಾಪ್ ಸಿಂಗ್ ಅವರು ಮಾತನಾಡಿ, “ನಗರದ ಜನಸಂಖ್ಯೆಯಲ್ಲಿ ಹೆಚ್ಚುತ್ತಿರುವ ಜೀವನಶೈಲಿ-ಚಾಲಿತ ಆರೋಗ್ಯ ಸಮಸ್ಯೆಗಳ ಬಗ್ಗೆ ಸಾಕಷ್ಟು ತಿಳಿದಿರುತ್ತದೆ ಮತ್ತು ಅದರ ಬಗ್ಗೆ ಕಾಳಜಿ ವಹಿಸಲಾಗುತ್ತದೆ. ಹ್ಯಾಪಿಯೆಸ್ಟ್ ಹೆಲ್ತ್ ನಲ್ಲಿ ತಡೆಗಟ್ಟುವ ಕ್ಷೇಮ ಮತ್ತು ಆರಂಭಿಕ ರೋಗನಿರ್ಣಯದ ಮೂಲಕ ಕಾಳಜಿಯನ್ನು ತಗ್ಗಿಸುವ ಅಗತ್ಯವನ್ನು ನಾವು ನೋಡುತ್ತಿದ್ದೇವೆ. ಎಲ್ಲಾ ವಯೋಮಾನದ ಜನರು ಸಮಗ್ರ ಕ್ಷೇಮ ಮತ್ತು ಸಮಗ್ರ ಔಷಧದ ಪ್ರಾಮುಖ್ಯತೆಯನ್ನು ಹೆಚ್ಚು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಹ್ಯಾಪಿಯೆಸ್ಟ್ ಹೆಲ್ತ ಮೂಲಕ ಈ ಅಗತ್ಯತೆಗಳನ್ನು ಪೂರೈಸುವುದು ಮತ್ತು ಎಲ್ಲಾ ಜ್ಞಾನವನ್ನು ಸುಸಂಬದ್ಧ, ಅರ್ಥಪೂರ್ಣವಾದ ರೀತಿಯಲ್ಲಿ ತರಲು ನಾವು ಕಾರ್ಯಪ್ರವೃತ್ತರಾಗಿದ್ದೇವೆ’’ ಎಂದು ತಿಳಿಸಿದರು.

Share