Connect with us


      




ಕರ್ನಾಟಕ

2022-23ನೇ ಸಾಲಿನ ಬಜೆಟ್: ವಿಧಾನಸೌಧಕ್ಕೆ ಆಗಮಿಸಿ ವಿಕ್ಟರಿ ಸಿಂಬಲ್ ತೋರಿ ನಗೆ ಬೀರಿದ ಬಿಎಸ್ ವೈ

Vanitha Jain

Published

on

ಬೆಂಗಳೂರು: ಮಾರ್ಚ್ 04 (ಯು.ಎನ್.ಐ.) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಮಧ್ಯಾಹ್ನ 12.30ಕ್ಕೆ 2022-23ನೇ ಸಾಲಿನ ತಮ್ಮ ಚೊಚ್ಚಲ ಬಜೆಟ್ ಮಂಡನೆ ಮಾಡಲಿದ್ದು, ಈ ನಿಮಿತ್ತ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿಧಾನಸೌಧಕ್ಕೆ ಆಗಮಿಸಿದ್ದಾರೆ.

ಭಾರೀ  ಖುಷಿಯಿಂದ ವಿಧಾನ ಸೌಧಕ್ಕೆ ಬಂದ ಬಿಎಸ್ ವೈ ತಮ್ಮ ಹಳೆಯ ವಿಕ್ಟರಿ ಸಿಂಬಲ್ ತೋರಿ ನಗೆ ಬೀರಿದ್ದಾರೆ.

ಈಗಾಗಲೇ ರೇಸ್ ಕೋರ್ಸ್ ನಿವಾಸದಲ್ಲಿ ಹಣಕಾಸು ಇಲಾಖೆ ಅಧಿಕಾರಿಗಳು ಬೊಮ್ಮಾಯಿ ಅವರು ಬಜೆಟ್ ಮಂಡನೆ ಪ್ರತಿಯನ್ನು ತೆಗೆದುಕೊಂಡಿದ್ದಾರೆ. ಇನ್ನು ಬಜೆಟ್ ನಿಮಿತ್ತ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನ ಶ್ರೀಕಂಠೇಶ್ವರ ದೇವಸ್ಥಾನ ಹಾಗೂ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಇಂದು ವಿಶೇಷ ಪೂಜೆ ಸಲ್ಲಿಸಿ, ಸಮಸ್ತ ಕರ್ನಾಟಕದ ಜನತೆಯ ಹೆಸರಿನಲ್ಲಿ ಅರ್ಚನೆ ಮಾಡಿಸಲಾಯಿತು.

Share