Published
5 months agoon
By
Vanitha Jainಶ್ರೀನಗರ, ಡಿಸೆಂಬರ್ 11(ಯು.ಎನ್.ಐ) ಬಿಜೆಪಿ ಪಕ್ಷವು ಕಾಶ್ಮೀರಿ ಪಂಡಿತರನ್ನು “ಮತ ಬ್ಯಾಂಕ್” ಆಗಿ ಬಳಸುತ್ತಿದೆಯೇ ವಿನಃ ಅವರ ಅನುಕೂಲತೆಗಾಗಿ ಏನು ಮಾಡಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫರೂಕ್ ಅಬ್ದುಲ್ಲಾ ಬಿಜೆಪಿಯ ಮೇಲೆ ಕಿಡಿಕಾರಿದರು.
ಫರೂಕ್ ಅಬ್ದುಲ್ಲಾ ಅಧ್ಯಕ್ಷರಾಗಿರುವ ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ನ ಅಲ್ಪಸಂಖ್ಯಾತ ಘಟಕವು ಶನಿವಾರ ಕಾಶ್ಮೀರಿ ಪಂಡಿತರ ಕುರಿತಾಗಿ ಮೂರು ನಿರ್ಣಯಗಳನ್ನು ಮಂಡಿಸಿ ಅಂಗೀಕರಿಸಿದ ನಂತರ ಮಾತನಾಡಿದರು.
ರಾಜಕೀಯ ಪಕ್ಷದ ಅಲ್ಪಸಂಖ್ಯಾತ ಘಟಕವು ಕಾಶ್ಮೀರಿ ಪಂಡಿತರಿಗೆ ರಾಜಕೀಯ ಮೀಸಲಾತಿ, ಕಾಶ್ಮೀರಿ ಹಿಂದೂ ದೇವಾಲಯದ ಸಂರಕ್ಷಣಾ ಮಸೂದೆಯ ಅಂಗೀಕಾರ ಮತ್ತು ಕಾಶ್ಮೀರಿ ಪಂಡಿತರ ಮರಳುವಿಕೆ ಮತ್ತು ಪುನರ್ವಸತಿಗಾಗಿ ಸಮಗ್ರ ಪ್ಯಾಕೇಜ್ ಎಂಬ ಮೂರು ನಿರ್ಣಯಗಳನ್ನು ಅಂಗೀಕರಿಸಿದೆ.
“ಕೆಲವು ಶಕ್ತಿಗಳು ಕಾಶ್ಮೀರಿ ಪಂಡಿತರು ಮತ್ತು ಮುಸ್ಲಿಂ ಸಮುದಾಯವನ್ನು ವಿಭಜಿಸಲು ಪ್ರಯತ್ನಿಸಿದವು. ಪಂಡಿತರನ್ನು ಕಾಶ್ಮೀರ ತೊರೆಯುವಂತೆ ಒತ್ತಾಯಿಸಿದ್ದು ಸ್ವಾರ್ಥಿಗಳೇ ಹೊರತು ಮುಸ್ಲಿಮರಲ್ಲ. ಪಂಡಿತರನ್ನು ಕಣಿವೆಯಿಂದ ಹೊರಹಾಕಿದ ನಂತರ ಕಾಶ್ಮೀರವನ್ನು ತಮ್ಮ ವಶಕ್ಕೆ ಪಡೆದುಕೊಳ್ಳಬಹುದೆಂದು ಅವರು ಭಾವಿಸಿದ್ದರು. ಆದರೆ ಅವರು ಎಂದಿಗೂ ತಮ್ಮ ಕೆಟ್ಟ ಯೋಜನೆಗಳನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಕಾಶ್ಮೀರಿ ಪಂಡಿತರಿಗೆ ಆಶ್ರಯ ನೀಡಿದ್ದಕ್ಕಾಗಿ ನಾನು ಜಮ್ಮುವಿನ ಜನರನ್ನು ಅಭಿನಂದಿಸುತ್ತೇನೆ ಎಂದರು.
“ನಾವೆಲ್ಲರೂ ನಮ್ಮ ಮನಸ್ಸನ್ನು ಸ್ವಚ್ಛಗೊಳಿಸಬೇಕು ಮುಸ್ಲಿಂ ಮತ್ತು ಹಿಂದೂ ಸಮುದಾಯಗಳ ಅಂತರವನ್ನು ಕಡಿಮೆ ಮಾಡಲು ಮತ್ತು ದ್ವೇಷವನ್ನು ಪ್ರೀತಿಯಿಂದ ಬದಲಾಯಿಸಲು ಪ್ರಯತ್ನಿಸಬೇಕು. ನಮ್ಮನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಯಾರಿಗೂ ಅವಕಾಶ ನೀಡಬಾರದು” ಎಂದರು.
ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾದ ಸ್ಥಳವನ್ನು ಬಂದ್ ಮಾಡಿ: ಕೋರ್ಟ್ ಆದೇಶ
ಜ್ಞಾನವಾಪಿ ಮಸೀದಿಯ ಕೊಠಡಿಯಲ್ಲಿ ಶಿವಲಿಂಗ ಪತ್ತೆ: ವಿಎಚ್ಪಿ ಸಂತಸ
ಜೆಡಿಯು ಶಾಸಕ ನೃತ್ಯ ; ಪಕ್ಷದ ಎಚ್ಚರಿಕೆ
1402 ವರ್ಷಗಳ ನಂತರ ವೈಶಾಖ ಪೂರ್ಣಿಮೆಯಂದು ಪೂರ್ಣ ಚಂದ್ರಗ್ರಹಣ
ಕೇರಳದಲ್ಲಿ ಟ್ವೆಂಟಿ-20 ಜೊತೆ ಎಎಪಿ ರಾಜಕೀಯ ಮೈತ್ರಿ!
ಕೇರಳ ಮಳೆ ಎಚ್ಚರ: 5 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