Connect with us


      
ಕರ್ನಾಟಕ

ಬಿಜೆಪಿ ಈಗ ಒನ್ ಮ್ಯಾನ್ ಪಾರ್ಟಿ ಎಂದ ದೇವೇಗೌಡ

UNI Kannada

Published

on

ನಾನು ಪ್ರಧಾನಿಯಾದ ಮೇಲೆ ಜೆ.ಎಚ್. ಪಟೇಲ್, ಸಿದ್ದರಾಮಯ್ಯ ರಾಜ್ಯದಲ್ಲಿ ಆಡಳಿತ ನಡೆಸಿದರು. ಅಂದಿನಿಂದ ರಾಜ್ಯದಲ್ಲಿ ಜನತಾದಳ ನಿಧಾನವಾಗಿ ವರ್ಚಸ್ಸು ಕಳೆದುಕೊಂಡಿತು.

ಕಲಬುರಗಿ : ಜನವರಿ 04 (ಯು.ಎನ್.ಐ.) ಬಿಜೆಪಿಯನ್ನು ಈಗ ಬಿಜೆಪಿ ಎನ್ನಬೇಕೋ ಇಲ್ಲವೇ ಮೋದಿ ಪಾರ್ಟಿ ಎಂದು ಕರೆಯಬೇಕೋ ಗೊತ್ತಿಲ್ಲ. ಬಿಜೆಪಿ ಈಗ ಒನ್ ಮ್ಯಾನ್ ಪಾರ್ಟಿಯಾಗಿದೆ. ಅದರ ಮುಂದಿನ ಪರಿಣಾಮ ಏನಾಗುತ್ತೋ ಅದೂ ಗೊತ್ತಿಲ್ಲ ಎಂದು ಜೆಡಿಎಸ್ ರಾಷ್ಟ್ರಾಧ್ಯಕ್ಷ ರಾಜ್ಯಸಭಾ ಸದಸ್ಯ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡ, ನಾನು ಆಕಸ್ಮಿಕವಾಗಿ ದೆಹಲಿಗೆ ಹೋದೆ. ನಾನು ಪ್ರಧಾನಿಯಾದ ಮೇಲೆ ಜೆ.ಎಚ್. ಪಟೇಲ್, ಸಿದ್ದರಾಮಯ್ಯ ರಾಜ್ಯದಲ್ಲಿ ಆಡಳಿತ ನಡೆಸಿದರು. ಅಂದಿನಿಂದ ರಾಜ್ಯದಲ್ಲಿ ಜನತಾದಳ ನಿಧಾನವಾಗಿ ವರ್ಚಸ್ಸು ಕಳೆದುಕೊಂಡಿತು. ಈ ಪಕ್ಷವನ್ನು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದವರು ಸರ್ವನಾಶ ಮಾಡಲು ಹೊರಟಿದ್ದಾರೆ. ಆದರೆ ಸದ್ಯದ ಕಾಂಗ್ರೆಸ್ ಸ್ಥಿತಿ ಶೋಚನೀಯವಾಗಿದೆ. ಬಿಜೆಪಿ ಈಗ ಒನ್ ಮ್ಯಾನ್ ಪಾರ್ಟಿಯಾಗಿದೆ ಎಂದರು.

ಮುಂದಿನ ವರ್ಷವೇ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ಪರ್ವ. ರಾಜ್ಯದಲ್ಲಿಯೂ ವಿಧಾನಸಭೆಗೆ ಮಹಾ ಚುನಾವಣೆ ನಡೆಯಲಿದೆ. ಹಾಗಾಗಿ ರಾಜಕೀಯ ಪಕ್ಷಗಳು ತಮ್ಮ ಶಕ್ತ್ಯಾನುಸಾರ ಅದಾಗಲೇ ಚುನಾವಣಾ ಕೆಲಸಗಳಲ್ಲಿ ತೊಡಗಿಸಿಕೊಂಡಿವೆ. ಸದ್ಯದಲ್ಲೇ ನಡೆಯಲಿರುವ ಪಂಚ ರಾಜ್ಯ ಚುನಾವಣೆಗಳು ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ. ರಾಜಕೀಯ ಪಕ್ಷದ ಮುಖಂಡರೂ ನೀರಿನ ರಾಜಕಾರಣಕ್ಕೆ ಮುಂದಾಗಿ ಟೆಸ್ಟಿಂಗ್​ ದಿ ವಾಟರ್ಸ್ ಎಂಬಂತೆ ಅಲ್ಲೊಂದು ಇಲ್ಲೊಂದು ಕಲ್ಲೆಸೆದು ಒಳಸುಳಿಗಳನ್ನು ಅರ್ಥೈಸಿಕೊಳ್ಳಲು ಮುಂದಾಗಿದ್ದಾರೆ. ರಾಷ್ಟ್ರ ರಾಜಕಾರಣದ ಚಿತ್ರಣವನ್ನು ತೆರೆದಿಟ್ಟಿರುವ ಮಾಜಿ ಪ್ರಧಾನಿ ದೇವೇಗೌಡ ದೇಶದಲ್ಲಿ ತೃತಿಯ ರಂಗ ಸ್ಥಾಪನೆ ಮಾಡುವುದು ಸದ್ಯಕ್ಕೆ ಕಷ್ಟವಿದೆ. ಪಂಚ ರಾಜ್ಯ ಚುನಾವಣೆ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ದೇವೇಗೌಡ ವ್ಯಾಖ್ಯಾನಿಸಿದರು.

ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ ನಾಯಕರು ವರ್ಚಸ್ಸು ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ. ಇದೇ ಕೆಲಸವನ್ನು ಹಿಂದೆ ಸಿದ್ದರಾಮಯ್ಯ 5 ವರ್ಷ ಸರ್ಕಾರದಲ್ಲಿದ್ದಾಗ ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದ ದೇವೇಗೌಡ, ನೀರಾವರಿ ವಿಚಾರದಲ್ಲಿ ಯಾರೂ ಸಹ ಲಘುವಾಗಿ ಮಾತನಾಡಬಾರದು. ಮೇಕೆದಾಟು ಅರ್ಜಿ ವಿಚಾರಣೆ ಸುಪ್ರಿಂಕೋರ್ಟ್ ನಲ್ಲಿ ದಿನಾಂಕ ನಿದಿಯಾಗಿದೆ ಎಂದು ಎಂದಿನಂತೆ ಚಾಣಾಕ್ಷ್ಯತನದಿಂದ ಕಾಂಗ್ರೆಸ್ ನ ಮೇಕೆದಾಟು ವಿಚಾರವಾಗಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಇದೇ ವೇಳೆ ರಾಮನಗರದಲ್ಲಿನ ಸಚಿವ ಅಶ್ವತ್ಥ  ನಾರಾಯಣ ಮೇಲೆ ಕಾಂಗ್ರೆಸ್ ನಾಯಕರ ದಾಳಿ ವಿಚಾರವಾಗಿ ಮಾತನಾಡಿ ರಾಷ್ಟ್ರೀಯ ಪಕ್ಷದವರು ಹೀಗೆ ಮಾಡಬಾರದಿತ್ತು ಎಂದಷ್ಟೇ ದೇವೇಗೌಡ ಹೇಳಿದರು.

Share