Published
4 months agoon
ಬೆಂಗಳೂರು: jಜನೆವರಿ ೨೫ (ಯು.ಎನ್.ಐ.) ರಾಜ್ಯ ರಾಜಕಾರಣದಲ್ಲಿ ಚುನಾವಣಾ ಸಂದರ್ಭದ ವಲಸೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉತ್ತರ ಪ್ರದೇಶ ಮಾದರಿಯಲ್ಲಿ ರಾಜ್ಯ ಸರ್ಕಾರದಲ್ಲಿಯೂ ಕೆಲವು ಸಚಿವರು ಅಧಿಕಾರ ಅನುಭವಿಸಿ ವಲಸೆ ಹೋಗುತ್ತಾಾರೆ ಎಂದು ಹೇಳಿರುವ ಮಾತು ರಾಜ್ಯ ಬಿಜೆಪಿಯಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ. ಕೆಲವು ಸಚಿವರನ್ನು ಅನುಮಾನದಿಂದ ನೋಡುವಂತೆ ಮಾಡಿದೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ನಿಂದ ಬಿಜೆಪಿಗೆ ವಲಸೆ ಬಂದಿರುವ ಸಚಿವರು ಮತ್ತು ಶಾಸಕರು ಯಾವುದೇ ಕಾರಣಕ್ಕೂ ಕಾಂಗ್ರೆಸ್ಗೆ ವಾಪಸ್ ಹೋಗುವುದಿಲ್ಲ ಎಂದು ಸಮರ್ಥನೆಗೆ ಪರದಾಡುವಂತಾಗಿದೆ.
ಇದರ ಬೆನ್ನಲ್ಲೇ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಜೆಪಿಯಿಂದ ಕಾಂಗ್ರೆಸ್ಗೆ ವಲಸೆ ಬರುವವರ ದೊಡ್ಡ ಪಟ್ಟಿಯೇ ಇದೆ. ಆದರೆ, ಈ ಸಂದರ್ಭದಲ್ಲಿ ಯಾರ ಹೆಸರನ್ನೂ ಹೇಳುವುದಿಲ್ಲ ಎಂದು ಹೇಳಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಕಾಂಗ್ರೆಸ್ನಿಂದ ವಲಸೆ ಬಂದಿರುವ ಸಚಿವರುಗಳ ಮೇಲೆ ಮತ್ತಷ್ಟು ಅನುಮಾನ ಮೂಡುವಂತೆ ಮಾಡಿದೆ. ವಲಸಿಗ ಸಚಿವರು ಬಿಜೆಪಿಯಲ್ಲಿಯೇ ಮುಂದುವರೆಯುವ ಬಗ್ಗೆ ಸಮರ್ಥನೆಗೆ ಪರದಾಡುವಂತಾಗಿದೆ.
ಸಚಿವ ಸಂಪುಟ ಪುನಾರಚನೆ ಮಾಡಬೇಕೆಂದು ಒತ್ತಡ ಹೇರುತ್ತಿರುವ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಾಳ್ ಹಾಲಿ ಸಂಪುಟದಲ್ಲಿರುವ ವಲಸಿಗ ಸಚಿವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆ ಸಂಪರ್ಕದಲ್ಲಿದ್ದಾರೆ. ಕಾಂಗ್ರೆಸ್ ನಿಂದ ಸ್ಪರ್ಧಿಸಲು ಕ್ಷೇತ್ರ ಖಚಿತಪಡಿಸಿಕೊಂಡಿದ್ದಾಾರೆ ಎಂಬ ಹೇಳಿಕೆ ನೀಡಿದ್ದಾರೆ. ಈ ಬೆನ್ನಲ್ಲೇ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಮ್ಮ ಜೊತೆ ಬಿಜೆಪಿಯ ನಾಯಕರು ಸಂಪರ್ಕದಲ್ಲಿದ್ದಾರೆ ಎಂಬ ಹೇಳಿಕೆ, ರಾಜ್ಯ ಬಿಜೆಪಿಯಲ್ಲಿ ಹಾಲಿ ಸಚಿವರುಗಳನ್ನು ಅನುಮಾನದಿಂದ ನೋಡುವಂತೆ ಮಾಡಿದೆ.
ಈ ಹೇಳಿಕೆಗಳ ಬೆನ್ನಲ್ಲೇ ರಾಜ್ಯ ಬಿಜೆಪಿ ಘಟಕ ಸಿದ್ದರಾಮಯ್ಯ ವಿರುದ್ಧ ಟ್ವೀಟ್ ಮಾಡಿದೆ. ತಮ್ಮ ಜೊತೆಗೆ ಸಂಪರ್ಕದಲ್ಲಿರುವ ಹಾಗೂ ತಮ್ಮ ಪಕ್ಷಕ್ಕೆ ಬರುವವರ ಹೆಸರುಗಳನ್ನು ಹೇಳುವಂತೆ ಆಗ್ರಹಿಸಿದೆ.
