Connect with us


      




ಕರ್ನಾಟಕ

ಸಿಡಿಎಸ್ ಬಿಪಿಎನ್ ರಾವತ್ ಅವರ ಕೊಡುಗೆ ಸ್ಮರಿಸಿದ ಸಿಎಂ ಬಸವರಾಜ್ ಬೊಮ್ಮಾಯಿ

Iranna Anchatageri

Published

on

ಬೆಂಗಳೂರು, ಡಿ 9 (ಯುಎನ್ಐ) ಹೆಲಿಕಾಪ್ಟರ್ ಅಪಘಾತದಲ್ಲಿ ನಿನ್ನೆ ದುರ್ಮರಣಕ್ಕೀಡಾದ ಸಿಡಿಎಸ್ ಬಿಪಿಎನ್ ರಾವತ್ ಅವರು ದೇಶಕ್ಕೆ ನೀಡಿರುವ ಕೊಡುಗೆಯನ್ನು ಮುಖ್ಯಮಂತ್ರಿಗಳು ಇಂದು ಸ್ಮರಿಸಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಡಿಆರ್‌ಡಿಒ ಹಾಗೂ ಡಿಎಫ್ಆರ್‌ಎಲ್ ವತಿಯಿಂದ ಆಯೋಜಿಸಿದ್ದ ಸಶಸ್ತ್ರ ಪಡೆಗಳಿಗೆ ಆಹಾರ ಮತ್ತು ಲಾಜಿಸ್ಟಿಕ್ಸ್ ನೆರವು ಕುರಿತ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ಮೂರು ಪಡೆಯ ಮುಖ್ಯಸ್ಥರಾದಂತ ಬಿಪಿಎನ್ ರಾವತ್ ಅವರು ನಿನ್ನೆ ದುರ್ಮರಣ ಹೊಂದಿರುವುದು ಇಡೀ ದೇಶ ದುಃಖದಲ್ಲಿ ಮುಳುಗುವಂತೆ ಮಾಡಿದೆ. ಎಲ್ಲರನ್ನು ದಿಗ್ಬ್ರಾಂತಿಗೆ ಗುರಿ ಮಾಡಿರುವ ರಾವತ್ ಅವರ ಸಾವು, ನಂಬಲು ಅಸಾಧ್ಯವಾದ ಘಟನೆ. ಅದು ಏಕೆ ಆಯಿತು.. ಹೇಗೆ ಆಯಿತು ಅನ್ನುವಂತದ್ದು ಮುಖ್ಯವಾಗುತ್ತದೆ. ಈಗಾಗಲೇ ಏರಫೋರ್ಸ್ ತನಿಖೆ ಮಾಡಲು ಆದೇಶಿಸಿದೆ.


