Connect with us


      
ದೇಶ

ಜನರಲ್ ಬಿಪಿನ್ ರಾವತ್ ಅವರ ಪಾರ್ಥಿವ ಶರೀರ ಇಂದು ದೆಹಲಿಗೆ

Iranna Anchatageri

Published

on

ಹೊಸ ದಿಲ್ಲಿ, ಡಿ 9 (ಯುಎನ್ಐ) ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಡಾ. ಮಧುಲಿಕಾ ಮತ್ತು 13 ಜನರು ತಮಿಳುನಾಡಿನ ನೀಲಗಿರಿಯಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ನಿನ್ನೆ ಸಂಭವಿಸಿದ ಈ ಹೆಲಿಕಾಪ್ಟರ್ ಅಪಘಾತದಿಂದಾಗಿ ಇಡೀ ದೇಶವೇ ಆಘಾತಕ್ಕೊಳಗಾಗಿದೆ.

ಈ ಮಧ್ಯೆ, ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಡಾ. ಮಧುಲಿಕಾ ರಾವತ್ ಅವರ ಪಾರ್ಥಿವ ಶರೀರವನ್ನು ಇಂದು ದೆಹಲಿಗೆ ತರಲಾಗುತ್ತದೆ. ಮಾಹಿತಿಯ ಪ್ರಕಾರ, ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿಯ ಪಾರ್ಥಿವ ಶರೀರವನ್ನು ದೆಹಲಿ ಕಂಟೋನ್ಮೆಂಟ್‌ಗೆ ತರಲಾಗುವುದು ಮತ್ತು ಅಂತಿಮ ವಿಧಿವಿಧಾನಗಳನ್ನು ಶುಕ್ರವಾರ ನೆರವೇರಿಸಲಾಗುತ್ತದೆ. ಅವರ ಪಾರ್ಥಿವ ಶರೀರವನ್ನು ಇಂದು ಸೇನಾ ವಿಮಾನದ ಮೂಲಕ ರಾಷ್ಟ್ರ ರಾಜಧಾನಿಗೆ ಕೊಂಡೊಯ್ಯಲಾಗುತ್ತದೆ ಅಂತಾ ಸೇನಾ ಮೂಲಗಳು ತಿಳಿಸಿವೆ.

ಸಂಸತ್ತಿನಲ್ಲಿ ಮಾಹಿತಿ ನೀಡಲಿರುವ ರಕ್ಷಣಾ ಸಚಿವ

ತಮಿಳುನಾಡಿನ ನೀಲಗಿರಿಯಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಉಭಯ ಸದನಗಳಲ್ಲಿ ವಿವರವಾದ ಮಾಹಿತಿ ನೀಡಲಿದ್ದಾರೆ. ಮೂಲಗಳ ಪ್ರಕಾರ ಇಂದು ಬೆಳಗ್ಗೆ 11:15ಕ್ಕೆ ಲೋಕಸಭೆಯಲ್ಲಿ ಹಾಗೂ ಮಧ್ಯಾಹ್ನ ರಾಜ್ಯಸಭೆಯಲ್ಲಿ ರಾಜನಾಥ್ ಸಿಂಗ್ ಹೇಳಿಕೆ ನೀಡಲಿದ್ದಾರೆ.

ರಾಜನಾಥ್ ಸಿಂಗ್, ರಕ್ಷಣಾ ಸಚಿವ

Share