Published
5 months agoon
ಪತ್ತನಂತಿಟ್ಟ: ಡಿ, 8 (ಯುಎನ್ಐ) ಭಾರತ್ ಬಯೋಟೆಕ್ ಎಂಡಿ ಡಾ.ಕೃಷ್ಣ ಎಲ್ಲ ಅವರು ಶಬರಿಮಲೆ ದೇವಸ್ಥಾನದಲ್ಲಿ ನಡೆಯುವ ಅನ್ನದಾನಕ್ಕೆ 1 ಕೋಟಿ ರೂ. ಅನುದಾನ ನೀಡಿದ್ದಾರೆ.
ಕೃಷ್ಣ ಎಲ್ಲ ಮತ್ತು ಅವರ ಪತ್ನಿ ಸುಚಿತ್ರಾ ಎಲ್ಲ ಕುಟುಂಬ ಸಮೇತರಾಗಿ ಶಬರಿಮಲೆ ದೇಗುಲಕ್ಕೆ ಭೇಟಿ ನೀಡಿದ್ದಾರೆ. ದರ್ಶನದ ನಂತರ ಅವರು ಶಬರಿಮಲೆ ಕಾರ್ಯನಿರ್ವಾಹಕ ಅಧಿಕಾರಿ ವಿ ಕೃಷ್ಣಕುಮಾರ್ ವೇರಿಯರ್ ಅವರಿಗೆ ಮೊತ್ತವನ್ನು ಆನ್ಲೈನ್ನಲ್ಲಿ ವರ್ಗಾಯಿಸಿದರು.
ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷರಾದ ಅನಂತಗೋಪನ್ ಅವರು ಕೃಷ್ಣ ಎಲ್ಲರಿಗೆ ಕರೆ ಮಾಡಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಶಬರಿಮಲೆಯ ಅಭಿವೃದ್ಧಿಗೆ ಹಾಗೂ ಪವಿತ್ರ ದೇಗುಲದಲ್ಲಿ ದುಡಿಯುತ್ತಿರುವ ನೌಕರರ ಆರೋಗ್ಯ ರಕ್ಷಣೆಗೆ ತಮ್ಮ ಕೈಲಾದ ಸಹಾಯ ಮಾಡಲು ಸಿದ್ಧ ಎಂದು ಡಾ.ಕೃಷ್ಣ ಎಲ್ಲ ಹೇಳಿದ್ದಾರೆಂದು ಅನಂತಗೋಪನ್ ಅವರು ತಿಳಿಸಿದ್ದಾರೆ.