Connect with us


      
ಕರ್ನಾಟಕ

“ಬಿಜೆಪಿಯವ್ರು ಏನ್ ಕಡಿದು ಕಟ್ಟೆ ಹಾಕಿದ್ದಾರೆ” ಸಿದ್ದರಾಮಯ್ಯ

Iranna Anchatageri

Published

on

ಬೆಂಗಳೂರು : ಜನೆವರಿ 08 (ಯು.ಎನ್.ಐ.) ಬಿಜೆಪಿ ಎರಡೂವರೆ ವರ್ಷದಿಂದ ಏನ್ ಕಡಿದು ಕಟ್ಟಿ ಹಾಕಿದ್ದಾರೆಂದು ಲೆಕ್ಕ ಕೊಡಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಡಳಿತರೂಢ ಬಿಜೆಪಿ ಸರ್ಕಾರವನ್ನು ಕಟುವಾಗಿ ಟೀಕೆ ಮಾಡಿದ್ದಾರೆ.

ರಾಜ್ಯ ಸರ್ಕಾರ ರಾಮನಗರ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಗೆ ತಂದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಕೊರೊನಾ ನಿಯಮ ಪಾಲಿಸಿಯೇ ಪಾದಯಾತ್ರೆ ಮಾಡ್ತೀವಿ. ಮಾಸ್ಕ್, ಗ್ಲೌಸ್, ಸಾಮಾಜಿಕ ಅಂತರ ಕಾಪಾಡಿಕೊಂಡು ಪ್ರತಿಭಟನೆ ಮಾಡ್ತೀವಿ. ಏನ್ ಕ್ರಮ ತೆಗೆದುಕೊಳ್ತಾರೋ ತೆಗೆದುಕೊಳ್ಳಲಿ. ಏನೇ ಕ್ರಮ ತೆಗೆದುಕೊಂಡ್ರು ಫೇಸ್ ಮಾಡ್ತೀವಿ. ರೆಡಿ ಟು ಪೇಸ್. ಅರೆಸ್ಟ್ ಮಾಡ್ತಾರಾ ಮಾಡಲಿ. ಮೇಕೆದಾಟುವಿನಲ್ಲಿ 144 ಸೆಕ್ಷನ್ ಹಾಕಿದ್ರೆ, ಐದಾರು ಜನ ಹೋಗ್ತೀವಿ. ನಾವು ಪಾದಯಾತ್ರೆ ಅನೌನ್ಸ್ ಮಾಡಿದ ಮೇಲೆ ರೂಲ್ಸ್ ಮಾಡಿದ್ದು. ಇವರು ಬೇಕಂಥಲೇ ರಾಮನಗರಕ್ಕೆ ಮಾತ್ರ 144 ಸೆಕ್ಷನ್ ಹಾಕಿದ್ದಾರೆ ಎಂದು ಆರೋಪಿಸಿದರು.

ರಾಮನಗರಕ್ಕೆ ಮಾತ್ರ ಯಾಕೆ 144 ಸೆಕ್ಷನ್  ಹಾಕಿದ್ದಾರೆ? ರಾಮನಗರದಲ್ಲಿ ಎಲ್ಲಾ ಬಂದ್ ಯಾಕೆ ಮಾಡಿಸಿದ್ದಾರೆ? ಎಲ್ಲಾ ಕಡೆ ಜಾಸ್ತಿಯಾಗ್ತಾಯಿದೆ. ಇಲ್ಲ ಅಂತ ಹೇಳಲ್ಲ. ಆದ್ರೆ ಅವರು ಹೇಳಿದಂಗೆ ಇಲ್ಲ. ಕಾರಜೋಳ ಸುಳ್ಳು ಹೇಳ್ತಾಯಿದ್ದಾರೆ .ಎರಡೂವರೆ ವರ್ಷದಿಂದ ಯಾಕೆ ಏನ್ ಮಾಡಲಿಲ್ಲ. 2018 ರಲ್ಲಿ ಕೋರ್ಟ್ ನಲ್ಲಿ ಇತ್ಯರ್ಥ ಆಗಿದೆ. ತಮಿಳುನಾಡಿಗೆ ನೀರು ಕೊಡಬೇಕೆಂದು ಕೋರ್ಟ್ ಹೇಳಿತ್ತು. ಮಳೆ ಬರದೆ ಇದ್ದಾಗ ಕೊಡಬೇಕು ಅಂತ ಹೇಳಿದೆ. ಈಗ ಹೆಚ್ಚು ನೀರು ಸಮುದ್ರಕ್ಕೆ ಹೋಗ್ತಾಯಿದೆ. ಆ ನೀರನ್ನ ಏನ್ ಮಾಡಬೇಕು ಎಂದು ರಾಜ್ಯ ಸರ್ಕಾರವನ್ನುನು ಪ್ರಶ್ನೆ ಮಾಡಿದರು.

ಯಡಿಯೂರಪ್ಪ ಸಿಎಂ ಆಗಿದ್ದಾಗ ಯಾಕೆ ಮಾಡಲಿಲ್ಲ? ಬೊಮ್ಮಾಯಿ ಅಂದು ಜಲಸಂಪನ್ಮೂಲ ಸಚಿವರಾಗಿದ್ದರು. ಯಾಕೆ ಡಿಪಿಆರ್ ಮಾಡಿಸಲಿಲ್ಲ. ವಿಳಂಬ ದ್ರೋಹ ಆಗಿರೋದು ಬಿಜೆಪಿಯಲ್ಲಿ. ಸದ್ಯಕ್ಕೆ ಎಲ್ಲೂ ಸ್ಟೇ ಇಲ್ಲ. ಕೂತ್ಕೊಂಡು ಪರಿಸರ ಇಲಾಖೆಯಲ್ಲಿ ಪರ್ಮಿಷನ್ ಮಾಡಿಸಬೇಕು. ಎರಡೂವರೆ ವರ್ಷದಿಂದ ಪರಿಸರ ಇಲಾಖೆ ಪರ್ಮಿಷನ್ ತೆಗೆದುಕೊಂಡಿಲ್ಲ. ನಾವೇ ಡಿಪಿಆರ್ ಮಾಡಿಸಿದ್ದು. ಕೃಷ್ಣಾ ನೀರಾವರಿ ಯೋಜನೆಯಲ್ಲೂ ಬಿಜೆಪಿ ಸುಳ್ಳು ಹೇಳುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

Share