Published
5 months agoon
By
Vanitha Jainಬೆಂಗಳೂರು (ಯುಎನ್ಐ): ಬೆಂಗಳೂರು ನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯೂಸುಫ್ ಷರೀಫ್ ಬಾಬು ಅಭ್ಯರ್ಥಿತನವನ್ನು ಅಸಿಂಧುಗೊಳಿಸುವಂತೆ ಬಿಜೆಪಿ ಆಗ್ರಹಿಸಿ ಮುಖ್ಯ ಚುನಾವಣಾಯುಕ್ತರಿಗೆ ಬಿಜೆಪಿ ನಿಯೋಗ ಮನವಿ ಸಲ್ಲಿಸಿದೆ.
ಮೇಲ್ಮನೆ ಬಿಜೆಪಿ ಸದಸ್ಯ ರವಿಕುಮಾರ್ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಯೂಸುಫ್ ಷರೀಫ್ ಬಾಬು ಚುನಾವಣಾನೀತಿ ಸಂಹಿತಿ ವಿರುದ್ಧ ಪತ್ರಿಕೆಗಳಿಗೆ ಜಾಹೀರಾತು ನೀಡುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಪ್ರತಿಯೊಬ್ಬರಿಗೆ ಕುಡಿಯುವ ನೀರು ಯಾವ ರೀತಿ ಪೂರೈಸಲಿದೆ ಎನ್ನುವುದನ್ನು ಹೇಳಿದ್ದಾರೆ. ಚುನಾವಣಾ ನೀತಿ ಸಂಹಿತೆ ಸಮಿತಿ ಅನುಮತಿ ಪಡೆಯದೇ ಪತ್ರಿಕೆಗಳಲ್ಲಿ ಜಾಹೀರಾತು ಮೂಲಕ ಮತದಾರರ ಮೇಲೆ ಆಮಿಷವೊಡ್ಡಿದ್ದಾರೆ. ಇಂತಹ ಪ್ರಚಾರ ಯೂಸೂಫ್ ಷರೀಫ್ ಹಿಂದಿನಿಂದಲೂ ಮುಂದುವರೆಸಿಯೇ ಇದ್ದಾರೆ ಯೂಸುಫ್ ಷರೀಫ್ ಬಾಬು (ಕೆ.ಜಿ. ಷರೀಫ್ ಬಾಬು) ಅಭ್ಯರ್ಥಿತನವನ್ನು ಅಸಿಂಧುಗೊಳಿಸಬೇಕು ಎಂದು ಆಗ್ರಹಿಸಿದರು.
ದೂರು ಸಲ್ಲಿಕೆ ವೇಳೆ ಬಿಜೆಪಿ ಕಾನೂನು ಪ್ರಕೋಷ್ಟ ರಾಜ್ಯ ಸಹ ಸಂಚಾಲಕ ಯೋಗೇಂದ್ರ ಹೊಡಾಘಟ್ಟ, ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ ನಿಯೋಗದಲ್ಲಿದ್ದರು.
ಸೋನಿಯಾ ಗಾಂಧಿ ಆಪ್ತನ ಮಗ ಆಮ್ ಆದ್ಮಿ ಪಕ್ಷದ ಮೇಲೆ ಒಲವು ತೋರಿದ್ದಾರಾ?
ಪಕ್ಷದ ಸಾಧನೆ ಆಘಾತಕಾರಿ ಮತ್ತು ನೋವಿನಿಂದ ಕೂಡಿದೆ: ಸೋನಿಯಾ ಗಾಂಧಿ
ತನ್ನ ಎಲ್ಲಾ ಆಸ್ತಿಯನ್ನು ರಾಹುಲ್ ಗಾಂಧಿಗೆ ವರ್ಗಾಯಿಸಿದ ವೃದ್ಧೆ..ಕಾರಣವೇನು?
ಮೀಸಲು ಸೌಲಭ್ಯ ಕಲ್ಪಿಸದೆ ಚುನಾವಣೆ ನಡೆಸಿದರೆ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗುತ್ತದೆ: ಸಿದ್ದರಾಮಯ್ಯ
ವಿಧಾನ ಪರಿಷತ್ ಸ್ಥಾನಕ್ಕೆ ಸಿ.ಎಂ ಇಬ್ರಾಹಿಂ ರಾಜೀನಾಮೆ
ಇಂಧನ ಬೆಲೆ ಏರಿಕೆ: ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸಂಸದರ ಪ್ರತಿಭಟನೆ