Connect with us


      
ಕ್ರೀಡೆ

SA vs IND: “ಟೀಮ್ ಇಂಡಿಯಾ O D I ಉಪ ನಾಯಕನಾಗಿ ಜಸ್ಪ್ರೀತ್ ಬುಮ್ರಾ .. ಇದು ಅದ್ಭುತ ನಿರ್ಧಾರ”

UNI Kannada

Published

on

ಸೆಂಚುರಿಯನ್‌, ಜ 1(ಯುಎನ್‌ ಐ) – ದಕ್ಷಿಣ ಆಫ್ರಿಕಾ ವಿರುದ್ಧ ಸದ್ಯದಲ್ಲಿಯೇ ನಡೆಯಲಿರುವ ಮೂರು ಏಕದಿನ ಪಂದ್ಯಗಳ ಸರಣಿಗೆ ಬಿಸಿಸಿಐ ಶುಕ್ರವಾರ ತಂಡವನ್ನು ಪ್ರಕಟಿಸಿದೆ. ಗಾಯಗೊಂಡಿರುವ ರೋಹಿತ್ ಏಕದಿನ ಸರಣಿಯಿಂದ ಹೊರಗುಳಿದಿರುವ ಹಿನ್ನೆಲೆಯಲ್ಲಿ ಬಿ ಸಿ ಸಿ ಐ ಕೆ.ಎಲ್ ರಾಹುಲ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದೆ. ಅದೇ ರೀತಿ ತಂಡದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಅವರಿಗೆ ಉಪ ನಾಯಕತ್ವದ ಜವಾಬ್ದಾರಿ ವಹಿಸಿದೆ. ಈ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ.. ಬುಮ್ರಾ ಅವರನ್ನು ಉಪನಾಯಕರನ್ನಾಗಿ ನೇಮಿಸಿರುವ ಕ್ರಮ ಶ್ಲಾಘಿಸಿದ್ದಾರೆ. ಬುಮ್ರಾ ಅವರನ್ನು ನೇಮಿಸಿ ಬಿಸಿಸಿಐ ಅದ್ಭುತ ನಿರ್ಧಾರ ಕೈಗೊಂಡಿದೆ ಎಂದು ಅವರು ಕೊಂಡಾಡಿದ್ದಾರೆ.

“ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಜಸ್ಪ್ರೀತ್ ಬುಮ್ರಾ ಅವರನ್ನು ಉಪನಾಯಕರನ್ನಾಗಿ ನೇಮಿಸಿರುವುದು ತಮಗೆ ತುಂಬಾ ಸಂತೋಷವಾಗಿದೆ. ತಂಡದ ಉಪ ನಾಯಕತ್ವದ ಜವಾಬ್ದಾರಿ ನೀಡುವ ಮೂಲಕ ಬಿಸಿಸಿಐ ಆಯ್ಕೆಗಾರರು ಮತ್ತೊಮ್ಮೆ ಅದ್ಭುತ ನಿರ್ಧಾರ ಕೈಗೊಂಡಿದ್ದಾರೆ. ಬುಮ್ರಾಗೆ ಇದು ಮೊದಲ ಹೆಜ್ಜೆಯಾಗಿದ್ದು, ಈ ಅವಕಾಶವನ್ನು ಅವರು ಸೂಕ್ತವಾಗಿ ಬಳಸಿಕೊಳ್ಳಲಿದ್ದಾರೆ ಎಂದು ನಾನು ಭಾವಿಸಿದ್ದೇನೆ. ಆದರೆ ತಂಡದಲ್ಲಿ ಯುವ ಆಟಗಾರ ಶ್ರೇಯಸ್ ಅಯ್ಯರ್, ಐಪಿಎಲ್‌ ನಾಯಕರಾಗಿರುವ ಅನುಭವಿ ರಿಷಬ್ ಪಂತ್ ಇದ್ದರೂ ಆಯ್ಕೆಗಾರರು ಬುಮ್ರಾಗೆ ಒಲವು ತೋರಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗೆ ಭಾರತ ಏಕದಿನ ತಂಡ: ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್, ರುತು ರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ರಿಷಬ್ ಪಂತ್ (ವಿಕೆಟ್ ಕೀಪರ್), ಇಶಾಂತ್ ಕಿಶನ್, ; ಸುಂದರ್, ಬುಮ್ರಾ (ಉಪನಾಯಕ), ಭುವನೇಶ್ವರ್ ಕುಮಾರ್, ದೀಪಕ್ ಚಹಾರ್, ಪ್ರಸಿದ್‌ ಕೃಷ್ಣ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್

Share