ರಾವತ್ ಅವರು, ದೊಡ್ಡ ವ್ಯಕ್ತಿ. ಸೈನ್ಯದ ಮುಂಚೂಣಿಯಲ್ಲಿ ನಿಂತು ಅವರು ಮುನ್ನಡೆಸಿದರು. ಯುದ್ಧ ಭೂಮಿಯಲ್ಲಿ ಹೊಸ ಹೊಸ ವಿಧಾನಗಳನ್ನು ಅವರು ಕಂಡುಕೊಂಡಿದ್ದರು. ಮತ್ತು ಅವುಗಳನ್ನು ಅನುಷ್ಠಾನಗೊಳಿಸಿದ್ದರು. ಭಾರತ ಶಸ್ತ್ರಾಸ್ತ್ರ ತಯಾರಿಕೆಯಲ್ಲಿ ಆತ್ಮ ನಿರ್ಭರ್ ಆಗಬೇಕೆನ್ನುವ ಹಂಬಲ ಬಹಳ ಇತ್ತು. ಅದರಂತೆ ಬಿಪಿಎನ್ ರಾವತ್ ಅವರ ಕಾಲದಲ್ಲಿ ಇಂಡಿಯಾನೈಸೇಷನ್ ಆರ್ಮ್ ಇಕ್ವಿಪ್ ಮೆಂಟ್ ಪ್ರಾರಂಭವಾಯಿತು. ಹಲವಾರು ಸಂಸ್ಥೆಗಳು ಆರಂಭಗೊಂಡವು. ಹೊಸ ಹೊಸ ಅವಿಷ್ಕಾರಗಳನ್ನು ಮಾಡಿ ಶಸ್ತ್ರಾಸ್ತ್ರಗಳನ್ನು ಸೇನೆಗೆ ಪೂರೈಕೆ ಮಾಡುವುದಷ್ಟೇ ಅಲ್ಲದೆ, ಖಾಸಗಿ ವಲಯದಲ್ಲೇ ಉತ್ಪಾದನೆಯಾಗಬೇಕೆನ್ನುವುದರ ಬಗ್ಗೆ ಪ್ರೋತ್ಸಾಹ ನೀಡಿದ್ದರು. ಭಾರತದ ಭದ್ರತೆಗಾಗಿ ಬಿಪಿಎನ್ ರಾವತ್ ಅವರು ಈ ಹಿಂದೆ ತೆಗೆದುಕೊಳ್ಳದ ರೀತಿಯಲ್ಲಿ ಹಲವು ದೃಢ ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ಉತ್ತರದ ಚೈನಾ ಗಡಿ ಭಾಗದಲ್ಲಿ ಚೀನಾವನ್ನು ಹಿಮ್ಮೆಟ್ಟಿಸುವಲ್ಲಿ ಬಿಪಿಎನ್ ರಾವತ್ ಯಶಸ್ವಿಯಾದರು. ಅವರ ನಾಯಕತ್ವದ ಇವತ್ತಿನ ದಿನಗಳಲ್ಲಿ ಅತ್ಯಂತ ಅವಶ್ಯಕ. ಪ್ರಧಾನ ಮೋದಿ ಅವರ ಸೇವೆಯನ್ನು ಗುರುತಿಸಿ ದೇಶದ ಸೇನೆಯ ಮುಖ್ಯಸ್ಥರನ್ನಾಗಿ ಮಾಡಿದ್ದರು. ಅಂತಹ ಮಹಾನ್ ವ್ಯಕ್ತಿಯನ್ನು ಕೇವಲ ಸೇನೆ ಅಷ್ಟೇ ಅಲ್ಲ, ಭಾರತೀಯರು ಕಳೆದುಕೊಂಡಿದ್ದಾರೆ. ಅವರ ಬದುಕಿನ ಜೀವನ ಚನರಿತ್ರೆ ದೇಶ ಹಾಗೂ ಮಕ್ಕಳಿಗೆ ಹೇಳಿಕೊಡುವಂತಹ ಕೆಲಸ ಆಗಬೇಕು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವಲ್ಲಿ ನಾವೆಲ್ಲ ಪ್ರಾಮಾಣಿಕವಾಗಿ ಕೆಲಸ ಮಾಡಬೇಕಾಗಿದೆ ಅಂತಾ ಸಿಎಂ ತಿಳಿಸಿದರು.
ಇನ್ನು ರಾವತ್ ಅವರು ಕರ್ನಾಟಕದ ಬಗ್ಗೆ ಹೊಂದಿದ್ದ ಅವಿನಾಭಾವ ಸಂಬಂಧದ ಬಗ್ಗೆ ಮುಖ್ಯಮಂತ್ರಿಗಳು ಮೆಲುಕು ಹಾಕಿದರು. ಬೆಂಗಳೂರು, ಕೊಡಗಿನ ಕಾರ್ಯಕ್ರಮಗಳಿಗೆ ರಾವತ್ ಅವರು ಆಗಮಿಸುತ್ತಿದ್ದರು. ಕೂಡಗಿನ ಜನರಲ್ ತಿಮ್ಮಯ್ಯ ಹಾಗೂ ಜನರಲ್ ಕರಿಯಪ್ಪ ಅವರನ್ನು ರಾವತ್ ಅವರು ಪ್ರೇರಣೆಯಾಗಿ ಸ್ವೀಕರಿಸಿದ್ದರು. ಅವರ ಬಗ್ಗೆ ಅಪಾರವಾದಂತ ಭಕ್ತಿ ಶ್ರದ್ಧೆಯನ್ನು ಬಿಪಿಎನ್ ಅವರು ಇಟ್ಟುಕೊಂಡಿದ್ದರು. ಇದು ಕರ್ನಾಟಕದಲ್ಲಿನ ಜನರು ಹಾಗೂ ಇಲ್ಲಿನ ಯೋಧರ ಬಗ್ಗೆ ರಾವತ್ ಅವರು ಒಳ್ಳೆಯ ಅಭಿಪ್ರಾಯ ಹೊಂದಿದ್ದರು ಅಂತಾ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸ್ಮರಿಸಿದರು.

Share