Connect with us


      




ಅಪರಾಧ

ಬುಲ್ಲಿ ಬಾಯಿ ಪ್ರಕರಣ: ಎಂಜಿನಿಯರಿಂಗ್ ವಿದ್ಯಾರ್ಥಿ ಬಂಧಿಸಿದ ಮುಂಬೈ ಪೊಲೀಸರು

Vanitha Jain

Published

on

ಬೆಂಗಳೂರು: ಜನವರಿ 04(ಯು.ಎನ್.ಐ)ಪ್ರಮುಖ ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಸಿಕೊಂಡು ಅತ್ಯಂತ ಅವಹೇಳನಕಾರಿಯಾಗಿ ಚಿತ್ರಿಸಿದ ವಿವಾದಾತ್ಮಕ ‘ಬುಲ್ಲಿ ಬಾಯಿ’ ಪ್ರಕರಣದಲ್ಲಿ ನಗರದ ಪ್ರಮುಖ ಎಂಜಿನಿಯರಿಂಗ್ ಕಾಲೇಜಿನ 21 ವರ್ಷದ ವಿದ್ಯಾರ್ಥಿ ವಿಶಾಲ್ ಕುಮಾರ್ ಎಂಬಾತನನ್ನು ಮುಂಬೈ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಕುಮಾರಸ್ವಾಮಿ ಲೇಔಟ್‍ನ ನಿವಾಸಿ ಕುಮಾರ್ ಅವರನ್ನು ಸೋಮವಾರ ಸಂಜೆ ಮುಂಬೈಗೆ ವಿಚಾರಣೆಗೆ ಕರೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಕುಮಾರ್ ಅವರನ್ನು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 153 (ಗಲಭೆ ಉಂಟು ಮಾಡುವ ಉದ್ದೇಶದಿಂದ ಪ್ರಚೋದನೆ), 509 (ಮಹಿಳೆಯರ ನಮ್ರತೆಯನ್ನು ಅವಮಾನಿಸುವುದು), 354 (ಯಾವುದೇ ಮಹಿಳೆಯ ಮೇಲೆ ದೌರ್ಜನ್ಯ ಅಥವಾ ಕ್ರಿಮಿನಲ್ ಬಲವನ್ನು ಬಳಸುವುದು) ಅಡಿಯಲ್ಲಿ ಬಂಧಿಸಲಾಗಿದೆ.

ಇದಕ್ಕೂ ಮುನ್ನ ಮಂಗಳವಾರ ಬೆಳಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಬುಲ್ಲಿ ಬಾಯಿ ಪ್ರಕರಣದಲ್ಲಿ ಮುಂಬೈ ಪೊಲೀಸರು ಬಂಧಿಸಿರುವ ಬಗ್ಗೆ ನಗರ ಪೊಲೀಸರಿಗೆ ಯಾವುದೇ ಮಾಹಿತಿ ಇಲ್ಲ. ಮುಂಬೈ ಪೊಲೀಸರು ನಮಗೆ ಮಾಹಿತಿ ನೀಡಿಲ್ಲ ಅಥವಾ ಯಾವುದೇ ಸಹಾಯವನ್ನು ಕೋರಿಲ್ಲ. ನಗರದಿಂದ ಬಂಧಿಸಿದ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಹೇಳಿದರು.

ತನ್ನ ಟ್ವಿಟರ್ ಮೂಲಕ ಅಸಹ್ಯಕರ ವಿಷಯವನ್ನು ಹಂಚಿಕೊಂಡ ಆರೋಪದ ಮೇಲೆ ಬೆಂಗಳೂರಿನ 21 ವರ್ಷದ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ ಮತ್ತು ಮುಂಬೈನ ಸೈಬರ್ ಪೊಲೀಸ್ ಠಾಣೆಯ ಅಧಿಕಾರಿಗಳು ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮುಂಬೈ ಪೊಲೀಸರು ಸೋಮವಾರ ಸಂಜೆ ತಿಳಿಸಿದ್ದಾರೆ.

ಜನವರಿ 1 ರಂದು, ಸಾಮಾಜಿಕ ಮಾಧ್ಯಮದಲ್ಲಿ ‘ಬುಲ್ಲಿ ಬಾಯಿ’ ಸುದ್ದಿ ಹರಡಿತು, ಇದು ಕಳೆದ ವರ್ಷ ಜುಲೈನಲ್ಲಿ ಹೊರಹೊಮ್ಮಿದ ‘ಸುಲ್ಲಿ ಡೀಲ್ಸ್’ ಅಪ್ಲಿಕೇಶನ್‍ನ ತದ್ರೂಪಿಯಾಗಿದ್ದು, ಪ್ರಮುಖ ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಟ್ಟುಕೊಂಡು ಆಕ್ಷೇಪಾರ್ಹ ರೀತಿಯಲ್ಲಿ ಚಿತ್ರಿಸಲಾಗುತ್ತದೆ.

ಪ್ಲಾಟ್‍ಫಾರ್ಮ್‍ನ ಡೆವಲಪರ್‍ಗಳು ಮತ್ತು ಅದನ್ನು ಆನ್‍ಲೈನ್‍ನಲ್ಲಿ ಹಂಚಿಕೊಂಡವರ ವಿರುದ್ಧ ಒಬ್ಬರು ದೂರು ಸಲ್ಲಿಸಿದ ನಂತರ ಮುಂಬೈ ಪೊಲೀಸರು ಎಫ್‍ಐಆರ್ ದಾಖಲಿಸಿ ಕಾರ್ಯನಿರ್ವಹಿಸಿದ್ದಾರೆ. ದೆಹಲಿ ಪೊಲೀಸರು ಆಕ್ಷೇಪಾರ್ಹ ವಿಷಯದ ಡೆವಲಪರ್ ಬಗ್ಗೆ ‘ಗಿಟ್‍ಹಬ್’ ಪ್ಲಾಟ್‍ಫಾರ್ಮ್‍ನಿಂದ ವಿವರಗಳನ್ನು ಕೇಳಿದ್ದಾರೆ ಮತ್ತು ಅದನ್ನು ನಿರ್ಬಂಧಿಸಲು ಮತ್ತು ತೆಗೆದುಹಾಕಲು ಟ್ವಿಟರ್‍ಗೆ ಕೋರಿದ್ದಾರೆ.

Share