Connect with us


      




ಸಾಮಾನ್ಯ

ರಷ್ಯಾಗೆ ಭಾರಿ ಶಾಕ್: ಫುಟ್ ಬಾಲ್ ವಿಶ್ವಕಪ್ ನಿಂದ ರಷ್ಯಾ ತಂಡ ಬಹಿಷ್ಕಾರ

UNI Kannada

Published

on

ಮಾರ್ಚ್ 01 (ಯು.ಎನ್.ಐ.) ಉಕ್ರೇನ್ ಮೇಲೆ ಮಿಲಿಟರಿ ದಾಳಿ ನಡೆಸುತ್ತಿರುವ ರಷ್ಯಾಕ್ಕೆ ಹೊಡೆತದ ಮೇಲೆ ಹೊಡೆತ ಬೀಳಲಿದೆ. ಈಗಾಗಲೇ ಪಾಶ್ಚಿಮಾತ್ಯ ದೇಶಗಳು ಅಮೆರಿಕದ ಜತೆ ಸೇರಿ ಹಲವು ನಿರ್ಬಂಧಗಳನ್ನು ಹೇರಿವೆ. ಅದೇ ರೀತಿ ರಷ್ಯಾದಿಂದ ಹಾನಿಗೊಳಗಾಗುತ್ತಿರುವ ಉಕ್ರೇನ್ ಗೆ ಕ್ರೀಡಾ ಲೋಕವೂ ಬೆಂಬಲವಾಗಿ ನಿಂತಿದೆ. ಈ ವರ್ಷದ ಫಿಫಾ ವಿಶ್ವಕಪ್‌ನಿಂದ ರಷ್ಯಾವನ್ನು ಫಿಫಾ ಬಹಿಷ್ಕರಿಸಿದೆ. FIFA ಮತ್ತು UEFA ಜಂಟಿ ಸಭೆಯಲ್ಲಿ FIFA ವಿಶ್ವಕಪ್ 2022 ಸೇರಿದಂತೆ ಎಲ್ಲಾ ಅಂತರಾಷ್ಟ್ರೀಯ ಫುಟ್ಬಾಲ್ ಸ್ಪರ್ಧೆಗಳು ಮತ್ತು ಲೀಗ್‌ಗಳನ್ನು ಬಹಿಷ್ಕರಿಸುವುದಾಗಿ ಘೋಷಿಸಿವೆ.

ರಷ್ಯಾದ ಪುರುಷರ ತಂಡವು ಈ ವರ್ಷದ ಕೊನೆಯಲ್ಲಿ ಕತಾರ್‌ನಲ್ಲಿ ನಡೆಯಲಿರುವ ವಿಶ್ವಕಪ್‌ಗಾಗಿ ಮಾರ್ಚ್‌ನಲ್ಲಿ ಅರ್ಹತಾ ಪ್ಲೇ-ಆಫ್‌ಗಳಲ್ಲಿ ಪೋಲೆಂಡ್‌ನೊಂದಿಗೆ ಆಡಬೇಕಿತ್ತು, ಆದರೆ  ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ರಷ್ಯಾ ವಿರುದ್ಧ ಆಡದಿರಲು ಪೋಲೆಂಡ್ ಫುಟ್ಬಾಲ್ ತಂಡ ನಿರ್ಧರಿಸಿದೆ.

ಅದೇ ರೀತಿ ಜುಲೈನಲ್ಲಿ ಇಂಗ್ಲೆಂಡ್ ನಲ್ಲಿ ನಡೆಯಲಿರುವ ಯುರೋಪಿಯನ್ ಚಾಂಪಿಯನ್ ಶಿಪ್ ನಲ್ಲಿ ರಷ್ಯಾ ಮಹಿಳಾ ತಂಡ ಆಡಬೇಕಿತ್ತು. ರಚ್ಯಾ ಫುಟ್ಬಾಲ್ ತಂಡಗಳ ಮೇಲೆ ಫಿಫಾ ಮತ್ತು ಯುಇಎಫ್ಎ ನಿಷೇಧವು ರಷ್ಯಾಕ್ಕೆ ದೊಡ್ಡ ಹಿನ್ನಡೆಯಾಗಿದೆ. ಅದೇ ರೀತಿ ರಷ್ಯಾದ ಯುದ್ಧೋನ್ಮಾದವನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ತೀವ್ರವಾಗಿ ಖಂಡಿಸಿದೆ.

Share