Published
5 months agoon
By
Vanitha Jainಬೆಳಗಾವಿ, ಡಿಸೆಂಬರ್ 14 (ಯು.ಎನ್.ಐ): ವಿಧಾನ ಪರಿಷತ್ ಚುನಾವಣೆಯಲ್ಲಿ ರಾಜ್ಯ ಬಿಜೆಪಿ ಪಕ್ಷಕ್ಕೆ ಬಹುಮತ ಬರುವುದು ಖಚಿತ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನ ಮಂಡಲ ಅಧಿವೇಶನದಲ್ಲಿ ಬಂದ ಸಚಿವ ಈಶ್ವರಪ್ಪ ಮಾದ್ಯಮದವರೊಂದಿಗೆ ಮಾತನಾಡಿ, ‘ಇಂದು ನಡೆಯುತ್ತಿರುವ ವಿಧಾನ ಪರಿಷತ್ ನ ಮತ ಎಣಿಕೆಯಲ್ಲಿ ಫಲಿತಾಂಶ ನಡೆಯುತ್ತಿದ್ದೂ ಇದರಲ್ಲಿ ಭಾರತೀಯ ಜನತಾ ಪಾರ್ಟಿಗೆ ಬಹುಮತ ಖಂಡಿತ ದೊರೆಯಲಿದೆ. ಇದು ರಾಜ್ಯದ ಜನರ ಬಯಕೆಯೂ ಆಗಿದೆ, ಫಲಿತಾಂಶ ಪ್ರಕ್ರಿಯೆ ನಡೆಯುತ್ತಿದ್ದೂ ಬಿಜೆಪಿ ಅಭ್ಯರ್ಥಿಗಳು ಎಲ್ಲಾ ಕ್ಷೇತ್ರಗಳಲ್ಲೂ ಮುನ್ನಡೆಯನ್ನ ಕಾಯ್ದುಕೊಂಡಿದ್ದಾರೆ. ಈಗಾಗಲೆ ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಜಯಗಳಿಸುವುದರೊಂದಿಗೆ ಶುಭಾರಂಭವಾಗಿದೆ, ಈ ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಕನಿಷ್ಟ 15 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಲಿದ್ದೇವೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಮುಂದಿನ ವಿಧಾನ ಸಭೆಯಲ್ಲೂ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಮತ್ತೆ ಗದ್ದುಗೆ ಏರಲಿದ್ದೇವೆ ಎಂದರು,
ನಂತರ ಮಾತನಾಡಿದ ಅವರು ಬೆಳಗಾವಿಯಲ್ಲಿ ವಿಧಾನ ಮಂಡಲ ಅಧಿವೇಶನ ನಡೆಯುತ್ತಿದ್ದೂ ಎಂಇಎಸ್ ಪುಂಡಾಟಿಕೆ ಮುಂದುವರೆದಿದೆ. ಅವರಿಗೆ ಬೇರೆ ಕೆಲಸವಿಲ್ಲ ಎಂಇಎಸ್ ಬಂದ್ ಗೆ ಕರೆ ನೀಡಿದ್ದರೂ ಬೆಳಗಾವಿ ಜನ ಇದನ್ನ ತಿರಸ್ಕರಿಸಿದ್ದಾರೆ, ಎಂಇಎಸ್ ಕೂಡ ಜೀವಂತವಾಗಿದ್ದೇವೆ ಎಂದು ತೋರ್ಪಡಿಕೊಳ್ಳಲು ಈ ರೀತಿ ಮಾಡುತ್ತಿರುತ್ತದೆ ಎಂದು ಅವರು ತಿಳಿಸಿದರು.
ವಿಧಾನಪರಿಷತ್ ಚುನಾವಣೆಗೆ ನಾಳೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸಾಧ್ಯತೆ
ಬಬುಲ್ ಸುಪ್ರಿಯೋ ಬಳಿಕ ಬಂಗಾಳದಲ್ಲಿ ಬಿಜೆಪಿಗೆ ಮತ್ತೊಂದು ಶಾಕ್! ಟಿಎಂಸಿ ಸೇರಿದ ಬಿಜೆಪಿ ಸಂಸದ
ಕೇಂದ್ರವು ರೈತರನ್ನು ಕ್ರೀಡಾಂಗಣದಲ್ಲಿ ಜೈಲಿನಲ್ಲಿಡಲು ಬಯಸಿತ್ತು: ಸಿಎಂ ಕೇಜ್ರಿವಾಲ್
ರೈತರು ಸರ್ಕಾರಗಳನ್ನು ಉರುಳಿಸಬಹುದು: ಸಿಎಂ ಕೆಸಿಆರ್
ದುರಹಂಕಾರವಲ್ಲ… ಅದು ವಿಶ್ವಾಸ: ರಾಹುಲ್ ಗಾಂಧಿಗೆ ಸಚಿವ ಜೈಶಂಕರ್ ತಿರುಗೇಟು
ಸಂಪರ್ಕ ಕ್ರಾಂತಿಗೆ ನಾಂದಿ ಹಾಡಿದ ರಾಜೀವ್ ಗಾಂಧಿ