Connect with us


      




ದೇಶ

ಮಾರ್ಚ್ ೨೮ ಸೋಮವಾರ ಮತ್ತು ೨೯ ಮಂಗಳವಾರ ಭಾರತ್ ಬಂದ್

Kumara Raitha

Published

on

ನವದೆಹಲಿ: ಮಾರ್ಚ್‌ ೨೭ (ಯು.ಎನ್.‌ಐ.) ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಟನೆ ಜಂಟಿ ವೇದಿಕೆ ಸೋಮವಾರ ಮತ್ತು ಮಂಗಳವಾರ ಭಾರತ್ ಬಂದ್ ಗೆ ಕರೆ ನೀಡಿವೆ. ಬ್ಯಾಂಕ್ ವಲಯ ಬಂದ್ ನಲ್ಲಿ ಪಾಲ್ಗೊಳ್ತಿರುವುದಾಗಿ ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಅಸೋಸಿಯೇಷನ್ ಸ್ಪಷ್ಟಪಡಿಸಿದೆ.

ಕೇಂದ್ರದ ಕಾರ್ಮಿಕ ವಿರೋಧ ನೀತಿ, ರೈತ ವಿರೋಧಿ, ಜನ ವಿರೋಧಿ ಮತ್ತು ರಾಷ್ಟ್ರ ವಿರೋಧಿ ನೀತಿಗಳನ್ನ ವಿರೋಧಿಸಿ ೨ ದಿನ ಬಂದ್ ಆಚರಣೆಗೆ ಕರೆ ನೀಡಲಾಗಿದೆ.ಜೊತೆಗೆ ಸಾರ್ವಜನಿಕ ವಲಯದ ನಿಷೇಧಗಳನ್ನು ಖಾಸಗೀಕರಣಗೊಳಿಸುವ ಕೇಂದ್ರದ ಕ್ರಮ ಮತ್ತು ಬ್ಯಾಂಕಿಂಗ್ ಕಾನೂನುಗಳ ತಿದ್ದುಪಡಿ ಮಸೂದೆ 2021 ಅನ್ನು ವಿರೋಧಿಸಿ ಬ್ಯಾಂಕ್ ಒಕ್ಕೂಟಗಳು ಬಂದ್‌ಗೆ ತಮ್ಮ ಬೆಂಬಲವನ್ನು ನೀಡಿವೆ.

ಕಲ್ಲಿದ್ದಲು, ಉಕ್ಕು, ತೈಲ, ಟೆಲಿಕಾಂ, ಅಂಚೆ, ಆದಾಯ ತೆರಿಗೆ, ತಾಮ್ರ, ವಿಮೆ ಸೇರಿದಂತೆ ಇತರ ವಲಯಗಳ ಒಕ್ಕೂಟಗಳು ಮುಷ್ಕರಕ್ಕೆ ನೋಟಿಸ್ ನೀಡಿವೆ ಎಂದು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಹೇಳಿದೆ. ರೈಲ್ವೇ ಮತ್ತು ರಕ್ಷಣಾ ವಲಯದ ಒಕ್ಕೂಟಗಳು ನೂರಾರು ಸ್ಥಳಗಳಲ್ಲಿ ಮುಷ್ಕರವನ್ನು ಬೆಂಬಲಿಸಲು ಸಾಮೂಹಿಕವಾಗಿ ಸಜ್ಜುಗೊಳುತ್ತಿವೆ.

Share