Connect with us


      
ದೇಶ

ಪ್ರಧಾನಿ ಭದ್ರತೆಯಲ್ಲಿ ಭಾರಿ ಲೋಪ! ಜೀವಂತವಾಗಿ ಮರಳಿದ್ದಕ್ಕೆ ಧನ್ಯವಾದ ಎಂದ ಮೋದಿ

Iranna Anchatageri

Published

on

ಚಂಡೀಗಢ : ಜನೆವರಿ 05 (ಯು.ಎನ್.ಐ.) ಪಂಜಾಬ್‌ನಲ್ಲಿ ರಸ್ತೆ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯಲ್ಲಿ ಭಾರೀ ಲೋಪವಾಗಿದೆ.

ಪ್ರಧಾನಿ ಮೋದಿ  ಅವರು ಪಂಜಾಬ್ ನ ಬಟಿಂಡಾದಿಂದ ಹುಸೇನಿವಾಲಾದಲ್ಲಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಸೇನಾ ಹೆಲಿಕಾಪ್ಟರ್ ಮೂಲಕ ಭೇಟಿಯಾಗುವುದು ನಿಗದಿಯಾಗಿತ್ತು. ಆದರೆ ಹವಾಮಾನ ವೈಪರೀತ್ಯದಿಂದ ರಸ್ತೆಯ ಮೂಲಕ ತೆರಳುವ ನಿರ್ಧಾರ ಕೈಗೊಳ್ಳಲಾಯಿತು. ಈ ವೇಳೆ, ಕೆಲವು ಪ್ರತಿಭಟನಾಕಾರರ  ಕಾರಣದಿಂದಾಗಿ ಅವರು 15-20 ನಿಮಿಷಗಳ ಕಾಲ ಫ್ಲೈಓವರ್ ಮೇಲೆ ಸಿಲುಕಿಕೊಂಡಿದ್ದರು.

ಈ ಘಟನೆಯನ್ನು ಕೇಂದ್ರ ಗೃಹ ಸಚಿವಾಲಯವು ಪ್ರಧಾನಿ ಭದ್ರತೆಯಲ್ಲಿ “ದೊಡ್ಡ ಲೋಪ” ಎಂದು ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಪಂಜಾಬ್ ಭೇಟಿಯ ವೇಳೆ ಭದ್ರತಾ ಲೋಪ ಸಂಭವಿಸಿದ ಹಿನ್ನೆಲೆಯಲ್ಲಿ ಅವರ ಬೆಂಗಾವಲು ಪಡೆ ಬಟಿಂಡಾಗೆ ವಾಪಸ್ ಆಗಲು ನಿರ್ಧಾರ ಕೈಗೊಂಡಿತು ಎಂದು ಗೃಹ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಈ ಲೋಪಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯವು ಪಂಜಾಬ್ ಸರ್ಕಾರಕ್ಕೆ ಸೂಚಿಸಿದೆ.

ರೈತರ ಪ್ರತಿಭಟನೆಯಿಂದಾಗಿ ಬಟಿಂಡಾ ವಿಮಾನ ನಿಲ್ದಾಣಕ್ಕೆ ಹಿಂತಿರುಗಿದ ಪ್ರಧಾನಿ ಮೋದಿ, “ನಾನು ಬಟಿಂಡಾ ವಿಮಾನ ನಿಲ್ದಾಣದವರೆಗೆ ಜೀವಂತವಾಗಿ ಮರಳಲು ಸಾಧ್ಯವಾದ ನಿಮ್ಮ ಸಿಎಂಗೆ ಧನ್ಯವಾದಗಳು” ಎಂದು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ವ್ಯಂಗ್ಯಭರಿತವಾಗಿ ತಿಳಿಸಿದ್ದಾರೆ.

Share