Connect with us


      
ವಿದೇಶ

ಬ್ರಿಟನ್ ಬ್ಯುಟಿಗೆ ಸಿಗಲಿಲ್ಲ ಅಮೆರಿಕದ ವೀಸಾ! ಯಾಕೆ ಗೊತ್ತಾ?

Iranna Anchatageri

Published

on

ಲಂಡನ್ : ಜನೆವರಿ 08 (ಯು.ಎನ್.ಐ.) ಈ ಬಾರಿಯ ಜಾಗತಿಕ ಸೌಂದರ್ಯ ಸ್ಪರ್ಧೆಯಾದ ಮಿಸೆಸ್ ವರ್ಲ್ಡ್‌ ಅಮೆರಿಕದಲ್ಲಿ ಆಯೋಜನೆಗೊಂಡಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂದು ಕನಸು ಕಂಡಿದ್ದ ಬ್ರಿಟನ್ ಬ್ಯುಟಿಗೆ ಅಮೆರಿಕದ ಕಠಿಣ ನಿಯಮ ಕಣ್ಣೀರು ತರಿಸಿದೆ.

ಇಂಗ್ಲೆಂಡ್ ನಲ್ಲಿರುವ ಈಸ್ಟ್ ಯಾರ್ಕ್‌ಷೈರ್‌ನ ಹೆಸ್ಸೆಲ್ ನಿವಾಸಿಯಾಗಿರುವ 29 ವರ್ಷದ ಲೀನ್ ಕ್ಲೈವ್ ಮಿಸೆಸ್ ವರ್ಲ್ಡ್ ಫೈನಲ್‌ನಲ್ಲಿ ಬ್ರಿಟನ್‌ ಪ್ರತಿನಿಧಿಸಬೇಕಾಗಿತ್ತು. ವೃತ್ತಿಯಲ್ಲಿ ವೈದ್ಯರಾಗಿರುವ ಇವರು, ಪ್ರಸ್ತುತ ತರಬೇತಿ ಹಂತದಲ್ಲಿದ್ದಾರೆ. ಕ್ಲೈವ್ ನ  ಕುಟುಂಬಕ್ಕೆ ಯುಎಸ್‌ ಲಾಸ್ ವೇಗಾಸ್‌ಗೆ ಹೋಗಲು ಪರವಾನಗಿ ದೊರೆಯಿತು. ಆದರೆ, ಲೀನ್ ಕ್ಲೈವ್ ಸಿರಿಯಾದ ಡಮಾಸ್ಕಸ್‌ನಲ್ಲಿ ಜನಿಸಿದ ಕಾರಣ ವೀಸಾ ನಿರಾಕರಣೆ ಮಾಡಲಾಯಿತು ಎಂದು ಬಿಬಿಸಿ ನ್ಯೂಸ್ ವರದಿ ಮಾಡಿದೆ. ಆದಾಗ್ಯೂ, ಕ್ಲೈವ್ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಲು ಅಮೆರಿಕದ ಅಧಿಕಾರಿಗಳು ನಿರಾಕರಿಸಿದ್ದಾರೆ.

