Connect with us


      




ವಿದೇಶ

ಯುಕೆಯಲ್ಲಿ ಬೂಸ್ಟರ್ ಡೋಸ್ ಬಿಕ್ಕಟ್ಟು

Iranna Anchatageri

Published

on

ಲಂಡನ್, ಡಿಸೆಂಬರ್ 15 (ಯು.ಎನ್.ಐ.) ಬ್ರಿಟನ್ ನಲ್ಲಿ ಒಂದೇ ದಿನದಲ್ಲಿ 2 ಲಕ್ಷಕ್ಕೂ ಹೆಚ್ಚು ಕರೊನಾ ಪ್ರಕರಣಗಳು ದಾಖಲಾಗಿವೆ. ಇದರಿಂದ ಇಂಗ್ಲೆಂಡ್ ನಲ್ಲಿ ಬೂಸ್ಟರ್ ಡೋಸ್ ಪಡೆಯಲು ಜನರು ಪೈಪೋಟಿ ನಡೆಸುತ್ತಿದ್ದಾರೆ.

ಯುಕೆಯ ಹೆಚ್ಚಿನ ಜನರು ಕ್ರಿಸ್ ಮಸ್ ಗೆ ಮೊದಲು ಮೂರನೇ ಡೋಸ್ ಪಡೆಯಲು ಇಚ್ಛೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಯುನೈಟೆಡ್ ಕಿಂಗ್ ಡಮ್ ನ್ಯಾಷನಲ್ ಹೆಲ್ತ್ ಸರ್ವಿಸ್ ವೆಬ್ ಸೈಟ್ ನಲ್ಲಿ ಒಂದು ದಿನದಲ್ಲಿ 44 ಲಕ್ಷ ಹೆಚ್ಚು ಜನರು ಡೋಸ್ ಗಾಗಿ ನೋಂದಣಿಗಾಗಿ ಪ್ರಯತ್ನ ಮಾಡಿದರು. ಆದರೆ, ಅವಕಾಶ ಸಿಕ್ಕಿದ್ದು ಮಾತ್ರ 5 ಲಕ್ಷ 45 ಸಾವಿರ ಜನರಿಗೆ ಮಾತ್ರ.

ಕ್ರಿಸ್ ಮಸ್ ಹಬ್ಬದ ಹಿನ್ನೆಲೆ ಬ್ರಿಟನ್‌ನಲ್ಲಿ ಬೂಸ್ಟರ್ ಡೋಸ್‌ಗೆ ಹೆಚ್ಚಿನ ಸಂಖ್ಯೆಯ ಜನರು ಅರ್ಜಿ ಸಲ್ಲಿಸುತ್ತಿದ್ದಾರೆ. ಇದರಿಂದ ಬೂಸ್ಟರ್ ಡೋಸ್ ಬಿಕ್ಕಟ್ಟು ಉದ್ಭವಿಸಿದೆ. ಬೆಳಗ್ಗೆಯಿಂದಲೇ ಆರೋಗ್ಯ ಕೇಂದ್ರಗಳ ಹೊರಗೆ ಉದ್ದನೆಯ ಸರತಿ ಸಾಲುಗಳು ಕಂಡು ಬರುತ್ತಿವೆ. ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಅಲ್ಲಿನ NHS ಮುಖ್ಯಸ್ಥರು, ಒಂದು ವಾರದಲ್ಲಿ 5 ಮಿಲಿಯನ್ ಬೂಸ್ಟರ್ ಡೋಸ್ ಗಳನ್ನು ಪೂರೈಸಲು ಸಾಧ್ಯವಿದೆ. ಆದರೆ ಈ ಬಗ್ಗೆ ಯಾವುದೇ ಭರವಸೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಒಮೈಕ್ರಾನ್ ಸೋಂಕಿತರ ಸಂಖ್ಯೆ ಎರಡ್ಮೂರು ದಿನಗಳಲ್ಲಿ ದ್ವಿಗುಣ

