Connect with us


      
ಕರ್ನಾಟಕ

Kumara Raitha

Published

on

ಬೆಳಗಾವಿ : ಜನೆವರಿ 07 (ಯು.ಎನ್.ಐ.)

ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಇದೇ ಮೊದಲ ಬಾರಿಗೆ 189 ಆಸನ ಸಾಮರ್ಥ್ಯದ ಬೋಯಿಂಗ್ 737 ಸ್ಪೈಸ್ ಜೆಟ್ ವಿಮಾನ ಗುರುವಾರ ಬೆಳಗ್ಗೆ ಆಗಮಿಸಿತು. ದೆಹಲಿ- ಬೆಳಗಾವಿ ನಡುವೆ ಈ ವಿಮಾನ ಇನ್ನುಮುಂದೆ ಸಂಚಾರ ನಡೆಸಲಿದೆ.

ಬೆಳಗಾವಿಯಿಂದ ದೆಹಲಿಗೆ ಆ. 13 ರಿಂದ ವಿಮಾನಯಾನ ಆರಂಭವಾಗಿದೆ. ಮೊದಲು ವಾರಕ್ಕೆ 2 ಸಲ ಮಾತ್ರ ಸಂಚಾರ ನಿಗದಿ ಮಾಡಲಾಗಿತ್ತು. ಆದರೆ ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ವಾರಕ್ಕೆ ಮೂರು ಟ್ರಿಪ್ ಗೆ ಏರಿಕೆ ಮಾಡಲಾಗಿತ್ತು. ಗುರುವಾರದಿಂದ ದೆಹಲಿ – ಬೆಳಗಾವಿ ನಡುವೆ ವಾರಕ್ಕೆ 4 ಬಾರಿ ವಿಮಾನ ಸಂಚಾರ ಪ್ರಾರಂಭಗೊಂಡಿದೆ.
ಗುರುವಾರ ದೆಹಲಿಯಿಂದ ಆಗಮಿಸಿದ ಸ್ಪೈಸ್ ಜೆಟ್ ನ ಬೋಯಿಂಗ್ 737 ವಿಮಾನದ ಪೈಲಟ್ ಗಳು ಮತ್ತು ಸಿಬ್ಬಂದಿಯನ್ನು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಹೂ ಮಾಲೆ ಹಾಕಿ ಸ್ವಾಗತಿಸಲಾಯಿತು.

Continue Reading
Share