Published
5 months agoon
ಬೆಂಗಳೂರು: ಡಿಸೆಂಬರ್ ೧೪ (ಯು.ಎನ್.ಐ.) ಬಿಜೆಪಿ ಬಗ್ಗೆ ರಾಜ್ಯದ ಜನರಲ್ಲಿ ವಿಶ್ವಾಸ ವೃದ್ಧಿಸಿರುವುದು ವಿಧಾನ ಪರಿಷತ್ ಚುನಾವಣಾ ಫಲಿತಾಂಶದ ಮೂಲಕ ಸಾಬೀತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ ಬಂದಿದ್ದು ಬಿಜೆಪಿ 12 ಸ್ಥಾನ ಗಳಿಸಿದೆ. ಪಕ್ಷವು ಹಿಂದೆ ಈ ಪೈಕಿ ಆರು ಸ್ಥಾನಗಳನ್ನು ಗೆದ್ದಿತ್ತು. ಹೆಚ್ಚುವರಿ ಆರು ಸ್ಥಾನಗಳ ಗೆಲುವು ಪಕ್ಷದ ಜನಪರ ಕಾರ್ಯಕ್ರಮಗಳಿಗೆ ಸಿಕ್ಕಿದ ಜನಮನ್ನಣೆ. ಕೇಂದ್ರದಲ್ಲಿ ಪ್ರಧಾನಿಗಳಾದ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಹಾಗೂ ರಾಜ್ಯದಲ್ಲಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕೈಗೊಳ್ಳುತ್ತಿರುವ ಜನಪರ ಹಾಗೂ ಅಭಿವೃದ್ಧಿ ಪರ ಕಾರ್ಯಗಳಿಗೆ ಜನರ ಬೆಂಬಲವಿರುವುದು ಇದರಿಂದ ವ್ಯಕ್ತವಾಗಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.
ಬೆಂಗಳೂರು ಕ್ಷೇತ್ರದ ಗೆಲುವು ಪಕ್ಷದ ಮಹತ್ವದ ಸಾಧನೆ. ಹಿಂದೆ 13 ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಪಕ್ಷವು ಈ ಬಾರಿ 11 ಕ್ಷೇತ್ರಗಳಲ್ಲಿ ಗೆದ್ದಿದೆ. ಜೆಡಿಎಸ್ ಹಿಂದೆ ನಾಲ್ಕು ಸ್ಥಾನಗಳಲ್ಲಿ ಗೆದ್ದಿದ್ದು ಈ ಸಾರಿ ಕೇವಲ ಒಂದು ಸ್ಥಾನವನ್ನು ಗೆದ್ದಿದೆ. ಇದು ಬಿಜೆಪಿ ಪ್ರಾಬಲ್ಯದ ಸ್ಪಷ್ಟ ಸಂಕೇತ ಎಂದು ಅವರು ತಿಳಿಸಿದ್ದಾರೆ.
ಈ ಸಾಧನೆಯ ಹಿಂದೆ ಪಕ್ಷದ ಕಾರ್ಯಕರ್ತರ ಹಾಗೂ ಮುಖಂಡರ ಸಂಘಟಿತ ಶ್ರಮವಿದೆ. ಈ ಗೆಲುವು ನೀಡಿದ ಮತದಾರರಿಗೆ ಕೃತಜ್ಞತೆಗಳು ಮತ್ತು ಗೆದ್ದಿರುವ ಪಕ್ಷದ ಎಲ್ಲ ಅಭ್ಯರ್ಥಿಗಳಿಗೂ ಅಭಿನಂದನೆಗಳು. ಪಕ್ಷದ ಕಾರ್ಯಕರ್ತರು ಹಾಗೂ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ನಳಿನ್ ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ.
ಕೊನೆಗೂ ಸಿಕ್ತು ಜಾಮೀನು.. 2 ವರ್ಷದ ಬಳಿಕ ಜೈಲಿಂದ ಹೊರಬಂದ ಅಜಂಖಾನ್
ಸುನೀಲ್ ಜಖರ್ ಬಿಜೆಪಿಗೆ ಸೇರ್ಪಡೆ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ಸಾಮೂಹಿಕ ನಾಯಕತ್ವ ಇಲ್ಲದೇ ಕಾಂಗ್ರೆಸ್ ಗೆಲ್ಲುವುದು ಸಾಧ್ಯವೇ ?
ಶರದ್ ಪವಾರ್ ವಿರುದ್ಧ ಪೋಸ್ಟ್; ಸಿನಿಮಾ ನಟಿಗೆ ನ್ಯಾಯಾಂಗ ಬಂಧನ
ಒಂದೇ ದಿನ ಕಾಂಗ್ರೆಸ್ ಗೆ ಡಬಲ್ ಶಾಕ್! ಶಾಸಕ ಸ್ಥಾನಕ್ಕೆ ರಾಜಸ್ತಾನ ಸಿಎಂ ಆಪ್ತ ರಾಜೀನಾಮೆ
ರಾಜೀವ್ ಗಾಂಧಿ ಹತ್ಯೆ ಕೇಸ್ ಅಪರಾಧಿಯ ಬಿಡುಗಡೆ ‘ನೋವು ಮತ್ತು ನಿರಾಶದಾಯಕ’: ಕಾಂಗ್ರೆಸ್