ಬೂಸ್ಟರ್ ಡೋಸ್ ನೋಂದಣಿಗಾಗಿ ಸಾವಿರಾರು ಮಂದಿ ಏಕಕಾಲದಲ್ಲಿ ವೆಬ್ ಸೈಟ್ ಗೆ ಲಾಗ್ ಇನ್ ಆಗಿದ್ದಾರೆ. ಇದರಿಂದ ವೆಬ್ ಸೈಟ್ ಕ್ರ್ಯಾಶ್ ಆಗಿದೆ ಎಂದು ಯುಕೆ ಆರೋಗ್ಯ ಕಾರ್ಯದರ್ಶಿ ತಿಳಿಸಿದರು. ಇನ್ನು ಆರೋಗ್ಯ ಇಲಾಖೆ ಪ್ರಕಾರ, ಒಮೈಕ್ರಾನ್ ರೂಪಾಂತರದ ಪ್ರಕರಣಗಳು ಎರಡು ಮೂರು ದಿನಗಳಲ್ಲಿ ದ್ವಿಗುಣಗೊಳ್ಳುತ್ತಿವೆ ಎಂದು ತಿಳಿಸಿದರು.

ಬ್ರಿಟಿಷ್ ಉಪ ಪ್ರಧಾನ ಮಂತ್ರಿ ಡೊಮಿನಿಕ್ ರಾಬ್ ಪ್ರಕಾರ, ಒಮೈಕ್ರಾನ್ ಸೋಂಕಿತ ಕನಿಷ್ಠ 250 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿಸೆಂಬರ್ 1 ರಂದು ಒಮೈಕ್ರಾನ್‌ನ ಮೊದಲ ಪ್ರಕರಣ ಇಂಗ್ಲೆಂಡ್ ನಲ್ಲಿ ದಾಖಲಾಯಿತು ಎಂದು ತಿಳಿಸಿದರು. ಡಿಸೆಂಬರ್ 13 ರವರೆಗೆ ಈ ಸಂಖ್ಯೆ 4,250 ದಾಟಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪ್ರತಿದಿನ ಒಂದು ಮಿಲಿಯನ್ ಬೂಸ್ಟರ್ ನೀಡುವ ಗುರಿ

ಒಮೈಕ್ರಾನ್ ಬೆದರಿಕೆಯ ಮಧ್ಯೆ, ಪ್ರಧಾನಿ ಬೋರಿಸ್ ಜಾನ್ಸನ್, ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ, ಒಮೈಕ್ರಾನ್ ನಿಂದ ಮೊದಲ ಸಾವು ದೃಢಪಟ್ಟಿದೆ. ಬಳಿಕ 1 ಮಿಲಿಯನ್‌ಗಿಂತಲೂ ಹೆಚ್ಚು ಜನರು ಬೂಸ್ಟರ್ ಡೋಸ್ ಪಡೆದುಕೊಂಡರು. ಕರೋನಾವನ್ನು ನಿಯಂತ್ರಿಸಲು ಬ್ರಿಟಿಷ್ ಸರ್ಕಾರವು ಪ್ರತಿದಿನ ಒಂದು ಮಿಲಿಯನ್ ಬೂಸ್ಟರ್ ಡೋಸ್ ಒದಗಿಸುವ ಗುರಿಯನ್ನು ಹೊಂದಿದೆ. ಆದರೆ ಇದುವರೆಗೆ ಅದು 6 ಲಕ್ಷದ ಗಡಿಯನ್ನು ದಾಟಿಲ್ಲ. ಡಿಸೆಂಬರ್ 31 ರ ಮೊದಲು ಎಲ್ಲಾ ಯುವಕರಿಗೆ ಬೂಸ್ಟರ್ ಲಸಿಕೆ ನೀಡುವುದಾಗಿ ಬೋರಿಸ್ ಜಾನ್ಸನ್ ತಿಳಿಸಿದ್ದರು. ಆದರೆ, 30 ವರ್ಷ ಮೇಲ್ಪಟ್ಟವರಿಗೆ ಮಾತ್ರ ಬೂಸ್ಟರ್ ಲಸಿಕೆಯನ್ನು ಬ್ರಿಟನ್ ನಲ್ಲಿ ನೀಡಲಾಗುತ್ತಿದೆ.

Share