Published
5 months agoon
By
Vanitha Jainಮುಂಬೈ, ಡಿಸೆಂಬರ್ 15(ಯು.ಎನ್.ಐ) ಬಾಲಿವುಡ್ ನಟ ರಣಬೀರ್ ಕಪೂರ್ ಅಭಿನಯದ ಬ್ರಹ್ಮಾಸ್ತ್ರ ಸಿನಿಮಾದ ಮೊದಲ ಮೋಷನ್ ಪೋಸ್ಟರ್ ಅನ್ನು ದೆಹಲಿಯ ವಿಶೇಷ ಸಭೆಯಲ್ಲಿ ರಿಲೀಸ್ ಆಗಿದೆ.
ಪೋಸ್ಟರ್ನಲ್ಲಿ ರಣಬೀರ್ ರೌದ್ರವತಾರದಲ್ಲಿ ಕಾಣಿಸಿಕೊಂಡಿದ್ದು, ರಣಬೀರ್ ತ್ರಿಶೂಲ ಹಿಡಿದು ನಿಂತಿದ್ದು, ಹಿಂದೆ ನೆರಳಿನ ರೂಪದಲ್ಲಿ ಶಿವ ತ್ರಿಶೂಲ ಹಿಡಿದು ನಿಂತತೆ ಇದು. ಇದರಲ್ಲಿ ಶಿವನ ಮತ್ತೊಂದು ರೂಪ ರಂಣಬೀರ್ ಕಪೂರ್ ಎಂಬ ರೀತಿಯಲ್ಲಿ ಭಾಸವಾಗುತ್ತಿದೆ.
ಪಾರ್ಟ್ ಒನ್ ಶಿವ ಎಂಬ ಶೀರ್ಷಿಕೆಯೊಂದಿಗೆ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, 2022ರ ಸೆಪ್ಟೆಂಬರ್ 9ರಂದು ಸಿನಿಮಾ ತೆರೆ ಕಾಣಲಿದೆ ಎಂದು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಭೂಮಿಯ ಮೇಲೆ ಮನುಕುಲಕ್ಕೆ ಗೊತ್ತಿಲ್ಲದ ಸಂಗತಿಯೊಂದು ನಡೆಯುತ್ತಿದೆ ಎಂಬ ರಣಬೀರ್ ಧ್ವನಿಯೊಂದಿಗೆ ತೆರೆದುಕೊಳ್ಳುವ ಮೋಷನ್ ಪೆÇೀಸ್ಟರ್, ನಟಿ ಅಲಿಯಾ ಭಟ್ ಧ್ವನಿಯೊಂದಿಗೆ ಮುಂದುವರೆದು ಸಿನಿಮಾದ ಬಗ್ಗೆ ಕುತೂಹಲವನ್ನು ಹುಟ್ಟಿಸಿದ್ದಾರೆ ನಿರ್ದೇಶಕ ಅಯನ್ ಮುಖರ್ಜಿ
ಕರಣ್ ಜೋಹರ್ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಅಲಿಯಾ ಭಟ್ ನಾಯಕಿ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಅಲಿಯಾ, ಇದು ನನಗೆ ಮುಖ್ಯವಾಗುವುದಿಲ್ಲ. ಇಡೀ ಭಾರತೀಯ ಸಿನಿಮಾಕ್ಕೆ ಮುಖ್ಯವಾದ ಸಿನಿಮಾವಾಗಲಿದೆ ಎಂದು ಹೇಳಿದ್ದಾರೆ.