Connect with us


      




ದೇಶ

ಬುಲ್ಡೋಜರ್ ಬಳಕೆ ಮಾಫಿಯಾ ವಿರುದ್ಧ ಇರಬೇಕೇ ಹೊರತು ಬಡವರ ಮೇಲಲ್ಲ: ಯೋಗಿ ಆದಿತ್ಯನಾಥ್

Lakshmi Vijaya

Published

on

ಲಖ್ನೋ: ಏಪ್ರಿಲ್ 08 (ಯು.ಎನ್.ಐ.) ಅಂಗಡಿಗಳು ಮತ್ತು ಬಡವರ ಗುಡಿಸಲುಗಳನ್ನು ಕೆಡವಲು ಬುಲ್ಡೋಜರ್‌ಗಳನ್ನು ಬಳಸದಂತೆ ನೋಡಿಕೊಳ್ಳಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬುಲ್ಡೋಜರ್‌ನ ಭಯವು ಮಾಫಿಯಾ ಮತ್ತು ಅಕ್ರಮ ವ್ಯವಹಾರ ನಡೆಸುವ ತಂಡಗಳ ಮೇಲೆ ಇರಬೇಕು. ಬುಲ್ಡೋಜರ್‌ ಪ್ರಯೋಗ ಅಕ್ರಮ ಆಸ್ತಿ ಧ್ವಂಸ, ವೃತ್ತಿಪರ ಮಾಫಿಯಾ, ಕ್ರಿಮಿನಲ್‌ಗಳ ಮೇಲೆ ಮಾತ್ರ ನಡೆಯಬೇಕು ಮತ್ತು ಯಾವುದೇ ಬಡವರ ಮೇಲಲ್ಲ ಎಂದು ಸಿಎಂ ಆದಿತ್ಯನಾಥ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಇದರ ಜೊತೆಗೆ ಅಪರಾಧ ಮತ್ತು ಅಪರಾಧಿಗಳ ಸಂಖ್ಯೆ ಕಡಿಮೆ ಮಾಡುವ ತಮ್ಮ ಸರ್ಕಾರದ ಸಂಕಲ್ಪವನ್ನು ಮಾಡಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಡವರು, ಅಳವಿನ ಅಂಚಿನಲ್ಲಿರುವವರು ಮತ್ತು ದೀನದಲಿತರ ಬಗ್ಗೆ ಸಂವೇದನಾಶೀಲರಾಗಿರಬೇಕಾದ ಅಗತ್ಯವನ್ನು ಒತ್ತಿ ಹೇಳಿದರು.

ಇದು ತಮ್ಮ ಸರ್ಕಾರದ ಮೂಲ ಮಂತ್ರವಾಗಿದ್ದು, ಎರಡನೇ ಇನ್ನಿಂಗ್ಸ್‌ನಲ್ಲೂ ಇದನ್ನೇ ಅನುಸರಿಸಲಾಗುವುದು. ಒಂದೆಡೆ ಬಡವರ ಕಲ್ಯಾಣ ಯೋಜನೆಗಳು ಜಾರಿಯಾಗುತ್ತಿದ್ದರೆ, ರಾಜ್ಯ ಸರ್ಕಾರ ಅಪರಾಧಿಗಳಿಗೆ ಲಗಾಮು ಹಾಕುವುದನ್ನು ಮುಂದುವರೆಸಿದೆ ಎಂದು ಸಿಎಂ ಯೋಗಿ ಹೇಳಿದ್ದಾರೆ.

Share