ಕಟೀಲ್ ತಿರುಗೇಟು: ಬಿಜೆಪಿಯ ಯಾವೊಬ್ಬ ಶಾಸಕರೂ ಕಾಂಗ್ರೆಸ್ ಸಂಪರ್ಕದಲ್ಲಿಲ್ಲ. ಆದರೆ ಕಾಂಗ್ರೆಸಿನ ಹಲವು ಶಾಸಕರೇ ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿ ರಾಜ್ಯಾಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಕರ್ನಾಟಕದಲ್ಲಿ ಹತ್ತಾರು ಜನ ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ. ಮೋದಿ ಯೋಚನೆ, ಯೋಜನೆಗಳು, ಮೂರು ವರ್ಷ ಕೋವಿಡ್ ನಡುವೆ ಆಗಿರುವ ಅಭಿವೃದ್ಧಿ, ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರದ ಅಭಿವೃದ್ಧಿ ನೋಡಿ ಕಾಂಗ್ರೆಸ್ ನಲ್ಲಿ ಭವಿಷ್ಯವಿಲ್ಲ ಎಂದು ಆ ಪಕ್ಷದ ಮತ್ತು ಜೆಡಿಎಸ್ ಪ್ರಮುಖರು ಬಿಜೆಪಿ ಕಡೆ ಮುಖ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕರು ಅಧಿಕಾರದ ಹಗಲುಗನಸು ಕಾಣುತ್ತಿದ್ದಾರೆ. ಪ್ರಚಲಿತ ರಾಜಕಾರಣದ ವಿದ್ಯಮಾನಗಳಿಂದ ಭಯಭೀತರಾಗಿದ್ದಾರೆ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸ್ಪಷ್ಟ ಎಂದು ಬಿಜೆಪಿ ಶಾಸಕರು ಕಾಂಗ್ರೆಸ್ ಸೇರಲು ನಮ್ಮ ಸಂಪರ್ಕದಲ್ಲಿದ್ದಾರೆ ಎನ್ನುವ ಹೇಳಿಕೆ ನೀಡಿ ಕಾಂಗ್ರೆಸ್ ನಾಯಕರು ಅತಂತ್ರ ಸೃಷ್ಟಿ ಮಾಡಲು ಹೊರಟಿದ್ದಾರೆ. ಕುತಂತ್ರ ರಾಜಕಾರಣ ಮಾಡುತ್ತಿಿದ್ದಾರೆ. ಬಿಜೆಪಿಯ ಯಾವೊಬ್ಬರೂ ಕಾಂಗ್ರೆೆಸ್ ಸಂಪರ್ಕದಲ್ಲಿ ಇಲ್ಲ ತಿರುಗೇಟು ನೀಡಿದ್ದಾಾರೆ.
ಕಾಂಗ್ರೆಸ್ನಲ್ಲಿ ಅಭದ್ರತೆ:
ಕಾಂಗ್ರೆಸ್ ಪಕ್ಷಕ್ಕೆೆ ಅಭದ್ರತೆ ಕಾಡುತ್ತಿದ್ದೆ. ಕಾಂಗ್ರೆೆಸ್ ಪಕ್ಷದ ನಾಯಕರಿಬ್ಬರೂ ಕೇವಲ ಹೇಳಿಕೆಗಳನ್ನು ನೀಡುತ್ತಿಿದ್ದಾರೆ. ಭಾಜಪ ಪಕ್ಷದಿಂದ ಯಾರೂ ವಲಸೆ ಹೋಗುವ ಪ್ರಶ್ನೆಯೇ ಇಲ್ಲ. ಕಾಂಗ್ರೆೆಸ್ ಪಕ್ಷ ಬೇಡವೆಂದು ಭಾಜಪಕ್ಕೆೆ ಸೇರಿದವರು ಇದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಾಯಿ ತಿರುಗೇಟು ನೀಡಿದ್ದಾಾರೆ.
ರಾಜಕೀಯ ಬೆಳವಣಿಗೆಗಳ ಬಗ್ಗೆೆ ವ್ಯಾಖ್ಯಾನ ಬೇಡ. ಇದೆಲ್ಲದರ ಪರಿಣಾಮ ಸದ್ಯದಲ್ಲಿಯೇ ಕಾಣಲಿದ್ದು, ಬಿಜೆಪಿ ಪಕ್ಷ ಇನ್ನಷ್ಟು ಬಲವರ್ಧನೆಗೊಳ್ಳಲಿದೆ ಎಂದು ತಿಳಿಸಿದರು.
ದುರಹಂಕಾರವಲ್ಲ… ಅದು ವಿಶ್ವಾಸ: ರಾಹುಲ್ ಗಾಂಧಿಗೆ ಸಚಿವ ಜೈಶಂಕರ್ ತಿರುಗೇಟು
ಸಂಪರ್ಕ ಕ್ರಾಂತಿಗೆ ನಾಂದಿ ಹಾಡಿದ ರಾಜೀವ್ ಗಾಂಧಿ
ಸಿಬಿಐ ದಾಳಿ ವೇಳೆ ಪಕ್ಷದ ಕಾರ್ಯಕರ್ತರಿಗೆ ಕಪಾಳಮೋಕ್ಷ ಮಾಡಿದ ಲಾಲು ಪತ್ನಿ
ಕೊನೆಗೂ ಸಿಕ್ತು ಜಾಮೀನು.. 2 ವರ್ಷದ ಬಳಿಕ ಜೈಲಿಂದ ಹೊರಬಂದ ಅಜಂಖಾನ್
ಸುನೀಲ್ ಜಖರ್ ಬಿಜೆಪಿಗೆ ಸೇರ್ಪಡೆ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ಸಾಮೂಹಿಕ ನಾಯಕತ್ವ ಇಲ್ಲದೇ ಕಾಂಗ್ರೆಸ್ ಗೆಲ್ಲುವುದು ಸಾಧ್ಯವೇ ?