Published
7 months agoon
By
Vanitha Jainಲಕ್ನೋ: ಜನೆವರಿ 15 (ಯು.ಎನ್.ಐ.) ಉತ್ತರಪ್ರದೇಶದಲ್ಲಿ ವಿಧಾನಸಭೆ ಚುನವಣೆಗೆ ಆಡಳಿತರೂಢ ಪಕ್ಷ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ 20 ಶಾಸಕರ ಹೆಸರನ್ನು ಕೈಬಿಟ್ಟಿದೆ.
ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಬಿಡುಗೊಳಿಸಿದ ಪಟ್ಟಿಯಲ್ಲಿ 20 ಶಾಸಕರನ್ನು ನಿರಾಕರಿಸಿದ್ದು, ಹೊಸ ಮುಖಗಳಿಗೆ ಅವಕಾಶ ನೀಡುವ ಗುರಿ ಹೊಂದಿದೆ.
ಈಗ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯಲ್ಲಿ 107 ಅಭ್ಯರ್ಥಿಗಳ ಹೆಸರಿದೆ. ಇವರೆಲ್ಲರೂ ಮೊದಲ ಎರಡು ಹಂತಗಳಲ್ಲಿ ನಡೆಯುವ ಚುನಾವಣಾ ಅಭ್ಯರ್ಥಿಗಳಾಗಿದ್ದಾರೆ. 2017ರಲ್ಲಿ ಆಡಳಿತ ಪಕ್ಷ 83 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಈ ಪೈಕಿ 63 ಸ್ಥಾನಗಳಲ್ಲಿ ಗೆದ್ದಿರುವ ಶಾಸಕರನ್ನು ಉಳಿಸಿಕೊಳ್ಳಲಾಗಿದ್ದು, ಉಳಿದ 20 ಹಾಲಿ ಶಾಸಕರನ್ನು ಕೈಬಿಡಲಾಗಿದೆ.
ಮಾಜಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ನೇತೃತ್ವದಲ್ಲಿ ಇಬ್ಬರು ಮಾಜಿ ಕ್ಯಾಬಿನೆಟ್ ಸಚಿವರು ಮತ್ತು ಹಲವು ಶಾಸಕರು ಬಿಜೆಪಿ ತೊರೆದು ಶುಕ್ರವಾರ ಪ್ರತಿಸ್ಪರ್ಧಿ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡರು.
ರಾಜ್ಯದ 403 ಸದಸ್ಯ ಬಲದ ವಿಧಾನಸಭೆಯಲ್ಲಿ ಇತರ 296 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ನಂತರ ಪ್ರಕಟಿಸಲಾಗುವುದು. ಉತ್ತರ ಪ್ರದೇಶದಲ್ಲಿ 2017ರಲ್ಲಿ ನಡೆದ ಚುನಾವಣೆಯಲ್ಲಿ 403 ವಿಧಾನಸಭಾ ಕ್ಷೇತ್ರಗಳ ಪೈಕಿ 303 ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು.
ಹೊಸ ಸೇನಾಭವನ ನಿರ್ಮಿಸಲು ಶಿಂಧೆ ಪ್ಲಾನ್? ಊಹಾಪೋಹಗಳೆಂದ ಸಚಿವ
ರಾಷ್ಟ್ರಧ್ವಜ ಇಲ್ಲದ ಮನೆಗಳ ಫೋಟೋ ತೆಗೆಯಿರಿ; ಉತ್ತರಾಖಂಡ ಬಿಜೆಪಿ ಮುಖ್ಯಸ್ಥರ ಸ್ಪಷ್ಟನೆಯೇನು?
ಪಕ್ಷ ಸೇರಿದ 10 ತಿಂಗಳಲ್ಲೇ ಟಿಎಂಸಿ ತೊರೆದಿದ್ದೇಕೆ ಮಾಜಿ ಸಂಸದ?
ನನ್ನ ಮನಸ್ಸಿನಲ್ಲಿಲ್ಲ; ಪ್ರಧಾನಿ ಹುದ್ದೆ ಆಕಾಂಕ್ಷೆ ಬಗ್ಗೆ ನಿತೀಶ್ ಕುಮಾರ್ ಹೇಳಿಕೆ
ಕಾಂಗ್ರೆಸಿನಿಂದ ಸುಳ್ಳು ಸುದ್ದಿ: : ಸಚಿವ ಸುಧಾಕರ್
ಸುಳ್ಳಿನಿಂದ ಬೆತ್ತಲಾದ ಕಾಂಗ್ರೆಸ್ : ಸಿ.ಸಿ. ಪಾಟೀಲ್