Connect with us


      
ಸಿನೆಮಾ

ಮೊದಲ ಮಗುವಿನ ನಿರೀಕ್ಷೆಯಲ್ಲಿ ಬಿಪಾಶಾ ಬಸು ದಂಪತಿ

Lakshmi Vijaya

Published

on

ಮುಂಬೈ: ಆಗಸ್ಟ್ 16 (ಯು.ಎನ್.ಐ.) ಬಾಲಿವುಡ್ ನಟಿ ಬಿಪಾಶಾ ಬಸು ಮತ್ತು ಪತಿ ಕರಣ್ ಸಿಂಗ್ ಗ್ರೋವರ್ ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿದ್ದಾರೆ. ಮಂಗಳವಾರ ಇನ್‌ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಬಿಪಾಶಾ ಬಸು ತಮ್ಮ ಗರ್ಭಧಾರಣೆಯನ್ನು ಘೋಷಿಸಿದ್ದಾರೆ. ” ನಮ್ಮ ಜಿವನದ ಹೊಸ ಸಮಯ, ಹೊಸ ಹಂತ, ಹೊಸ ಬೆಳಕು.  ಇಬ್ಬರಾಗಿದ್ದ ನಾವು ಈಗ ಮೂವರಾಗುತ್ತೇವೆ. ನಮ್ಮ ಪ್ರೀತಿಯಿಂದ ವ್ಯಕ್ತವಾದ ಸೃಷ್ಟಿ,ನಮ್ಮ ಮಗು ಬೇಗ ನಮ್ಮನ್ನು ಸೇರುತ್ತದೆ. ನಮ್ಮ ಸಂತೋಷವನ್ನು ಹೆಚ್ಚಿಸಿ. ನಿಮ್ಮ ಬೇಷರತ್ತಾದ ಪ್ರೀತಿಗೆ, ನಿಮ್ಮ ಪ್ರಾರ್ಥನೆಗಳು ಮತ್ತು ಶುಭ ಹಾರೈಕೆಗಳಿಗೆ ಧನ್ಯವಾದಗಳು” ಎಂದು ಗರ್ಭ ಧರಿಸಿರುವ ಫೋಟೋ ಹಂಚಿಕೊಂಡು ತಿಳಿಸಿದ್ದಾರೆ.

2015 ರ ಅಲೋನ್ ಚಿತ್ರದ ಶೂಟಿಂಗ್ ಸಮಯದಲ್ಲಿ ಬಿಪಾಶಾ ಬಸು ಕರಣ್ ಸಿಂಗ್ ಗ್ರೋವರ್ ಅವರನ್ನು ಭೇಟಿಯಾದರು. ಏಪ್ರಿಲ್ 2016 ರಂದು ಬೆಂಗಾಲಿ ಸಂಪ್ರದಾಯದಂತೆ ಇಬ್ಬರೂ ವಿವಾಹವಾದರು. ಡೇಂಜರಸ್ ಎಂಬ ವೆಬ್ ಸರಣಿಯಲ್ಲಿ ದಂಪತಿಗಳು ಸಹ-ನಟರಾಗಿದ್ದರು.

ಬಿಪಾಶಾ ಬಸು ಮಾಜಿ ಸೂಪರ್ ಮಾಡೆಲ್, ಡರ್ ಸಬ್ಕೊ ಲಗ್ತಾ ಹೈ ಎಂಬ ಟಿವಿ ಶೋನಲ್ಲಿ ನಿರೂಪಕರಾಗಿದ್ದರು. ಅವರು 2001 ರಲ್ಲಿ ಅಜ್ ನಬೀ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು.  ಧೂಮ್ 2, ಜಿಸ್ಮ್, ಫಿರ್ ಹೇರಾ ಫೆರಿ, ದಮ್ ಮಾರೋ ದಮ್, ರೇಸ್, ಓಂಕಾರ, ಬಚ್ನಾ ಏ ಹಸೀನೋ ಮತ್ತು ರಾಜ್ ಮುಂತಾದ ಚಿತ್ರಗಳಲ್ಲಿನ ಪಾತ್ರಗಳಿಗೆ ಹೆಚ್ಚು ಹೆಸರುವಾಸಿಯಾಗಿದ್ದಾರೆ.

ಕರಣ್ ಸಿಂಗ್ ಗ್ರೋವರ್, ಜನಪ್ರಿಯ ಟಿವಿ ತಾರೆ. ಡಿಲ್ ಮಿಲ್ ಗಯ್ಯೆ, ಕುಬೂಲ್ ಹೈ, ಕಿತ್ನಿ ಮಸ್ತ್ ಹೈ ಜಿಂದಗಿ ಮತ್ತು ದಿಲ್ ದೋಸ್ತಿ ಡ್ಯಾನ್ಸ್ ಸೇರಿದಂತೆ ಹಲವು ಟಿವಿ ಶೋಗಳ ಭಾಗವಾಗಿದ್ದರು.

Share