Connect with us


      




ದೇಶ

ಬಂಧಿತ ಐಎಎಸ್ ಅಧಿಕಾರಿಯ ಮಗನ ಸಾವು; ಕೊಲೆಯೆಂದು ಕುಟುಂಬದ ಆರೋಪ, ಆತ್ಮಹತ್ಯೆ ಎಂದ ಖಾಕಿ

Lakshmi Vijaya

Published

on

ಚಂಡೀಗಢ: ಜೂನ್ 25 (ಯು.ಎನ್.ಐ.) ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಅಧಿಕಾರಿಯೊಬ್ಬರ ಪುತ್ರ ಗುಂಡೇಟಿನಿಂದ ಸಾವನ್ನಪ್ಪಿರುವ ಘಟನೆ ಶನಿವಾರ ಚಂಡೀಗಢದಲ್ಲಿ ನಡೆದಿದೆ. ಭಾರತೀಯ ಆಡಳಿತ ಸೇವೆಗಳ ಅಧಿಕಾರಿ ಸಂಜಯ್ ಪೊಪ್ಲಿ ಅವರ ಪುತ್ರ ಕಾರ್ತಿಕ್ ಪೊಪ್ಲಿ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳುತ್ತಿದ್ದರೆ, ಅವರ ಕುಟುಂಬವು ಅವನನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದೆ.

“ವಿಜಿಲೆನ್ಸ್ ತಂಡವು ಸಂಜಯ್ ಪೊಪ್ಲಿ ಅವರ ನಿವಾಸದಲ್ಲಿದೆ . ಸಂಜಯ್ ಪೊಪ್ಲಿ ಅವರ ಅವರ ಮಗ ಕಾರ್ತಿಕ್ ಪೊಪ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ಚಂಡೀಗಢದ ಎಸ್‌ಎಸ್‌ಪಿ ಕುಲದೀಪ್ ಚಹಲ್ ಹೇಳಿದ್ದಾರೆ. 27 ವರ್ಷದ ಯುವಕ ತನ್ನ ತಂದೆಯ ಪರವಾನಗಿ ಪಡೆದ ಬಂದೂಕಿನಿಂದ ಗುಂಡು ಹಾರಿಸಿಕೊಂಡಿದ್ದಾನೆ ಎಂದು ಎಸ್‌ಎಸ್‌ಪಿ ಕುಲದೀಪ್ ಚಹಲ್ ಹೇಳಿದ್ದಾರೆ.

ವಿಜಿಲೆನ್ಸ್ ತಂಡವು ವಿಚಾರಣೆಗಾಗಿ ಐಎಎಸ್ ಸಂಜಯ್ ಪೊಪ್ಲಿ ಅವರ ಮನೆಗೆ ಬಂದಿತ್ತು. ಈ ವೇಳೆ ಗುಂಡೇಟಿನ ಶಬ್ದ ಕೇಳಿಬಂತು. ಪರಿಶೀಲನೆಯ ನಂತರ, ಅವರ ಮಗ ಪರವಾನಗಿ ಪಡೆದ ಬಂದೂಕಿನಿಂದ ಗುಂಡು ಹಾರಿಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ ಎಂದು ಎಸ್ ಎಸ್ ಪಿ ಹೇಳಿದ್ದಾರೆ. ಆದರೆ ಸಂಜಯ್ ಪೊಪ್ಲಿ ಅವರ ಪತ್ನಿ ವಿಜಿಲೆನ್ಸ್ ತಂಡವು ನಮ್ಮ ಮಗನನ್ನು ಕೊಂದಿದೆ ಎಂದು ಆರೋಪಿಸಿದ್ದಾರೆ.

ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಕಾರ್ತಿಕ್ ಸಾವಿನ ಬಗ್ಗೆ ತಮ್ಮ ಆಘಾತವನ್ನು ವ್ಯಕ್ತಪಡಿಸಿದ್ದಾರೆ ಮತ್ತು ರಾಜ್ಯದಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಪಂಜಾಬ್‌ನ ನವನ್‌ಶಹರ್‌ನಲ್ಲಿ ಒಳಚರಂಡಿ ಪೈಪ್‌ಲೈನ್ ಹಾಕಲು ಟೆಂಡರ್‌ಗಳನ್ನು ತೆರವುಗೊಳಿಸಲು ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಸಂಜಯ್ ಪೊಪ್ಲಿ ಅವರನ್ನು ಬಂಧಿಸಲಾಗಿದೆ.

Share