Published
6 months agoon
ಬೆಂಗಳೂರು: ಜನೆವರಿ 03 (ಯು.ಎನ್.ಐ.) ನಗರದ ಗೋವಿಂದರಾಜನಗರ ಮೂಡಲಪಾಳ್ಯದ ಶಾಲೆಯಲ್ಲಿ 15 ರಿಂದ 18 ವಯೋಮಾನದ ಬಾಲಕ – ಬಾಲಕಿಯರಿಗೆ ಕೋವಿಡ್ ನಿರೋಧಕ ಲಸಿಕೆ ಹಾಕುವ ಅಭಿಯಾನಕ್ಕೆ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು ಇಂದು ಚಾಲನೆ ನೀಡಿದರು.
ಮೂಡಲಪಾಳ್ಯದ ಬಿಬಿಎಂಪಿ ಪ್ರೌಢಶಾಲೆಯಲ್ಲಿ ಕಾರ್ಯಕ್ರಮ ಆಯೋಜಿತವಾಗಿತ್ತು. ಮುಖ್ಯಮಂತ್ರಿ ಸಮ್ಮುಖದಲ್ಲಿ ಕೆಲವು ಮಕ್ಕಳಿಗೆ ಲಸಿಕೆ ಹಾಕಲಾಯಿತು. ಸಿಎಂ ಬಸವರಾಜ ಬೊಮ್ಮಾಯಿ ಅವರು ಮಕ್ಕಳಿಗೆ ಲಸಿಕೆ ಹಾಕಿಸಿಕೊಳ್ಳುವುದರ ಪ್ರಯೋಜನಗಳ ಬಗ್ಗೆ ಹೇಳಿ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿದರು. ಉತ್ಸಾಹ, ಲವಲವಿಕೆಯಿಂದ ಇರುವ ಶಾಲಾ ಮಕ್ಕಳನ್ನು ನೋಡಿ ಸಂತೋಷವಾಯಿತು. ಬೆಂಗಳೂರಿನಲ್ಲಿ ಮಹಾನಗರ ಪಾಲಿಕೆ ನೇತೃತ್ವದಲ್ಲಿ ಇಂಥ ಮಾದರಿ ಶಾಲೆ ನಡೆಸಬಹುದು ಎಂಬುದನ್ನು ಸಚಿವ ಸೋಮಣ್ಣ ತೋರಿಸಿದ್ದಾರೆ. ಇದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ ಎಂದರು.
ಶಾಲಾ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಹೊಸ ವರ್ಷದಂದು 15 ರಿಂದ 18 ವಯಸ್ಸಿನ ಶಾಲಾ ಮಕ್ಕಳಿಗೆ ಲಸಿಕೆ ಹಾಕಿಸುವ ಅಭಿಯಾನ ನಡೆಯುತ್ತಿದೆ. ಸರಕ್ಷಿತ ಆರೋಗ್ಯ ನಿಮ್ಮದಾಗಲಿ. ಈ ದಿಶೆಯಲ್ಲಿ ಕೋವಿಡ್ ನಿಂದ ರಕ್ಷಣೆ ಪಡೆಯಲು ಲಸಿಕೆ ಸಹಾಯ ಮಾಡುತ್ತದೆ. 15 ರಿಂದ 18 ರವಯೋಮಾನದ ಮಕ್ಕಳೆಲ್ಲರೂ ಲಸಿಕೆ ಹಾಕಿಸಿಕೊಳ್ಳಲು ಮುಂದಾಗಬೇಕು ಎಂದು ಕರೆ ನೀಡಿದರು.
