Connect with us


      




ವಿದೇಶ

ಆತ್ಮಾಹುತಿ ಬಾಂಬ್ ದಾಳಿ: ಯುವಕ ಸಾವು, 8 ಮಂದಿಗೆ ಗಾಯ

Vanitha Jain

Published

on

ಸಾಂದರ್ಭಿಕ ಚಿತ್ರ

ಮಾಸ್ಕೋ, ಡಿಸೆಂಬರ್ 13(ಯು.ಎನ್.ಐ) ಇಲ್ಲಿನ ಉಪನಗರದಲ್ಲಿನ ಮಠದ ಪ್ರವೇಶದ್ವರದಲ್ಲಿ ಯುವಕನೊಬ್ಬ ಬಾಂಬ್ ಸ್ಫೋಟಿಸಿಕೊಂಡ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದು, 8 ಮಂದಿ ಗಾಯಗೊಂಡಿದ್ದಾರೆ.

ದಾಳಿಕೋರ, ವಿವೆಡೆನ್ಸ್ಕಿ ವ್ಲಾಡಿಚ್ನಿ ಮಠದ ಆರ್ಥೊಡಾಕ್ಸ್ ಶಾಲೆಯ ಹಳೆಯ ವಿದ್ಯಾರ್ಥಿ. ಇತರೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ವೈಯಕ್ತಿಕ ಸಂಘರ್ಷದ ಕಾರಣ ಈ ದುಷ್ಕೃತ್ಯ ಎಸಗಿದ್ದಾನೆ.

ಬಾಂಬ್ ಕೋರ ಬೆಳಗಿನ ಪ್ರಾರ್ಥನೆಯ ಸಮಯದಲ್ಲಿ ಮಠದೊಳಗೆ ಸ್ಫೋಟಿಸಿಕೊಳ್ಳಲು ಯೋಜಿಸಿದ್ದನು. ಆದರೆ ಮಠದ ಹೊರಗೆ ಈ ಕರತ್ಯ ನಡೆದಿದೆ, ಮಠದ ಬಾಗಿಲು ಹಾನಿಗೊಂಡಿದೆ ಎಂದು ತಿಳಿದು ಬಂದಿದೆ.

Share