Connect with us


      




ದೇಶ

ಕೇರಳದಲ್ಲಿ ಹಕ್ಕಿಜ್ವರ ಪತ್ತೆ; ಹೆಚ್ಚಿದ ಭೀತಿ

Vanitha Jain

Published

on

ತಿರುವನಂತಪುರಂ, ಡಿಸೆಂಬರ್ 09 (ಯು.ಎನ್.ಐ) ಕೇರಳದ ಆಲಪ್ಪುಳ ಜಿಲ್ಲೆಯ ತಾಳವಾಡಿ, ತಕಝಿ, ಪಲ್ಲಿಪಾಡ್ ಮತ್ತು ಕರುವಟ್ಟದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದು, ಬಾತುಕೋಳಿಗಳು, ಕೋಳಿಗಳು ಮತ್ತು ಇತರ ದೇಶೀಯ ಪಕ್ಷಿಗಳನ್ನು ಪೀಡಿತ ಪ್ರದೇಶಗಳ ಒಂದು ಕಿಮೀ ವ್ಯಾಪ್ತಿಯೊಳಗೆ ಕೊಲ್ಲಲು ಆದೇಶಿಸಲಾಗಿದೆ.

ಹಕ್ಕಿಜ್ವರ ಹಿನ್ನೆಲೆ ರಾಜ್ಯದಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಲು ಜಿಲ್ಲಾಧಿಕಾರಿ ಎ ಅಲೆಕ್ಸಾಂಡರ್ ಅಧ್ಯಕ್ಷತೆಯಲ್ಲಿ ಪಶುಸಂಗೋಪನೆ, ಆರೋಗ್ಯ, ಪೆÇಲೀಸ್ ಇಲಾಖೆ ಸೇರಿದಂತೆ ಜಿಲ್ಲೆಯ ಹಿರಿಯ ಅಧಿಕಾರಿಗಳ ತುರ್ತು ಸಭೆ ನಡೆಸಲಾಯಿತು.

ಬಾತುಕೋಳಿಗಳಲ್ಲಿ ಇನ್‍ಫ್ಲುಯೆಂಜಾ ಎ ವೈರಸ್‍ನ ಹೆಚ್5ಎನ್8 ಪತ್ತೆಯಾಗಿರರುವ ಹಿನ್ನೆಲೆ ಪೀಡಿತ ಪ್ರದೇಶವನ್ನು ಕಂಟೈನ್‍ಮೆಂಟ್ ಝೋನ್ ಎಂದು ಘೋಷಿಸಲಾಗಿದ್ದು, ಆ ಪ್ರದೇಶದಲ್ಲಿ ವಾಹನ ಮತ್ತು ಜನರ ಸಂಚಾರವಲ್ಲದೆ, ಬಾತುಕೋಳಿ, ಕೋಳಿ, ಕ್ವಿಲ್ ಮತ್ತು ಸಾಕು ಪಕ್ಷಿಗಳ ಮೊಟ್ಟೆ, ಮಾಂಸ ಮತ್ತು ಗೊಬ್ಬರದ ಬಳಕೆ ಮತ್ತು ಮಾರಾಟವನ್ನು ಸಹ ಜಿಲ್ಲಾಧಿಕಾರಿಗಳು ನಿಷೇಧಿಸಿದ್ದಾರೆ. ಚಂಪಕುಳಂ, ನೆಡುಮುಡಿ, ಮುಟ್ಟಾರ್, ವಿಯಾಪುರಂ, ಕರುವಟ್ಟ, ತ್ರಿಕ್ಕುನ್ನಪುಳ, ತಕಝಿ, ಪುರಕ್ಕಾಡ್, ಅಂಬಲಪುಳ ದಕ್ಷಿಣ, ಅಂಬಲಪುಳ ಉತ್ತರ, ಎಡತ್ವ ಪಂಚಾಯತ್‍ಗಳು ಮತ್ತು ಹರಿಪ್ಪಾಡ್ ಪುರಸಭೆ ವ್ಯಾಪ್ತಿಯ ಪ್ರದೇಶಗಳಿಗೂ ಈ ನಿಯಮ ಅನ್ವಯವಾಗಲಿದೆ ಎಂದು ಹೇಳಿದ್ದಾರೆ.

ವಲಸೆ ಹಕ್ಕಿಗಳಿಗೆ ರೋಗ ತಗುಲಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ನಿಗಾವಹಿಸಲು ಮತ್ತು ಪರಿಶೀಲಿಸಲು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿದ್ದು, ಒಂದು ಕಿ.ಮೀ ಸುತ್ತಮುತ್ತಲಿನ ಪಕ್ಷಿಗಳನ್ನು ಕೊಲ್ಲಲು ಈಗಾಗಗಲೇ ಕ್ಷಿಪ್ರ ತಂಡವನ್ನು ಕೂಡ ರಚಿಸಲಾಗಿದೆ.

Share