ಪ್ರಧಾನಿ ಮೋದಿ ಅವರ ದೂರದೃಷ್ಟಿಯ ಪರಿಣಾಮದಿಂದ ಈ ಕಾರ್ಯಕ್ರಮ ನಡೆಯುತ್ತಿದೆ ಕೊರೋನಾ ನಾವ್ಯಾರು ನೀರಿಕ್ಷಿಸಿರಲಿಲ್ಲ,ಅಪೇಕ್ಷಿಸುವ ಪ್ರಶ್ನೆ ಇರಲಿಲ್ಲ. ಕೋವಿಡ್ ಯಾವ ರೀತಿ ಹರಡುತ್ತೆ ಅಂತ ಗೊತ್ತಿಲ್ಲ ಅದು ಸವಾಲಿನ ಸಂಗತಿ ಅಂತಹ ಸಂದರ್ಭದಲ್ಲಿ ಪ್ರಧಾನಿ ಮೋದಿ ಮುಂಚೂಣಿಯಲ್ಲಿ ನಿಂತು ನಿಭಾಯಿಸಿದ್ದಾರೆ. ಕಾಲಕಾಲಕ್ಕೆ ಮೋದಿ ಅವರು ತೆಗೆದುಕೊಂಡ ನಿರ್ಧಾರ ವಿಶ್ವಕ್ಕೆ ಮಾದರಿಯಾಗಿದೆ ಗರೀಬ್ ಕಲ್ಯಾಣ, ಲಸಿಕಾ ಕಾರ್ಯಕ್ರಮ ಎಲ್ಲವನ್ನು ಮಾಡಿದರು ವಿಶ್ವದಲ್ಲಿ ವ್ಯಾಕ್ಸಿನೇಷನ್ ಆಗಬೇಕಾದಾಗ ಭಾರತದ ಸಂಸ್ಥೆಗಳಿಗೆ ವ್ಯಾಕ್ಸಿನ್ ತಯಾರಿಸಲು ಅನುಮತಿ ನೀಡಿದರು ಹಂತಹಂತವಾಗಿ ಎಲ್ಲರನ್ನು ಕವರ್ ಮಾಡಿ 130 ಕೋಟಿ ಲಸಿಕೆ ನೀಡಿದ್ದಾರೆ. ಕರ್ನಾಟಕದಲ್ಲಿ ಒಂದು ಕಾಲದಲ್ಲಿ ಔಷಧಿ,ಆಕ್ಸಿಜನ್,ಬೆಡ್ ಸಮಸ್ಯೆ ಆಗಿತ್ತು. ಅಂಥ ಸಮಸ್ಯೆಗಳನ್ನು ಕರ್ನಾಟಕ ಸರ್ಕಾರ ಹಿಮ್ಮೆಟ್ಟಿಸಿದೆ. ಇದು ಸುವ್ಯವಸ್ಥಿತ ವಾತಾರವಣದಲ್ಲಿ ಚಿಕಿತ್ಸಾ ಸೌಲಭ್ಯ ಲಭ್ಯವಿದೆ. ಎಂದು ಹೇಳಿದರು.
ಆರೋಗ್ಯ ಸಚಿವ ಕೆ ಸುಧಾಕರ್ ಮಾತನಾಡಿದರು. ಇವತ್ತು ಲಸಿಕೆ ಕೊಡೋದ್ರಲ್ಲಿ ಭಾರತ ದೊಡ್ಡ ಸಾಧನೆ ಮಾಡಿದೆ. ನಮ್ಮ ರಾಜ್ಯದಲ್ಲಿ 43 ಲಕ್ಷ ಮಕ್ಕಳು ಇದ್ದಾರೆ ಆದಷ್ಟು ಬೇಗ ಇವ್ರಿಗೆ ಲಸಿಕೆ ಹಾಕಬೇಕಾಗಿದೆ. ಈ ದೇಶದಿಂದ ಸಾಂಕ್ರಾಮಿಕ ರೋಗ ತೆಗೆದು ಹಾಕಿದ್ದೇವೆ ಅಂದರೆ ಈ ಲಸಿಕೆಯಿಂದ ಈ ಕೊವೀಡ್ ನಿರ್ನಾಮ ಮಾಡಬೇಕು ಅಂದರೆ ಪ್ರತಿಯೊಬ್ಬರು ಲಸಿಕೆ ತೆಗೆದು ಕೊಳ್ಳಬೇಕು ಬೇರೆ ಬೇರೆ ರಾಜ್ಯಗಳನ್ನು ಹೋಲಿಸಿದ್ರೆ ನಮ್ಮ ರಾಜ್ಯದಲ್ಲಿ ಕೊವೀಡ್ ಪಾಸಿಟಿವ್ ದರ ಕಡಿಮೆ ಇದೆ. ನಮ್ಮ ರಾಜ್ಯದ ಮುಖ್ಯಮಂತ್ರಿ ಅವರು ಕಾಲ ಕಾಲಕ್ಕೆ ತೆಗೆದುಕೊಂಡ ಕ್ರಮಗಳಿಂದ ಇದು ಕಡಿಮೆ ಆಗಿದೆ. ರಾಜ್ಯದಲ್ಲಿ ೮ ಕೋಟಿ 65 ಲಕ್ಷ ಲಸಿಕೆ ನೀಡಿದ್ದೇವೆ. ಇಡೀ ದೇಶದಲ್ಲಿ 145 ಕೋಟಿ ಲಸಿಕೆ ಕೋಟಿ ಕೊಟ್ಟಿದ್ದೇವೆ..ಎಲ್ಲ ವಿದ್ಯಾರ್ಥಿಗಳು ಲಸಿಕೆ ಪಡೆಯಬೇಕು ಎಂದರು.
