Published
4 months agoon
By
UNI Kannadaಹೈದರಬಾದ್ : ಜನೆವರಿ 15 (ಯು.ಎನ್.ಐ.) ಬಾಲಿವುಡ್ ಇಂಡಸ್ಟ್ರಿಯಲ್ಲಿ ತೆಲುಗು ನಿರ್ದೇಶಕರ ಹವಾ ಜೋರಾಗಿದೆ. ನಿರ್ದೇಶಕ ರಾಜಮೌಳಿ ಸೃಷ್ಟಿಸಿದ ಪ್ಯಾನ್ ಇಂಡಿಯಾ ಇಂಡಸ್ರ್ಟಿಯನ್ನ ಈಗ ಎಲ್ಲರೂ ಬಹಳ ಕ್ರಮಬದ್ಧವಾಗಿ ಬಳಸಿಕೊಳ್ಳುತ್ತಿದ್ದಾರೆ. ಪುಷ್ಪ ಸಿನಿಮಾದ ಮೂಲಕ ಸುಕುಮಾರ್ ಕಂಪ್ಲೀಟ್ ಆ್ಯಕ್ಷನ್ ಸಿನಿಮಾ ಮಾಡಿದರೆ ಹೇಗಿರುತ್ತೆ ಎಂಬ ಸ್ಪಷ್ಟತೆ ಎಲ್ಲರಿಗೂ ಈಗಾಗಲೆ ಸಿಕ್ಕಿದೆ. ಈ ಸಿನಿಮಾ ನೋಡಿದ ಬಳಿಕ ಬಾಲಿವುಡ್ ನಾಯಕನಟ ಸುಕುಮಾರ್ ಗೂ ಕರೆ ಮಾಡಿ ಆಫರ್ ನೀಡಿದ್ದಾರೆ.
ಪುಷ್ಪ ಸಿನಿಮಾ ನೋಡಿದ ಬಾಲಿವುಡ್ ಆಕ್ಷನ್ ಹೀರೋ ಅಕ್ಷಯ್ ಕುಮಾರ್ ಕೂಡ ಸುಕುಮಾರ್ ಜೊತೆ ಸಿನಿಮಾ ಮಾಡಲು ಆಸಕ್ತಿ ತೋರಿದ್ದಾರೆ. ಇದೇ ವಿಚಾರವನ್ನ ಇತ್ತೀಚೆಗಷ್ಟೇ ಸುಕುಮಾರ್ ಬಹಿರಂಗವಾಗಿ ಹೇಳಿದ್ದರು. ಸುಕುಮಾರ್ ಗೆ ಅಕ್ಷಯ್ ಕುಮಾರ್ ಫೋನ್ ಮಾಡಿ ಚಿತ್ರ ಅದ್ಭುತವಾಗಿದೆ ಎಂದಿದ್ದರು ಮತ್ತು ನಿಮ್ಮ ಜೊತೆ ಸಿನಿಮಾ ಮಾಡಬೇಕೆಂದು ಹೇಳಿದ್ದರು ಎಂದು ನಿರ್ದೇಶಕ ಸುಕುಮಾರ್ ತಿಳಿಸಿದ್ದಾರೆ.
ಆರ್ಯ ಚಿತ್ರದ ಮೂಲಕ ಚಿತ್ರರಂಗಕ್ಕೆ ನಿರ್ದೇಶಕರಾಗಿ ಪರಿಚಿತರಾದ ಸುಕುಮಾರ್, ಸಿನಿಮಾರಂಗಕ್ಕೆ ಬರುವುದಕ್ಕೂ ಮುಂಚೆ ಲೆಕ್ಕದ ಮಾಸ್ಟರ್ ಆಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದರು. ಅವರು ಮೊದಲು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗುವ ಅವಕಾಶಕ್ಕಾಗಿ ಅನೇಕ ನಿರ್ದೇಶಕರ ಸುತ್ತ ಸುತ್ತಿದ್ದರು. ಆದರೆ ಯಾರು ಅವಕಾಶ ನೀಡಲೇ ಇಲ್ಲ. ಅಂತಿಮವಾಗಿ ದಿಲ್ ರಾಜು ಬ್ಯಾನರ್ ಅಡಿ ಸುಕುಮಾರ್ ಒಬ್ಬ ಒಳ್ಳೆಯ ನಿರ್ದೇಶಕ ಎಂಬ ವಿಶಿಷ್ಟ ಮನ್ನಣೆಯನ್ನು ಪಡೆದುಕೊಂಡರು.