ನವದೆಹಲಿ: ಜನವರಿ 15 (ಯು.ಎನ್.ಐ)ಕಾರು ಪ್ರಯಾಣವನ್ನು ಇನ್ನಷ್ಟು ಹೆಚ್ಚು ಸುರಕ್ಷಿತಗೊಳಿಸಲು ಹಾಗೂ ಕಾರುಗಳಿಂದಾಗುವ ಅಪಘಾತಗಳನ್ನು ಇಳಿಮುಖಗೊಳಿಸಲು ಕಾರುಗಳಲ್ಲಿ ದೊಡ್ಡ ಬದಲಾವಣೆ ಆಗಲಿದೆ.
ಕಾರು ತಯಾರಕರು ತಯಾರಿಸುವ ಹೊಸ ಕಾರುಗಳಲ್ಲಿ 6 ಏರ್ಬ್ಯಾಗ್ಗಳನ್ನು ಅಳವಡಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ.ಎಂಟು ಜನರನ್ನು ಕರೆದೊಯ್ಯುವ ಮೋಟಾರು ವಾಹನಗಳಿಗೆ ಕನಿಷ್ಠ ಆರು ಏರ್ಬ್ಯಾಗ್ಗಳನ್ನು ಕಡ್ಡಾಯಗೊಳಿಸಬೇಕೆಂದು ಜಿಎಸ್ಆರ್ ಅಧಿಸೂಚನೆಯನ್ನು ಅನುಮೋದಿಸಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸ್ಪಷ್ಟಪಡಿಸಿದ್ದಾರೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MoRTH) ಈಗಾಗಲೇ ಚಾಲಕ ಏರ್ಬ್ಯಾಗ್ ಮತ್ತು ಮುಂಭಾಗದ ಸಹ-ಪ್ರಯಾಣಿಕ ಏರ್ಬ್ಗ್ನ ಫಿಟ್ಮೆಂಟ್ ಅನ್ನು 1 ಜುಲೈ 2019 ರಿಂದ ಜಾರಿಗೆ ತರುವುದನ್ನು ಕಡ್ಡಾಯಗೊಳಿಸಿದೆ. ಕೇಂದ್ರ ಸಚಿವರು ಟ್ವೀಟ್ನಲ್ಲಿ, “ಮುಂಭಾಗ ಮತ್ತು ಹಿಂಭಾಗದ ಎರಡೂ ವಿಭಾಗಗಳಿಗೆ ಮುಂಭಾಗದ ಮತ್ತು ಪಾರ್ಶ್ವದ ಘರ್ಷಣೆಯ ಪರಿಣಾಮವನ್ನು ಕಡಿಮೆ ಮಾಡಲು, M1 ವಾಹನ ವಿಭಾಗದಲ್ಲಿ 4 ಹೆಚ್ಚುವರಿ ಏರ್ಬ್ಯಾಗ್ಗಳನ್ನು ಕಡ್ಡಾಯವಾಗಿ ಮಾಡಲು ನಿರ್ಧರಿಸಲಾಗಿದೆ. ಭಾರತದಲ್ಲಿ ಮೋಟಾರು ವಾಹನವನ್ನು ಹೆಚ್ಚು ಸುರಕ್ಷಿತವಾಗಿಸಲು ಇದು ಬಹಳ ಮುಖ್ಯವಾದ ಹೆಜ್ಜೆಯಾಗಿದೆ ಎಂದಿದ್ದಾರೆ.
ಪ್ರಯಾಣಿಕರಿಗೆ ಸಿಗಲಿದೆ ಹೆಚ್ಚಿನ ಭದ್ರತೆ:
ಇನ್ನು ಮುಂದೆ ಎಲ್ಲಾ ನಾಲ್ಕು ಚಕ್ರಗಳಲ್ಲಿ 6 ಏರ್ ಬ್ಯಾಗ್ಗಳು ವಾಹನದ ಹಿಂಬದಿಯ ಪ್ರಯಾಣಿಕರಿಗೆ ಇರಲಿದೆ. ಮೂಲಗಳ ಪ್ರಕಾರ ನಾಲ್ಕು ಏರ್ಬ್ಯಾಗ್ಗಳ ಬೆಲೆ ಮತ್ತು ವಾಹನಗಳಿಗೆ ಅಗತ್ಯ ಬದಲಾವಣೆಗಳು ಸುಮಾರು 8,000 ರಿಂದ 9,000 ರೂ. ಈ ಹೆಚ್ಚುವರಿ ವೆಚ್ಚವು ಕಾರುಗಳಲ್ಲಿನ ಪ್ರಯಾಣಿಕರ ಸುರಕ್ಷತೆಗೆ ಬಹಳ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ಕಳೆದ ವರ್ಷ ನಾಲ್ಕು ಚಕ್ರದ ಹೊಸ ಮಾದರಿಯ ವಾಹನಗಳಲ್ಲಿ 2 ಏರ್ಬ್ಯಾಗ್ಗಳನ್ನು ಸರ್ಕಾರ ಕಡ್ಡಾಯಗೊಳಿಸಿತ್ತು.
ದೇಶದ ಒಟ್ಟು ಅಪಘಾತಗಳಲ್ಲಿ ಕಾರುಗಳೇ ಹೆಚ್ಚು:
ದೇಶದ ಒಟ್ಟು ರಸ್ತೆ ಅಪಘಾತಗಳಲ್ಲಿ ಕಾರು ಅಪಘಾತಗಳು ಸುಮಾರು 13% ರಷ್ಟಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಟಿಸಿದ ರಸ್ತೆ ಅಪಘಾತದ ಮಾಹಿತಿಯ ಪ್ರಕಾರ, 17,538 ಕಾರು ಸವಾರರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ, ಇದು ದೇಶದ ಒಟ್ಟು ರಸ್ತೆ ಅಪಘಾತಗಳಲ್ಲಿ 13% ಆಗಿದೆ.