ವಸತಿ ಸಚಿವ ಸೋಮಣ್ಣ ಮಾತನಾಡಿದರು. ಮೂರನೆ ಅಲೆ ಎಷ್ಟು ಗಂಭೀರವಾಗಿದೆ ಅಂತ ಸುಧಾಕರ್ ಹೇಳಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು,ಉದಾಸೀನದಿಂದ ದೊಡ್ಡ ಸಮಸ್ಯೆಯಾಗುತ್ತದೆ ಮೋದಿಯವರು ದೇಶದಲ್ಲಿ ಮಕ್ಕಳಿಗೆ ಲಸಿಕೆ ನೀಡಲು ಆರಂಭ ಮಾಡ್ತಿದ್ದಾರೆ. 15-18 ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡಿ ನಿಮ್ಮ ಜತೆ ನಾವಿದ್ದೇವೆ ಅನ್ನೊ ಸಂದೇಶ ಸರ್ಕಾರ ನೀಡಿದೆ ಎಂದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರನ್ನು ಉದ್ದೇಶಿಸಿ ಮಾತನಾಡಿದ ಸಚಿವ ಸೋಮಣ್ಣ ನಿಮ್ಮ ಆರೋಗ್ಯವು ಮುಖ್ಯ, ನಿಮ್ಮ ಬಗ್ಗೆ ಕಾಳಜಿ ವಹಿಸಿ ಎಂದು ಮನವಿ ಮಾಡಿದರು.ಬೊಮ್ಮಾಯಿ ಅವರು ಸಿಎಂ ಆಗಿ ಯಾವುದಾದರೂ ಕ್ಷೇತ್ರಕ್ಕೆ ಮೂರು ಬಾರಿ ಹೋಗಿದ್ದರೆ ಅದು ಗೋವಿಂದರಾಜನಗರ ಕ್ಷೇತ್ರ ಎಂದು ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕೆ ಸಿಎಂ ನೀಡುತ್ತಿರುವ ಸಹಕಾರ ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ.ಅಶ್ವಥ ನಾರಾಯಣ, , ಬೈರತಿ ಬಸವರಾಜು, ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಧಾರವಾಡ-ಬೆಳಗಾವಿ ರೈಲು ಯೋಜನೆ ಶೀಘ್ರದಲ್ಲಿ ಪ್ರಾರಂಭ : ಸಿಎಂ
ರಮೇಶ್ ಜಾರಕಿಹೊಳಿ ವಿರುದ್ಧ ಗಂಭೀರ ಆರೋಪ: 819 ಕೋಟಿ ರೂ. ಲೂಟಿ!
ಬೆಳಗಾವಿ ಭೀಕರ ಅಪಘಾತ: ಮೃತ ಕಾರ್ಮಿಕರಿಗೆ 5 ಲಕ್ಷ ರೂ. ಪರಿಹಾರ
ಅಂಜನಾದ್ರಿ ಬೆಟ್ಟದಲ್ಲಿ ಜುಲೈನಲ್ಲಿ ಕಾಮಗಾರಿ ಪ್ರಾರಂಭಿಸಲು ಸಿಎಂ ಬೊಮ್ಮಾಯಿ ಸೂಚನೆ
ಎಸ್. ಎಂ. ಕೃಷ್ಣ, ನಾರಾಯಣ ಮೂರ್ತಿ, ಪ್ರಕಾಶ್ ಪಡುಕೋಣೆಗೆ ಕೆಂಪೇಗೌಡ ಅಂತರಾಷ್ಟ್ರೀಯ ಪ್ರಶಸ್ತಿ
ತಿಂಗಳಲ್ಲಿ 15 ದಿನ ಅರಣ್ಯದಲ್ಲಿರಿ: ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಿಎಂ ತಾಕೀತು