Connect with us


      




ರಾಜಕೀಯ

ಇಂದು ಬಿಜೆಪಿ ಶಾಸಕಾಂಗ ಸಭೆ; ಮಹತ್ವದ ವಿಚಾರ ಚರ್ಚೆ

UNI Kannada

Published

on

ಬೆಂಗಳೂರು/ಬೆಳಗಾವಿ,ಡಿಸೆಂಬರ್‌ 15(ಯು.ಎನ್.ಐ) ಇಂದು ಸಂಜೆ ಬಿಜೆಪಿ ಶಾಸಕಾಂಗ ಸಭೆ ಕರೆದಿದ್ದು,ಸಭೆಯಲ್ಲಿ ಮಹತ್ತರ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆಯಾಗಲಿದೆ.

 ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಸಂಜೆ ೭ ಗಂಟೆಗೆ ಸಭೆ ನಿಗದಿಯಾಗಿದೆ.  ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಬಿಜೆಪಿಗೆ ನಿರೀಕ್ಷಿಸಿದ ಗೆಲುವು ದೊರಕದಿರುವುದು,  ಆಂತರಿಕವಾಗಿ ಪಕ್ಷಕ್ಕೆ ಬೆಂಬಲಿಸದಿರುವ ಬಗ್ಗೆ ನಿರೀಕ್ಷಿಸಿದ ಗೆಲುವಿನ ಹಿನ್ನಡೆಗೆ ಕಾರಣಗಳೆಲ್ಲವೂ ಸಭೆಯಲ್ಲಿ ಚರ್ಚೆಯಾಗಲಿವೆ.
ವಿಧಾನ ಪರಿಷತ್ ಚುನಾವಣಾ ಫಲಿತಾಂಶ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿ ಆಗಿ ಮೇಲ್ಮನೆ ಚನಾವಣಾ ಫಲಿತಾಂಶದ ಬಗ್ಗೆ ಚರ್ಚೆ ನಡೆಸಿದ್ದರು.ಆಗ ಪಕ್ಷದ ಶಾಸಕಾಂಗ ಸಭೆಯಲ್ಲಿ ಈ ಕುರಿತು ಚರ್ಚಿಸೋಣ ಎಂದು ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದರು ಎನ್ನಲಾಗಿದೆ.  ಸಭೆಯಲ್ಲಿ ಕಾಂಗ್ರೆಸ್ ಬಲವರ್ಧನೆಗೆ ಕಾರಣಗಳೇನು? ಪಕ್ಷಕ್ಕೆ ಬೆಂಬಲಿಸದಿರುವವರು ಯಾರೆಂಬ ಚರ್ಚೆ ನಡೆಸಿ ಸಭೆಯ ವರದಿಯನ್ನು ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್‌ ಅವರಿಗೂ ಮಾಹಿತಿ ನೀಡಲಿದ್ದಾರೆ ಎಂದು ಹೇಳಲಾಗಿದೆ.



Share