ಮದುವೆಯಾಗಿರುವ ಲೀನ್ ಕ್ಲೈವ್ 2013 ರಿಂದ UK ನಲ್ಲಿ ವಾಸ ಮಾಡುತ್ತಿದ್ದಾರೆ. ಇಂಗ್ಲಿಷ್ ಮಾತನಾಡಲು ಕಲಿತಿರುವ ಇವರು, ಮಹಿಳಾ ಸಮಾನತೆ ಮತ್ತು ನಿರಾಶ್ರಿತರ ಹಕ್ಕುಗಳಿಗಾಗಿ ಪ್ರಚಾರ ಮಾಡಿದ್ದಾರೆ. ಜನವರಿ 15ರಂದು ನಡೆಯಲಿರುವ 35ನೇ ವಾರ್ಷಿಕ ಮಿಸೆಸ್ ವರ್ಲ್ಡ್ ಈವೆಂಟ್‌ಗೆ ಹಾಜರಾಗಲು ನಿರ್ಧರಿಸಿದ್ದರು. ಈ ಸ್ಪರ್ಧೆಯಲ್ಲಿ ಕೇವಲ ಮಹಿಳಾ ಸ್ಪರ್ಧಿಗಳಿಗೆ ಮಾತ್ರ ಅವಕಾಶ ಇದ್ದು, 57 ರಾಷ್ಟ್ರಗಳ ಸ್ಪರ್ಧಿಗಳೊಂದಿಗೆ ಲೀನ್ ಕ್ಲೈವ್ ಭಾಗವಹಿಸಬೇಕಿತ್ತು.

ವೀಸಾ ಸಿಕ್ಕಿಲ್ಲ ಅಂದರೆ ಬ್ರಿಟನ್ ರಾಷ್ಟ್ರದ ಯಾವುದೇ ಪ್ರತಿನಿಧಿ ಈ ಸ್ಪರ್ಧೆಯಲ್ಲಿ ಭಾಗವಹಿಸಲ್ಲ ಎಂಬ ಅರ್ಥ ಬರುತ್ತದೆ. “ನಾನು ಬ್ರಿಟಿಷ್ ಪಾಸ್‌ಪೋರ್ಟ್‌ನೊಂದಿಗೆ ಅರ್ಜಿ ಸಲ್ಲಿಸಿದ್ದೇನೆ. ನಾನು ಯುಕೆಯನ್ನು ಪ್ರತಿನಿಧಿಸುತ್ತಿದ್ದೇನೆ ಮತ್ತು ನಾನು ಬ್ರಿಟಿಷ್ ಪ್ರಜೆಯಾಗಿದ್ದೇನೆ. ಆದರೆ ತಾನು ಯುಎಸ್‌ ಪ್ರವೇಶಿಸುವುದನ್ನು ನಿರ್ಬಂಧಿಸುತ್ತಾರೆ ಅಂತಾ ತಿಳಿದುಕೊಂಡಿರಲಿಲ್ಲ.” “ನನ್ನ ಪತಿ ಮತ್ತು ನನ್ನ ಹೆಣ್ಣು ಮಗುವಿಗೆ ವೀಸಾ ಸಿಕ್ಕಿತು. ಆದರೆ ತನ್ನ ಜನ್ಮ ಸ್ಥಳದಿಂದಾಗಿ ನಿರಾಕರಣೆ ಮಾಡಲಾಯಿತು” ಎಂದು ಕ್ಲೈವ್ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಸಿರಿಯಾದ ಮೇಲೆ ಕಠಿಣ ನಿಯಮ ಏಕೆ?

ಅಮೆರಿಕದ ವೆಬ್ ಸೈಟ್ ಪ್ರಕಾರ, “ ಭಯೋತ್ಪಾದನೆ ಪ್ರಾಯೋಜಿತ ದೇಶಗಳ ನಾಗರಿಕರು, ಅಮೆರಿಕರದ ವೀಸಾ ಪಡೆಯಬೇಕೆಂದರೆ ಕಾನ್ಸುಲರ್ ಅಧಿಕಾರಿಯೊಂದಿಗೆ ಸಂದರ್ಶನ ನಡೆಸಬೇಕು ಎಂದು ಯುಎಸ್ ಸರ್ಕಾರ ಹೇಳುತ್ತದೆ. ಅಂದರೆ, ಅಮೆರಿಕ ದೃಷ್ಟಿಯಲ್ಲಿ ಸಿರಿಯಾ ರಾಷ್ಟ್ರ ಭಯೋತ್ಪಾದನೆ ಪ್ರಾಯೋಜಿತ ರಾಷ್ಟ್ರವಾಗಿದೆ.

Share